ಪ್ರವಾದಿ ಮುಹಮ್ಮದ್  ಕಾರ್ಟೂನ್ ತೋರಿಸಿದ ಶಿಕ್ಷಕನ ತಲೆ ಕಡಿದವ ಶೂಟೌಟ್!

By Suvarna News  |  First Published Oct 17, 2020, 5:09 PM IST

ಪ್ಯಾರೀಸ್ ನಲ್ಲಿ ಶಿಕ್ಷಕನ ಶಿರಚ್ಛೇದ/  ಬೆಚ್ಚಿ ಬೀಳಿಸಿದ ಪ್ರಕರಣ/ ಪ್ರವಾದಿ ಮುಹಮ್ಮದ್ ವ್ಯಂಗ್ಯಚಿತ್ರ  ಮಕ್ಕಳಿಗೆ ತೋರಿಸಿದ ಆರೋಪ/ ಜಿಹಾದಿಗಳ ದಾಳಿ ಎಂದ ಫ್ರಾನ್ಸ್ ಅಧ್ಯಕ್ಷ


ಪ್ಯಾರಿಸ್(ಅ. 17)   ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ  ಹೈಸ್ಕೂಲ್ ಶಿಕ್ಷಕರೊಬ್ಬರ ತಲೆ ಕತ್ತರಿಸಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ ಅವರ ಕ್ಯಾರಿಕೇಚರ್‌ಗಳನ್ನು ತೋರಿಸಿದ ಎಂಬ ಕಾರಣಕ್ಕೆ ಶಿಕ್ಷಕರ ತಲೆ ಕತ್ತರಿಸಲಾಗಿದೆ. ಇದನ್ನು ಫ್ರಾನ್ಸ್ ಅಧ್ಯಕ್ಷ ಇಮಾನ್ಯೂಲ್ ಮಾರ್ಕೊನ್  'ಇಸ್ಲಾಮಿಕ್ ಟೆರರ್ ಅಟ್ಯಾಕ್' ಎಂದು ಕರೆದಿದ್ದಾರೆ.

ಪ್ಯಾರಿಸ್‌ನ ವಾಯವ್ಯ ಭಾಗದ ಕಾನ್‌ಫ್ಲಾಸ್ ಸೈಂಟ್-ಹೊನೊರೈನ್ ಪ್ರದೇಶದ ಶಾಲೆಯ ಸಮೀಪ ಸಂಜೆ 5 ಗಂಟೆಗೆ ಈ ದಾಳಿ ನಡೆದಿದೆ. ಕೃತ್ಯ ಎಸಗಿದ ಶಂಕಿತನ ಮೇಲೆ ಪೊಲೀಸರು ಗುಂಡು ಹಾರಿದ್ದು ಆತ ಸಹ ಸಾವಿಗೀಡಾಗಿದ್ದಾನೆ. ಶಿಕ್ಷಕನ ಮೇಲೆ   ದಾಳಿ ಮಾಡಿದ ವ್ಯಕ್ತಿ ಅಬ್ದುಲ್ಲಾ ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಇದನ್ನು ಜಿಹಾದಿಗಳ ದಾಳಿ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಮಹೇಶ್ ಭಟ್-ಹೇಮಾಮಾಲಿನಿ ಇಸ್ಲಾಂ ಕಡೆ  ಹೋಗಿದ್ದೇಕೆ?

ಹೈಸ್ಕೂಲಿನಲ್ಲಿ ಭೂಗೋಳ ಮತ್ತು ಇತಿಹಾಸ ಶಿಕ್ಷಕರಾಗಿದ್ದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ಪಾಠದ ಭಾಗವಾಗಿ ವಿವರಿಸುವಾಗ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದ್ದರು. ಇದರ ವಿರುದ್ಧ ಅಲ್ಲಿನ ಪೋಷಕರು ದೂರು ನೀಡಿದ್ದರು. ಈ ಕಾರ್ಟೂನ್‌ಗಳನ್ನು ಪ್ರದರ್ಶಿಸುವ ಮುನ್ನ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ತರಗತಿಯಿಂದ ಹೊರಹೋಗುವಂತೆ ಹೇಳಿದ್ದರು ಎನ್ನಲಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

2015 ರಲ್ಲಿಯೂ ಫ್ರಾನ್ಸ್ ನಲ್ಲಿ ಇಂಥದ್ದೆ ಘಟನೆ ನಡೆದಿತ್ತು.  ವಿಡಂಬನೆ ವಿಚಾರಕ್ಕೆ ಒತ್ತು ಕೊಡುವ ಮ್ಯಾಗಜೀನ್ ನ ಚಾರ್ಲೇ ಹೆಬ್ಡೋ ಮೇಲೆ ಜಿಹಾದಿಗಳ ದಾಳಿಯಾಗಿತ್ತು.  ಈ ಘಟನೆಯಲ್ಲಿ ಹದಿನೇಳು ಜನ ಸಾವು ಕಂಡಿದ್ದರು. 

ನಾನು ನಿಮ್ಮ ಭಾವನೆಗಳಿಗೆ ನೋವುಂಟು ಮಾಡಲು ಬಯಸುವುದಿಲ್ಲ. ಹೀಗಾಗಿ ನೀವು ಹೊರಗೆ ಕ್ಲಾಸಿನಿಂದ ಹೊರಕ್ಕೆ  ಹೋಗಬಹುದು' ಎಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಶಿಕ್ಷಕ ತಿಳಿಸಿದ್ದರು ಎಂಬ ಮಾತು ಇದೆ. ಇನ್ನೊಂದು ಕಡೆ ಶಿಕ್ಷಕರು ಸರಳ ಮತ್ತು ಉತ್ತಮ ಅಭಿರುಚಿಯುಳ್ಳ ವ್ಯಕ್ತಿಯಾಗಿದ್ದರು ಎಂದು ಪೋಷಕರೊಬ್ಬರು  ತಿಳಿಸಿದ್ದಾರೆ.

click me!