OTPನೂ ಬರಲ್ಲ, ಲಿಂಕೂ ಬರಲ್ಲ; ಜೇಬಲ್ಲಿದ್ದ ಮೊಬೈಲ್​ನಿಂದ್ಲೇ ಹಣ ಮಾಯ! ಕೂಡಲೇ ಈ ಸೆಟ್ಟಿಂಗ್​ ಆಫ್​ ಮಾಡಿ

Published : Sep 09, 2026, 05:46 PM IST
Mobile Scam

ಸಾರಾಂಶ

ಡಿಜಿಟಲ್ ಯುಗದಲ್ಲಿ ಹೊಸ ಮಾದರಿಯ ಸ್ಕ್ಯಾಮ್‌ವೊಂದು ಬೆಳಕಿಗೆ ಬಂದಿದೆ. ವಂಚಕರು ಜನನಿಬಿಡ ಪ್ರದೇಶಗಳಲ್ಲಿ ನಿಮ್ಮ ಮೊಬೈಲ್‌ನ NFC ವೈಶಿಷ್ಟ್ಯವನ್ನು ಬಳಸಿ, ನಿಮಗೆ ತಿಳಿಯದಂತೆ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುತ್ತಿದ್ದಾರೆ. ಈ ವಂಚನೆಯಿಂದ ಪಾರಾಗಲು ನಿಮ್ಮ ಮೊಬೈಲ್‌ನಲ್ಲಿ NFC ಆಯ್ಕೆಯನ್ನು ಆಫ್ ಮಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಮೋಸ ಹೋಗುವವರು ಎಚ್ಚರವಾಗುತ್ತಿದ್ದಂತೆಯೇ, ಮೋಸ ಮಾಡುವವರು ಇನ್ನೊಂದು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಅದರಲ್ಲಿಯೂ ಈ ಡಿಜಿಟಲ್​ ಯುಗದಲ್ಲಿ, ಮೋಸ ಮಾಡುವುದು ಸಿಕ್ಕಾಪಟ್ಟೆ ಸುಲಭವಾಗಿಬಿಟ್ಟಿದೆ. ಜೇಬಲ್ಲಿ ಹಣ ಇಲ್ಲದಿದ್ದರೆ ಏನಂತೆ, ಮೊಬೈಲ್​ ಅಂತೂ ಎಲ್ಲರ ಬಳಿಯೂ ಇದ್ದೇ ಇರತ್ತಲ್ಲ. ಅದೇ ಈಗ ಈ ಹೊಸ ಸ್ಕ್ಯಾಮ್​ ಮಾಡುವವರ ಬಂಡವಾಳ. ನಿಮ್ಮ ಜೇಬಿನಲ್ಲಿ ಮೊಬೈಲ್​ ಇದ್ದರೆ ಸಾಕು, ನಿಮಗೆ ಗೊತ್ತಿಲ್ಲದಂತೆಯೇ ಬ್ಯಾಂಕ್​ನಲ್ಲಿ ಇರುವ ಹಣ ಯಾಮಾರಿ ಹೋಗುತ್ತದೆ.

ಆನ್​ಲೈನ್​ ಫ್ರಾಡ್​, ಸೈಬರ್​ ಕ್ರೈಂ ಎಂದರೆ ಇಲ್ಲಿಯವರೆಗೆ ನೀವು ನಿಮ್ಮ ಮೊಬೈಲ್​ಗೆ ಏನೋ ಲಿಂಕ್​ ಬಂದಿರುತ್ತೆ, ಅದನ್ನು ಕ್ಲಿಕ್​ ಮಾಡಬಾರದು, ಎಪಿಕೆ ಫೈಲ್​ ಕ್ಲಿಕ್​ ಮಾಡಿದ್ರೆ ಹಣ ಹೋಗತ್ತೆ, ಬಂದಿರುವ ಓಟಿಪಿಯನ್ನು ಯಾರ ಜೊತೆಗಾದ್ರೂ ಶೇರ್​ ಮಾಡಿದ್ರೆ ಬ್ಯಾಂಕ್​ ಅಕೌಂಟ್​ ಖಾಲಿಯಾಗತ್ತೆ, ಫೋನ್​ ಹ್ಯಾಕ್​ ಆದ್ರೆ ದುಡ್ಡು ಹೋಗತ್ತೆ... ಇವೆಲ್ಲವೂ ಕೇಳಿರುತ್ತೀರಿ. ಆದರೆ ಈ ಫ್ರಾಡ್​ ಆ ರೀತಿ ಅಲ್ಲ, ಇದ್ಯಾವುದೂ ನಿಮಗೆ ಬರಲ್ಲ. ಆದರೆ ಜೇಬಿನಲ್ಲಿ ಮೊಬೈಲ್​ ಇದ್ದರೆ ಸಾಕು, ಒಂದು ಮಷಿನ್​ ತಂದು, ಜನ ನಿಬಿಡ ಪ್ರದೇಶದಲ್ಲಿ ನಿಮ್ಮ ಜೇಬಿನ ಬಳಿ ಅದನ್ನು ಹಿಡಿದರೆ, ಅಲ್ಲಿರುವ ಮೊಬೈಲ್​ನಿಂದ ನಿಮ್ಮ ಬ್ಯಾಂಕ್​ ಅಕೌಂಟ್​ನಲ್ಲಿರೋ ಹಣ ಖತಂ!

ಪೊಲೀಸರ ಎಚ್ಚರಿಕೆ

ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ ಮೊಬೈಲ್​ ಫೋನ್​ನಲ್ಲಿ ಇರುವ NFC ಆಪ್ಷನ್​. ಇದರ ಸಹಾಯದಿಂದಲೇ ಸ್ಕ್ಯಾಮ್​ ಮಾಡುವವರು ಸುಲಭದಲ್ಲಿ ಹಣವನ್ನು ಯಾಮಾರಿಸುತ್ತಿರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. NFC ಎಂದರೆ ನಿಯರ್ ಫೀಲ್ಡ್ ಕಮ್ಯುನಿಕೇಷನ್. ಇದು ಒಂದು ಅಲ್ಪ-ಶ್ರೇಣಿಯ ವೈರ್‌ಲೆಸ್ ತಂತ್ರಜ್ಞಾನವಾಗಿದ್ದು, ಇದು ನಿಮ್ಮ ಮೊಬೈಲ್ ಫೋನ್ ಅನ್ನು ಮತ್ತೊಂದು ಸಾಧನ ಅಥವಾ ರೀಡರ್‌ನೊಂದಿಗೆ ಸಣ್ಣ ಪ್ರಮಾಣದ ಡೇಟಾವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅವುಗಳನ್ನು ಬಹಳ ಹತ್ತಿರದಲ್ಲಿ ಇರಿಸಿದಾಗ - ಸಾಮಾನ್ಯವಾಗಿ 4 ಸೆಂಟಿಮೀಟರ್‌ಗಳ ಒಳಗೆ (1.5 ಇಂಚುಗಳು). ಆದರೆ ಇದನ್ನೇ ಬಳಸಿಕೊಂಡು ಈಗ ವಂಚನೆ ಮಾಡಲಾಗುತ್ತಿದೆ.

ಇಲ್ಲಿದೆ ಮಾಹಿತಿ

ಹಾಗಿದ್ದರೆ ಇದರಿಂದ ಪಾರಾಗಲು ಏನು ಮಾಡಬೇಕು ಎನ್ನುವ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗಿದೆ.

ಮೊದಲು ಮೊಬೈಲ್​ ಸೆಟ್ಟಿಂಗ್ಸ್​ಗೆ ಹೋಗಿ ಅಲ್ಲಿ Connection ಸಿಕ್ಕರೆ ಅದರ ಮೇಲೆ ಕ್ಲಿಕ್​ ಮಾಡಿ

ಆ ಬಳಿಕ NFC and contactless Payment ಆಪ್ಷನ್​ ಸಿಗುತ್ತದೆ. ಅದು ಆನ್​ ಇದ್ದರೆ ಆಫ್​ ಮಾಡಿ ಸೇಫ್​ ಆಗಿರಿ.

ಒಂದು ವೇಳೆ ನಿಮ್ಮ ಫೋನ್​ನಲ್ಲಿ ಇಲ್ಲಿ ಸಿಗದೇ ಹೋದರೆ, ಸೆಟ್ಟಿಂಗ್ಸ್​ನಲ್ಲಿ More Connectivity Option ಕ್ಲಿಕ್ ಮಾಡಿದರೆ ಸಿಗುತ್ತದೆ.

ರೆಡ್​ಮೀನ ಕೆಲವು ಮಾಡೆಲ್​ ಸೇರಿದಂತೆ ಕೆಲವು ಫೋನ್​ಗಳಲ್ಲಿ ಈ ಆಪ್ಷನ್​ ಇಲ್ಲ. ಆದ್ದರಿಂದ ನೀವು ನೆಮ್ಮದಿಯಿಂದ ಇರಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ತಡರಾತ್ರಿವರೆಗೂ ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಿದ್ದ ಹೆಂಡತಿ; ಕೋಪದಿಂದ ನೀಚ ಕೆಲಸ ಮಾಡಿದ ಗಂಡ
My Cute Wife ಚಾಟ್ ನಿಂದ ಬಯಲಾಯ್ತು ರಹಸ್ಯ – ನಾಪತ್ತೆಯಾದ ವಿವಾಹಿತ ಸ್ನೇಹಿತೆಯರು ಮದುವೆಯಾದ್ರಾ !