Dharwad crime: ಸಾರ್ವಜನಿಕರೇ ಗಸ್ತು ತಿರುಗಿ ಕಳ್ಳರನ್ನು ಹಿಡಿದರು!

By Kannadaprabha News  |  First Published Jun 11, 2023, 11:56 AM IST

ಕಳೆದ ಹಲವು ದಿನಗಳಿಂದ ಮಾಳಮಡ್ಡಿ ಪ್ರದೇಶದಲ್ಲಿ ಸರಣಿ ಕಳ್ಳತನ ಪ್ರಕರಣ ನಡೆಯುತ್ತಲೇ ಇದ್ದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದರಿಂದ ಬೇಸತ್ತು, ಸಾರ್ವಜನಿಕರೇ ಗಸ್ತು ತಿರುಗಿ ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಪೊಲೀಸರ ನಡೆಗೆ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಧಾರವಾಡ (ಜೂ.11) ಕಳೆದ ಹಲವು ದಿನಗಳಿಂದ ಮಾಳಮಡ್ಡಿ ಪ್ರದೇಶದಲ್ಲಿ ಸರಣಿ ಕಳ್ಳತನ ಪ್ರಕರಣ ನಡೆಯುತ್ತಲೇ ಇದ್ದರೂ ಪೊಲೀಸರು ಕ್ರಮ ಕೈಗೊಳ್ಳದಿರುವುದರಿಂದ ಬೇಸತ್ತು, ಸಾರ್ವಜನಿಕರೇ ಗಸ್ತು ತಿರುಗಿ ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಪೊಲೀಸರ ನಡೆಗೆ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಳಮಡ್ಡಿ ಪ್ರದೇಶದಲ್ಲಿ ಕಳೆದ 15 ದಿನಗಳಲ್ಲಿ ಮೂರ್ನಾಲ್ಕು ಮನೆಗಳ ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು. ಆದರೆ, ಈ ವರೆಗೆ ಮಾತ್ರ ಕಳ್ಳರನ್ನು ಪತ್ತೆ ಮಾಡುವಲ್ಲಿ ಅಲ್ಲಿಯ ಸಿಬ್ಬಂದಿ ಸಫಲರಾಗಿದ್ದಿಲ್ಲ. ಕಳೆದ ಎರಡು ದಿನಗಳ ಹಿಂದೆ ಪುನಃ ಕಳ್ಳತನ ಪ್ರಕರಣ ನಡೆದಿತ್ತು. ಈ ಕುರಿತಂತೆಯೂ ನೊಂದ ಮನೆ ಮಾಲೀಕರು ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Tap to resize

Latest Videos

 

ಪೊಲೀಸರು ಬೆನ್ನುಹತ್ತಿದ್ದು ಒಂದು, ಸಿಕ್ಕಿದ್ದು ಮೂರು! ಶಿರಾಳಕೊಪ್ಪದ ಖತರ್ನಾಕ್ ಕಳ್ಳ ಅರೆಸ್ಟ್!

ನಿರಂತರ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಇದಕ್ಕೆ ಸ್ಪಂದಿಸದ ಇಲಾಖೆಯ ನಡೆಯಿಂದ ಬೇಸತ್ತ ಮಾಳಮಡ್ಡಿಯ ಯುವಕರು ಕಳೆದ ಎರಡು ದಿನಗಳಿಂದ ಸರತಿ ಸಾಲಿನಂತೆ ತಾವೇ ಪ್ರತಿಯೊಂದು ಪ್ರದೇಶದಲ್ಲಿ ಗಸ್ತು ಹಾಕಲು ಪ್ರಾರಂಭಿಸಿದ್ದರು. ಶುಕ್ರವಾರ ರಾತ್ರಿ ಮೂವರು ಕಳ್ಳರ ತಂಡ ಮಾಳಮಡ್ಡಿಯ ಅಪಾಟ್ರ್ಮೆಂಟ್‌ವೊಂದರಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿದ ಸ್ಥಳೀಯರು ಅದರಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತೋರ್ವ ಕಳ್ಳ ಅಲ್ಲಿಂದ ಪರಾರಿಯಾಗಿದ್ದು, ಆತನಿಗಾಗಿ ಸದ್ಯ ವಿದ್ಯಾಗಿರಿ ಠಾಣೆ ಪೊಲೀಸರು ಜಾಲ ಬೀಸಿದ್ದಾರೆ.

ಸಾಮಾನ್ಯವಾಗಿ ಪೊಲೀಸ್‌ ಇಲಾಖೆ ಮಾಡಬೇಕಾದ ಕಾರ್ಯವನ್ನು ಸ್ಥಳೀಯರೇ ಮಾಡಿರುವುದಕ್ಕೆ ಸಾಕಷ್ಟುಪ್ರಶಂಸೆ ವ್ಯಕ್ತವಾಗಿದ್ದು, ಇನ್ನಾದರೂ ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಬಜಕ್ರೆ ಸಾಲು ಸೇತುವೆ ಅಡಿಯಲ್ಲಿ ಕಾಣಿಕೆ ಡಬ್ಬ ಪತ್ತೆ

ಬೆಳ್ತಂಗಡಿ: ಎರಡು ಕಾಣಿಕೆ ಡಬ್ಬಗಳು ಒಡೆದ ರೀತಿಯಲ್ಲಿ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಬಜಕ್ರೆ ಸಾಲು ಸೇತುವೆ ಅಡಿಯಲ್ಲಿ ಪತ್ತೆಯಾಗಿದೆ.

ಲಾಯಿಲದಿಂದ ಮುಂಡೂರು ಸಂಪರ್ಕಿಸುವ ಸೋಮವತಿ ನದಿಗೆ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಅಡಿ ಭಾಗದಲ್ಲಿ ಶನಿವಾರ ಮಧ್ಯಾಹ್ನ ಸ್ಥಳೀಯ ನಿವಾಸಿ ರಾಜು ಅವರು ಕಲ್ಲಿನ ಮೇಲೆ ಇರುವ ಪ್ಲಾಸ್ಟಿಕ್‌ ಗೋಣಿಗಳನ್ನು ಗಮನಿಸಿ ಹತ್ತಿರ ಹೋಗಿ ನೋಡಿದಾಗ ಎರಡು ಸ್ಟೀಲ್‌ ಡಬ್ಬಗಳು ಪತ್ತೆಯಾಗಿವೆ. ಈ ಬಗ್ಗೆ ಅವರು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್‌ ಶೆಟ್ಟಿಎಣಿಂಜೆ ಅವರ ಗಮನಕ್ಕೆ ತಂದಾಗ ಅವರು ಪೊಲೀಸ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ಕಲಬುರಗಿಯಲ್ಲಿ ಮನೆ​ಗ​ಳ್ಳನ ಬಂಧ​ನ: ಚಿನ್ನಾ​ಭ​ರಣ ಜಪ್ತಿ

ಯಾರೋ ಕಳ್ಳರು ಕಳೆದ ರಾತ್ರಿ ಎಲ್ಲಿಂದಲೂ ಕಳ್ಳತನ ಎಸಗಿ ಗೋಣಿಗಳಲ್ಲಿ ತುಂಬಿಸಿಕೊಂಡು ಬಂದು ಸೇತುವೆ ಅಡಿಯಲ್ಲಿ ಇದನ್ನು ಒಡೆದು ಹಣ ಕಳವುಗೈದಿರುವ ಶಂಕೆ ಮೂಡಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯ ಎಎಸ್‌ಐ ದೇವಪ್ಪ, ಕ್ರೈಂ ಪಿಸಿಗಳಾದ ಚರಣ್‌ ರಾಜ್‌, ಅಶೋಕ್‌ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಡಬ್ಬದೊಳಗೆ ಬೀಗ ಮತ್ತು ಕೀ ಪತ್ತೆಯಾಗಿದ್ದು. ತನಿಖೆಗಾಗಿ ಎರಡು ಕಾಣಿಕೆ ಡಬ್ಬಿಯನ್ನು ವಶಕ್ಕೆ ಪಡೆದಿದ್ದಾರೆ. ಕಾಣಿಕೆ ಡಬ್ಬಿಗಳು ಎಲ್ಲಿಂದ ಕಳ್ಳತನವಾಗಿದೆ ಎಂದು ಇನ್ನಷ್ಟೆತಿಳಿದು ಬರಬೇಕಾಗಿದೆ.

click me!