* ಗದಗ ಜಿಲ್ಲೆಯ ಹುಲುಕೋಟಿ ಬಳಿ ಆತ್ಮಹತ್ಯೆ
* ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ
* ವಿಶ್ವನಾಥ ಸಾಸ್ವಿಹಳ್ಳಿ ಮಠ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಹೂವಿನಹಡಗಲಿ(ಮೇ.09): ಇಲ್ಲಿನ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ವಿಶ್ವನಾಥ ಸಾಸ್ವಿಹಳ್ಳಿ ಮಠ (59) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದು, ಗದಗ ಜಿಲ್ಲೆಯ ಹುಲುಕೋಟಿ ಬಳಿ ಶುಕ್ರವಾರ ರಾತ್ರಿ 8.45ಕ್ಕೆ ಬರುವ ರೈಲ್ವೆಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ದಾವಣಗೆರೆ : ಕೊರೋನಾ ಭಯದಲ್ಲಿ ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ
ಮೂಲತಃ ಗದಗ ಶಿರಹಟ್ಟಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದವರಾಗಿದ್ದು, ಹೂವಿನಹಡಗಲಿಯಲ್ಲೇ ವಾಸವಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.