ಶಿರಾಡಿ: ಟ್ಯಾಂಕರ್‌ ಚಾಲಕನಿಗೆ ಹಲ್ಲೆಗೈದು ನಗದು ದರೋಡೆ

By Kannadaprabha News  |  First Published Jun 11, 2023, 3:10 PM IST

ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಗಡಿ ದೇವಸ್ಥಾನದ ಸಮೀಪ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಟ್ಯಾಂಕರ್‌ ಚಾಲಕನಿಗೆ ಹಲ್ಲೆ ನಡೆಸಿ ಚಾಲಕನಿಂದ ನಗದು ಸಹಿತ ದಾಖಲೆ ಪತ್ರಗಳನ್ನು ದೋಚಿದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.


ಉಪ್ಪಿನಂಗಡಿ (ಜೂ.11): ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಗಡಿ ದೇವಸ್ಥಾನದ ಸಮೀಪ ಕಾರಿನಲ್ಲಿ ಬಂದ ದರೋಡೆಕೋರರ ತಂಡ ಟ್ಯಾಂಕರ್‌ ಚಾಲಕನಿಗೆ ಹಲ್ಲೆ ನಡೆಸಿ ಚಾಲಕನಿಂದ ನಗದು ಸಹಿತ ದಾಖಲೆ ಪತ್ರಗಳನ್ನು ದೋಚಿದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.

ಸುರತ್ಕಲ್‌ ಕಡಂಬೋಡಿ ಮನೆ ನಿವಾಸಿ, ಟ್ಯಾಂಕರ್‌ ಚಾಲಕ ಆಸ್ಕರ್‌ ವಿನ್ಸೆಂಟ್‌ ಸೋನ್ಸ್‌ (61) ಹಲ್ಲೆಗೊಳಗಾದವರು. ಹಲ್ಲೆಯಿಂದ ಕೈ, ಬಾಯಿ ಹಾಗೂ ಕಣ್ಣಿಗೆ ಹಾನಿಯಾಗಿದ್ದು, ಅವರ ಪರ್ಸ್‌ ನಲ್ಲಿದ್ದ 6000 ರು. ನಗದನ್ನು ದರೋಡೆಕೋರರು ಎಗರಿಸಿದ್ದಾರೆ.

Tap to resize

Latest Videos

undefined

 

ಟೋ ಚಾಲಕನ ಮನೆಯಲ್ಲಿ ದರೋಡೆ ಮಾಡಿಸಿದ ಗೆಳೆಯ: ಮೂವರ ಬಂಧನ

ಮಂಗಳೂರಿನ ಕೂಳೂರಿನಿಂದ ಡಾಮರ್‌ ತುಂಬಿದ ಟ್ಯಾಂಕರನ್ನು ಸಹಾಯಕ ತೌಷಿಪ್‌ನೊಂದಿಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ವೇಳೆ ಖಾಸಗಿ ಬಸ್ಸೊಂದರಿಂದ ಇಳಿದ ವ್ಯಕ್ತಿಯೊಬ್ಬ ಟ್ಯಾಂಕರ್‌ ನಿಲ್ಲಿಸಲು ಸೂಚಿಸಿದ್ದಾನೆ. ನಿಲ್ಲಿಸಲು ನಿರಾಕರಿಸಿದಾಗ ಕೆಎ19ಎಂಇ 7353 ನಂಬರ್‌ ಪ್ಲೇಟ್‌ ಅಳವಡಿಸಿದ್ದ ಫಾರ್ಚೂನರ್‌ ಕಾರೊಂದನ್ನು ಅದರ ಚಾಲಕ ನಮ್ಮ ಟ್ಯಾಂಕರ್‌ಗೆ ಅಡ್ಡವಾಗಿ ನಿಲ್ಲಿಸಿದ. ಆಗ ಕಾರಿನಲ್ಲಿದ್ದ ಮೂವರು ಬಂದು ಟ್ಯಾಂಕರ್‌ ಕ್ಯಾಬಿನ್‌ ಒಳಗೆ ಪ್ರವೇಶಿಸಿ ನನ್ನಲ್ಲಿದ್ದ 6000 ರು. ಹಣ ಇದ್ದ ಪರ್ಸನ್ನು , ವಾಹನಾ ಚಾಲನಾ ಪರವಾನಗಿ ಸಹಿತ ಟ್ಯಾಂಕರ್‌ ದಾಖಲೆಗಳನ್ನು , ಬಿಲ್‌ಗಳನ್ನು ಕಿತ್ತುಕೊಂಡಿದ್ದಲ್ಲದೆ, ನನ್ನನ್ನು ಟ್ಯಾಂಕರ್‌ನಿಂದ ಕೆಳಗೆ ಎಳೆದು ಹಲ್ಲೆ ನಡೆಸಿದ್ದಾರೆಂದು ಆಸ್ಕರ್‌ ವಿನ್ಸೆಂಟ್‌ ಸೋನ್ಸ್‌ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೈಕ್‌ ಸವಾರನ ಮೇಲೆ ಹಲ್ಲೆ ಮಾಡಿ ಸುಲಿಗೆ

ಕಲ​ಬು​ರ​ಗಿ: ಬೈಕ್‌ ಸವಾರನ ಅಡ್ಡಗಟ್ಟಿಹಲ್ಲೆ ನಡೆಸಿ 38,800 ರು. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ನಗರದ ಹಾಗರಗಾ ಕ್ರಾಸ್‌ ಬಳಿ ನಡೆದಿದೆ. ಕಾಳಗಿ ತಾಲೂಕಿನ ಹೆಬ್ಬಾಳ ಗ್ರಾಮದ ಅಣವೀರ ಮಲ್ಲಪ್ಪ ದೀವಟಗಿ ಎಂಬುವವರ ಮೇಲೆಯೇ ಹಲ್ಲೆ ನಡೆಸಿ ಮೊಬೈಲ್‌, ನಗದು ಹಣ ಮತ್ತು ಬೆಳ್ಳಿಯ ಬ್ರಾಸ್‌ ಲೇಟ್‌ ದೋಚಲಾಗಿದೆ. ಅಣವೀರ ದೀವಟಗಿ ಅವರು ಬೈಕ್‌ ಮೇಲೆ ಹೆಬ್ಬಾಳದಿಂದ ಕಲಬುರಗಿಗೆ ಆಗಮಿಸಿ ಹುಮನಾಬಾದ ರಿಂಗ್‌ ರೋಡ್ನಲ್ಲಿರುವ ಅವರ ಸೋದರ ಮಾವ ಶಿವಕುಮಾರ ಮರ್ತೂರಕರ್‌ ಅವರನ್ನು ಭೇಟಿಯಾಗಿ ಮರಳಿ ಹೆಬ್ಬಾಳಗೆ ಹೊರಟಿದ್ದರು.

 

ದಾವಣಗೆರೆ ದರೋಡೆ ಪ್ರಕರಣ: ಐವರ ಬಂಧನ ₹10ಲಕ್ಷ ಸ್ವತ್ತು ಜಪ್ತಿ

ಈ ವೇಳೆ ಬೈಕ್‌ ಮೇಲೆ ಬಂದ ಇಬ್ಬರು ಅಪರಿಚಿತರು ರಫಿಕ್‌ ಚೌಕ್‌ ಹತ್ತಿರ ಅವರನ್ನು ಅಡ್ಡಗಟ್ಟಿದ್ದಾರೆ. ಅದರಲ್ಲಿ ಒಬ್ಬ ಹಾಗರಗಾ ಕ್ರಾಸ್ವರೆಗೆ ಡ್ರಾಪ್‌ ನೀಡುವಂತೆ ಕೇಳಿದ್ದಾನೆ. ಆಗ ಅಣವೀರ ದೀವಟಗಿ ಅವರು ಹಾಗರಗಾ ಕ್ರಾಸ್ವರೆಗೆ ಆತನಿಗೆ ಡ್ರಾಪ್‌ ನೀಡಿದ್ದಾರೆ. ಬೈಕ್‌ ಮೇಲೆ ಹಿಂದೆಯೇ ಬಂದ ಇನ್ನೊಬ್ಬ ಮತ್ತು ಡ್ರಾಪ್‌ ಕೇಳಿದ ವ್ಯಕ್ತಿ ಸೇರಿ ಅಣವೀರ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ 20 ಸಾವಿರ ರು. ಮೌಲ್ಯದ ಮೊಬೈಲ…, 400 ರು.ನಗದು, 2,400 ರು. ಮೌಲ್ಯದ 40 ಗ್ರಾಂ. ಬೆಳ್ಳಿಯ ಬ್ರಾಸ್ಲೇಟ್‌ ಮತ್ತು ಅಣವೀರ ಅವರ ತಂದೆಯ ಹೆಸರಿನಲ್ಲಿದ್ದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಎಟಿಎಂ ಕಾರ್ಡ್‌ ಕಸಿದುಕೊಂಡಿದ್ದಾರೆ. ನಂತರ ಅಣವೀರ ಅವರನ್ನು ಹೆದರಿಸಿ ಎಟಿಎಂನ ಪಿನ್‌ ನಂರ್ಬ ಪಡೆದಿದ್ದಾರೆ. ತದನಂತರ ಎಟಿಎಂನಿಂದ 16 ಸಾವಿರ ಡ್ರಾ ಮಾಡಿದ್ದಾರೆ. ಈ ಬಗ್ಗೆ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

click me!