ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಲೇ ಸರ್ಕಾರಿ ಬಸ್ ಚಲಾಯಿಸಿದ ಡ್ರೈವರ್: ವಿಡಿಯೋ ವೈರಲ್!

By Ravi Janekal  |  First Published Oct 11, 2024, 11:35 PM IST

ಮೊಬೈಲ್ ನಲ್ಲಿ ರೀಲ್ಸ್  ವಿಡಿಯೋಗಳನ್ನು ನೋಡುತ್ತಲೇ ಸುಮಾರು ಎರಡು ಕಿಮೀ ಬಸ್ ಚಾಲನೆ ಮಾಡಿದ ಘಟನೆ ತಮಿಳನಾಡಿನ ವಿಲ್ಲುಪುರಂ ಸರ್ಕಾರಿ ಬಸ್ ಚಾಲಕ ಚಾಲನೆ ಮಾಡಿರುವ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ಘಟನೆ ವಿಡಿಯೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಿಲ್ಲುಪುರಂ: ಮೊಬೈಲ್ ನಲ್ಲಿ ರೀಲ್ಸ್  ವಿಡಿಯೋಗಳನ್ನು ನೋಡುತ್ತಲೇ ಸುಮಾರು ಎರಡು ಕಿಮೀ ಬಸ್ ಚಾಲನೆ ಮಾಡಿದ ಘಟನೆ ತಮಿಳನಾಡಿನ ವಿಲ್ಲುಪುರಂ ಸರ್ಕಾರಿ ಬಸ್ ಚಾಲಕ ಚಾಲನೆ ಮಾಡಿರುವ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕರೊಬ್ಬರು ಘಟನೆ ವಿಡಿಯೋ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾರ್ಥಿಬನ್ ಅಮಾನತುಗೊಂಡ ಚಾಲಕ. ವಿಲ್ಲುಪುರಂ ಕೊಟ್ಟಂ, ತಿರುವಳ್ಳೂರು ವಲಯ, ಕೊಯಂಬೇಡು II ವಿಭಾಗಕ್ಕೆ ಸೇರಿದ ಚಾಲಕ. ಚಾಲನೆ ವೇಳೆ ನಿರ್ಲಕ್ಷ್ಯ ತೋರಿದ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇದೀಗ ಆತನನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ ಎಂದು ತಮಿಳನಾಡು ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

undefined

ಜರ್ಮನ್‌ ಯುವತಿಯ ಕನ್ನಡ ಪ್ರೇಮ, ರಾಜ್ಯದಲ್ಲಿದ್ದೂ ಕನ್ನಡ ಕಲಿಯದ ಹಿಂದಿವಾಲಾಗಳೇ ಇಲ್ಲಿ ನೋಡಿ!

ಘಟನೆ ಹಿನ್ನೆಲೆ:

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ತಿರುಪತಿಯಿಂದ ಚೆನ್ನೈ ಮಾಧವರಂ ಕಡೆಗೆ ಹೋಗುತ್ತಿದ್ದ ಬಸ್. ಈ ವೇಳೆ  ರೀಲ್‌ನಲ್ಲಿ ವಿಡಿಯೋ ನೋಡುತ್ತ ಚಾಲಕ ಸರ್ಕಾರಿ ಬಸ್ ಚಲಾಯಿಸಿದ್ದಾನೆ. ಚಾಲಕ ಮೊಬೈಲ್ ನೋಡುತ್ತಲೇ ಬಸ್ ಚಲಾಯಿಸುತ್ತಿರುವುದ ಕಂಡು ಪ್ರಯಾಣಿಕರು ಕಿರುಚಿದ್ದಾರೆ. ಆದರೆ ಆಗಲು ಮೊಬೈಲ್ ಬಿಡದೇ ಸುಮಾರು 2 ಕಿಲೋಮೀಟರ್ ದೂರದವರೆಗೆ ರಸ್ತೆಯತ್ತ ಗಮನ ಹರಿಸದೆ ಚಾಲಕ ವಾಹನ ಚಲಾಯಿಸುತ್ತಿರುವುದನ್ನು ಮಹಿಳಾ ಪ್ರಯಾಣಿಕರು ತಮ್ಮ ಸೆಲ್ ಫೋನ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಸಂಚಾರ ಕಚೇರಿಯಲ್ಲಿದ್ದ ಚಾಲಕರಿಗೆ ವಿಡಿಯೋ ತೋರಿಸಿ ದೂರು ದಾಖಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಬಸ್ ಚಾಲಕನನ್ನು ಸಾರಿಗೆ ಇಲಾಖೆ ಶಾಶ್ವತವಾಗಿ ಅಮಾನತುಗೊಳಿಸಿದೆ.

click me!