ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಹಿಂದೂ ಯುವಕನ ತಲೆ ಕತ್ತರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್!

Published : Jun 28, 2022, 06:55 PM ISTUpdated : Jun 28, 2022, 07:47 PM IST
ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಹಿಂದೂ ಯುವಕನ ತಲೆ ಕತ್ತರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್!

ಸಾರಾಂಶ

ಟೈಲರ್ ಕೆಲಸ ಮಾಡುತ್ತಿದ್ದ ಹಿಂದೂ ಯುವಕ ಬಟ್ಟೆ ಹೊಲಿಯುವ ನೆಪದಲ್ಲಿ ಬಂದ ದುಷರ್ಮಿಗಳು ತಲೆ ಕತ್ತರಿಸಿದ ಕತ್ತಿ ಹಿಡಿದು ಬೆದರಿಕೆ ಹಾಕಿದ ದುರ್ಷರ್ಮಿಗಳು

ಉದಯಪುರ(ಜೂ.28): ವಿವಾದಿತ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ಹಿಂದೂ ಯುವಕನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಟೈಲರಿಂಗ್ ಕೆಲಸ ಮಾಡುತ್ತಿದ್ದ ಹಿಂದೂ ಯುವಕ ಕನಯ್ಯ ಲಾಲ್ ಬಳಿ ಬಂದ ಮುಸ್ಲಿಮ್ ಯುವಕರು ಏಕಾಏಕಿ ದಾಳಿ ಮಾಡಿ ತಲೆ ಕತ್ತರಿಸಿದ್ದಾರೆ. ಬಳಿಕ ಕತ್ತಿ ಝಳಪಿಸಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬಟ್ಟೆ ಶಾಪ್ ಇಟ್ಟುಕೊಂಡಿದ್ದ ಕನ್ನಯ್ಯ ಲಾಲ್ ಬಳಿ ಬಂದ ಮುಸ್ಲಿಮ್ ಯುವಕರು, ಬಟ್ಟೆ ಹೊಲಿಯಲು ಅಳತೆ ತೆಗೆಯಲು ಹೇಳಿದ್ದಾರೆ. ಕನ್ನಯ್ಯ ಹಿಂತಿರುಗುತ್ತಿದ್ದಂತೆ ಚಾಕುವಿನಿಂದ ಚುಚ್ಚಿ ರುಂಡವನ್ನೇ ಕತ್ತರಿಸಿದ್ದಾರೆ. ಬಳಿಕ ಕತ್ತಿ ಝಳಪಿಸಿ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.

ಪ್ರವಾದಿ ವಿವಾದ: ಬಂಗಾಳದಲ್ಲಿ ಮತ್ತೆ ಹಿಂಸಾಚಾರ!

ಯುವಕನ ಹತ್ಯೆ ಆರೋಪಿಗಳು ವಿಡಿಯೋ ಮೂಲಕ ಪ್ರಧಾನಿ ಮೋದಿಗೂ ಬೆದರಿಕೆ ಹಾಕಿದ್ದಾರೆ. ಮೋದಿ ಹಾಕಿರುವ ಬೆಂಕಿಯನ್ನು ನಾವು ಆರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ರಿಯಾಝ್ ಹಾಗೂ ಮೊಹಮ್ಮದ್ ತಮ್ಮನ್ನು ಪರಿಚಯಿಸಿಕೊಂಡು ಬೆದರಿಕೆ ಹಾಕಿದ್ದಾರೆ.

ಇಂದು ಮಹ್ಯಾಹ್ನ 2.30ಕ್ಕೆ ಈ ಘಟನೆ ನಡೆದಿದೆ. ವಿಡಿಯೋ ಚಿತ್ರೀಕರಿಸಿಕೊಂಡು ಇದು ಎಲ್ಲಾ ಹಿಂದೂಗಳಿಗೆ ಎಚ್ಚರಿಕೆ ಎಂದು ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಉದಯಪುರ್ ಎಸ್‌ಪಿ ಮನೋಜ್ ಕುಮಾರ್, ಆರೋಪಿಗಳನ್ನು ಗುರುತಿಸಲಾಗಿದೆ. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ

ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣು ಹಾಕಿದ್ದ ಮೂವರು ಪೊಲೀಸ್ ವಶಕ್ಕೆ

ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್,ಇದು ದುರಾದೃಷ್ಟಕರ ಎಂದಿದ್ದಾರೆ. ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳಬೇಡಿ. ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಪ್ರಯತ್ನ ಮಾಡಬೇಡಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ತರನ್ನು ಬಿಡುವ ಪ್ರಶ್ನೆ ಇಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.ಇದೀಗ ಘಟನೆ ಖಂಡಿಸಿ ಉದಯ್‌ಪುರದಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಇದೇ ವೇಳೆ ರಾಜಸ್ಥಾನ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಭಾರಿ ಪ್ರತಿಭಟನೆ ಆರಂಭಗೊಂಡಿದೆ.

ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ ನೂಪುರ್ ಶರ್ಮಾ ಪರ ಕನ್ನಯ್ ಲಾಲ್ ಬೆಂಬಲ ಸೂಚಿಸಿದ್ದ. ತನ್ನ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ನೂಪರ್‌ಗೆ ಬೆಂಬಲ ಸೂಚಿಸಿದ್ದ. ಇದರಿಂದ ಕೆರಳಿದ ಮುಸ್ಲಿಮ್ ಯುವಕರು ನೇರವಾಗಿ ಅಂಗಡಿಗೆ ನುಗ್ಗಿ ಶಿರಚ್ಚೇಧ ಮಾಡಿದ್ದಾರೆ. 

ಕನ್ನಯ್ ಲಾಲ್ ಕೊಲೆ ಖಂಡಿಸಿ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವ ಘಟನೆಗಳು ಮರುಕಳಿಸುತ್ತಿದೆ. ಹಲವು ರಾಜ್ಯಗಳಲ್ಲಿ ಘಟನೆಗಳು ನಡೆದಿದೆ. ಹೀಗಾಗಿ ಇಂತಹ ಬೆದರಿಕೆ, ಹಾಗೂ ಕೊಲೆಗಡುಕರನ್ನು ತಕ್ಷಣ ಬಂಧಿಸಿ ಗಲ್ಲಿಗೇರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು