ಡ್ರಗ್ಸ್‌ ಕೇಸಲ್ಲಿ ಜೈಲು ಸೇರಿದ ಪತಿಗೆ ಬೇಲ್‌ ಕೊಡಿಸಲು ಮಾದಕವಸ್ತು ಮಾರಾಟಕ್ಕಿಳಿದ ಪತ್ನಿ!

By Kannadaprabha News  |  First Published Jun 17, 2022, 5:34 AM IST

*  ತಾಂಜೇನಿಯಾ ಮೂಲದ ಮಹಿಳೆಯ ಬಂಧನ
*  ಪ್ರವಾಸಿ ವೀಸಾದಲ್ಲಿ ನಗರಕ್ಕೆ ಬಂದಿದ್ದ ದಂಪತಿ
*  2018ರಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ ಫಾತಿಮಾ ಒಮೇರಿ 


ಬೆಂಗಳೂರು(ಜೂ.17):  ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ಪತಿ ಬಿಡಿಸಲು ತಾನೂ ಕೂಡ ಡ್ರಗ್ಸ್‌ ದಂಧೆಗಿಳಿದಿದ್ದ ವಿದೇಶಿ ಮಹಿಳೆಯೊಬ್ಬಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹದೇವಪುರದ ನಿವಾಸಿ ಫಾತಿಮಾ ಒಮೇರಿ ಬಂಧಿತಳಾಗಿದ್ದು, ಆರೋಪಿಯಿಂದ .1.5 ಲಕ್ಷ ಮೌಲ್ಯದ 13 ಗ್ರಾಂ ಎಂಡಿ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಮ್ಮನಹಳ್ಳಿ ರಸ್ತೆ ಜಲವಾಯು ವಿಹಾರದ ಸಮೀಪದ ಡ್ರಗ್‌್ಸ ಮಾರಾಟಕ್ಕೆ ಬುಧವಾರ ಯತ್ನಿಸಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

Bengaluru Drug Racket: ಉಡ್ತಾ ಬೆಂಗಳೂರು ಆಗ್ತಿದ್ಯಾ ಸಿಲಿಕಾನ್ ಸಿಟಿ? ಕೇವಲ 15 ದಿನದಲ್ಲಿ 150 ಡ್ರಗ್ಸ್‌ ಕೇಸ್‌

ಆರೋಪಿ ಫಾತಿಮಾ ಮೂಲತಃ ತಾಂಜೇನಿಯಾ ದೇಶದವಳಾಗಿದ್ದು, 2018ರಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದಳು. ಬಳಿಕ ಬೆಂಗಳೂರಿಗೆ ಬಂದ ಆಕೆ, ಮಹದೇವಪುರದಲ್ಲಿ ವಾಸವಾಗಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಫಾತಿಮಾ ದಂಪತಿ ಡ್ರಗ್ಸ್‌ ದಂಧೆಗಿಳಿದಿದ್ದರು. ಕೆಲ ತಿಂಗಳ ಹಿಂದೆ ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಆಕೆಯ ಪತಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪತಿಗೆ ಜಾಮೀನು ಕೊಡಿಸಲು ಓಡಾಡುತ್ತಿದ್ದ ಫಾತಿಮಾ, ಇದಕ್ಕೆ ಅಗತ್ಯವಾದ ಖರ್ಚು ವೆಚ್ಚಗಳಿಗೆ ತಾನು ಸಹ ಡ್ರಗ್ಸ್‌ ದಂಧೆ ಶುರು ಮಾಡಿದ್ದಳು.
 

click me!