* ಬಾಲಕಿಗೆ ಪ್ರೇಮ ಪತ್ರ ಬರೆದ ಶಿಕ್ಷಕ
* ರೊಚ್ಚಿಗೆದ್ದ ಗ್ರಾಮಸ್ಥರಿಂದ ತಲೆ ಬೋಳಿಸಿ ಮೆರವಣಿಗೆ
* ಎಂಟನೇ ತರಗತಿ ವಿದ್ಯಾರ್ಥಿನಿಗೆ ಲವ್ ಲೆಟರ್
ಝಾನ್ಸಿ(ಜೂ. 27) 12 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ ಆರೋಪದ ಮೇಲೆ ಉತ್ತರ ಪ್ರದೇಶದ ಖಾಸಗಿ ಶಾಲೆ ಶಿಕ್ಷಕರೊಬ್ಬರ ಮೇಲೆ ಹಲ್ಲೆ ಮಾಡಿ ಮುಖಕ್ಕೆ ಮಸಿ ಬಳಿದು ತಲೆ ಬೋಳಿಸಿ ಊರಿನ ತುಂಬಾ ಮೆರವಣಿಗೆ ಮಾಡಲಾಗಿದೆ.
ಝಾನ್ಸಿ ಜಿಲ್ಲೆಯ ಖೇರಿ ಗ್ರಾಮದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ವೈಭವ್ ನಾಯಕ್ (24) ರನ್ನು ಮೆರವಣಿಗೆ ಮಾಡಲಾಗಿದೆ. 8 ನೇ ತರಗತಿ ವಿದ್ಯಾರ್ಥಿನಿ 12 ವರ್ಷದ ಬಾಲಕಿಗೆ ಶುಕ್ರವಾರ ಲವ್ ಲೆಟರ್ ಬರೆದು ಕಳಿಸಿದ್ದಾರೆ ಎನ್ನುವುದು ದೊಡ್ಡ ಗಲಾಟೆಗೆ ಕಾರಣವಾಗಿದೆ.
ಮಾಜಿ ಬಾಯ್‌ಫ್ರೆಂಡ್ ಮದುವೆಯಾಬೇಕಿದ್ದವಳ ನಗ್ನ ಪೋಟೋ ಶೇರ್!
ತನ್ನೊಂದಿಗೆ ಪೋನ್ ನಲ್ಲಿ ಮಾತನಾಡಬೇಕು ಎಂದು ಬಾಲಕಿಗೆ ಒತ್ತಾಯ ಮಾಡುತ್ತಿದ್ದರು, ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.
ಈ ವಿಷಯ ತಿಳಿದ ಊರಿನವರು ಶಿಕ್ಷನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಹಿಂದೆಯೂ ಶಿಕ್ಷಕ ಬಾಲಕಿಯ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.