Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!

By Suvarna News  |  First Published Dec 25, 2021, 2:48 AM IST

* ಸೋಶಿಯಲ್ ಮಿಡಿಯಾದಲ್ಲಿ ರಿಕ್ವೆಸ್ಟ್ ತೆಗೆದುಕೊಳ್ಳುವ ಮುನ್ನ ಎಚ್ಚರ
* ತಾನು ಹೇಳಿದಂತೆ ಕೇಳಲಿಲ್ಲ ಎಂಬ ಸಿಟ್ಟು
* ಮಹಿಳೆಯನ್ನು ವೇಶ್ಯೆ ಎಂದು ಚಿತ್ರಿಸಿ  ಪ್ರಚಾರ


ಹೈದರಾಬಾದ್ (ಡಿ. 25)  ತನ್ನ ಬೇಡಿಕೆಗೆ ಬಗ್ಗಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು  ಸೋಶಿಯಲ್ ಮೀಡಿಯಾ (Social Media) ಮೂಲಕ  ವೇಶ್ಯೆ ಎಂಬಂತೆ ಚಿತ್ರಿಸಿ ಕಾಟ ಕೊಟ್ಟಿದ್ದ ತೆಲಂಗಾಣದ ಕರೀಂನಗರದ 23 ವರ್ಷದ ವಿದ್ಯಾರ್ಥಿಯನ್ನು (Student)  ಬಂಧಿಸಲಾಗಿದೆ. ಮಹಿಳೆ  (Woman) ನೀಡಿದ ದೂರಿನ ಆಧಾರದ ಮೇಲೆ ಆರೋಪಿ  ಟಿ ಅಕ್ಷಿತ್ ಕೌಂಡಿನ್ಯ  ಎಂಬಾತನ ಬಂಧನವಾಗಿದೆ.

ರಾಚಕೊಂಡ ಸೈಬರ್ ಕ್ರೈಮ್  ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಇಸ್ಟಾಗ್ರ್ಯಾಮ್  ನಲ್ಲಿ ಮ,ಹಿಳೆ ಫಾಲೋ ಮಾಡುತ್ತಿದ್ದ ಯುವಕ ಮೆಸೇಜ್ ಗಳನ್ನು ಕಳಿಸಲು ಆರಂಭಿಸಿದ್ದಾನೆ. ಈತನ ಕಾಟದಿಂದ ಬೇಸತ್ತ ಮಹಿಳೆ ಆತನ ಬ್ಲಾಕ್ ಮಾಡಿದ್ದಾಳೆ. ಇದೇ ಸಿಟ್ಟಿಗೆ ಆಕೆಯ ಪೋಟೋ ಇಟ್ಟುಕೊಂಡು ಕಾಲ್ ಗರ್ಲ್ ಎಂಬಂತೆ ಬಿಂಬಿಸಿದ್ದ. ಪೇಕ್ ಖಾತೆ ಮಾಡಿಕೊಂಡು ಮಹಿಳೆ ಹೆಸರಿನಲ್ಲಿ ಸಂದೇಶ ರವಾನೆ ಮಾಡಿದ್ದ. ತನ್ನ ಸ್ನೇಹಿತರಿಗೂ ಫೇಕ್ ಖಾತೆ ಮೂಲಕ ರಿಕ್ವೆಸ್ಟ ಕಳಿಸಿದ್ದ.

Tap to resize

Latest Videos

undefined

ಇಷ್ಟು ಸಾಲದು ಎಂಬಂತೆ ಮಹಿಳೆಯ ಚಿತ್ರಗಖಳನ್ನು ಅಶ್ಲೀಲ ಚಿತ್ರಗಳೊಂದಿಗೆ ಮಾರ್ಪ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಈತನ ಕಾಟದಿಂದ ಬೇಸತ್ತ ಮಹಿಳೆ ಪೊಲೀಸ್ ಮೊರೆ ಹೋಗಿದ್ದಾರೆ. 

ತಮಿಳುನಾಡಿನಿಂದ ಕಳೆದ ತಿಂಗಳು ಇಂಥದ್ದೇ ಪ್ರಕರಣ ವರದಿಯಾಗಿತ್ತು. ತಿರುಚಿದ ಪೋಟೋ ಇಟ್ಟುಕೊಂಡು ಮಹಿಳೆಯೊಬ್ಬರನ್ನು ಬೆದರಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.

Blackmail : ಒಳಗೆ ಲೇಡಿ ಡಾಕ್ಟರ್ ಜತೆ ವಿದೇಶಿ ಬಾಯ್‌ಫ್ರೆಂಡ್,  ಹೊರಗೆ ಕೇಡಿ ಲೇಡಿ ಕಾಂಪೌಂಡರ್!

ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್:   ತೆಲಂಗಾಣದ ಹೈದರಾಬಾದ್‌ನ (Hyderabad) ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾಹಿತ(Woman) ಮಹಿಳೆಯ ಮೇಲೆ ಸಾಮೂಹಿಕ (Rape) ಅತ್ಯಾಚಾರವೆಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿತ್ತು. . ಮಹಿಳೆ ಬೇರೆ ಒಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.. ನಿನ್ನ ಅಕ್ರಮ ಸಂಬಂಧ ವಿಚಾರವನ್ನು ಕುಟುಂಬಕ್ಕೆ ತಿಳಿಸುತ್ತೇವೆ ಎಂದು ಬೆದರಿಕೆ ಹಾಕಿ ಕೃತ್ಯ ಎಸಗಿದ್ದರು.

ಈ ಘಟನೆ ಒಂದು ದಿನದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಶುಕ್ರವಾರ ಮಹಿಳೆ ದೂರು ದಾಖಲಿಸಿದ ನಂತರ ಇಡೀ ಪ್ರಕರಣದ ಅಂಶಗಳು ಬಹಿರಂಗವಾಗಿದೆ.

ಮಹಿಳೆ ಬಿಲ್ಡಿಂಗ್ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಳು. ಡಿ. 13  ರಂದು ತನ್ನ ಗೆಳೆಯನ ಭೇಟಿಗೆ ಮನೆಯಿಂದ ಹೊರಟಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ಬೆದರಿಕೆ ಹಾಕಿದ್ದಾರೆ. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡುತ್ತೇವೆ ಎಂದು ಹೆದರಿಸಿ ಅತ್ಯಾಚಾರ ಎಸಗಿದ್ದರು.

ಪುಣೆ ಪ್ರಕರಣ:  ಮಹಾರಾಷ್ಟ್ರದ ಪುಣೆಯ ಹಡಪ್ಸರ್‌ನ 25 ವರ್ಷದ  ಮಾಡೆಲ್ (Model) ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನನ್ನು ಲೈಂಗಿಕವಾಗಿ (Sexual Harassment)ಬಳಸಿಕೊಂಡಿದ್ದು ಅಲ್ಲದೇ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.  ರೂಪದರ್ಶಿಯ ದೂರು ಆಧರಿಸಿ ವಾರ್ಜೆ ಪೊಲೀಸರು ಚಲನಚಿತ್ರ (Bollywood)ನಿರ್ಮಾಪಕ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

click me!