
ವರದಿ - ಪುಟ್ಟರಾಜು ಆರ್‌ಸಿ
ಚಾಮರಾಜನಗರ (ಮಾ.21) : ಖಾಕಿಧಾರಿಗಳಂದ್ರೆ ಎಲ್ರು ಗೌರವ ಕೊಡ್ತಾರೆ. ಸಮಾಜದಲ್ಲಿ ಅವರದ್ದೇ ಆದ ಘನತೆ, ಸ್ಥಾನ ಮಾನ ಇರುತ್ತೆ. ಆದರೆ ದುರಾದೃಷ್ಟವಶಾತ್ ಜನಸಾಮಾನ್ಯರನ್ನ ಕಾಯಬೇಕಾದ ಖಾಕಿಯೇ ಇಲ್ಲಿ ಕ್ರಿಮಿನಲ್ ಆಗಿದ್ದಾನೆ. ಬುಡಕಟ್ಟು ವಿದ್ಯಾರ್ಥಿನಿಯರಿಗೆ ಮರ್ಮಾಂಗದ ಫೋಟೊ ಕಳಿಸಿ ಮಂಚಕ್ಕೆ ಕರೆದಿದ್ದಾನೆ ಕಾಮುಕ ಪಿಎಸ್‌ಐ. ಅಸಲಿಗೆ ಈ ಪೊಲೀಸಪ್ಪ ಮಾಡಿದ್ದೇನು ನೋಡಿ!
ಫೋಟೊದಲ್ಲಿ ಒಳ್ಳೆ ಮಳ್ಳನಂತೆ ಪೋಸ್ ಕೊಟ್ಟಿರೋ ಇವನೇ ಈ ಕಥೆಯ ವಿಲನ್. ಹೆಸ್ರು ಜಗದೀಶ್, ಹುದ್ದೆಯಲ್ಲಿ ಪಿಎಸ್ಐ. ಚಾಮರಾಜನಗರ ಎಸ್ ಪಿ ಕಚೇರಿಯಲ್ಲಿ ಪ್ರೊ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಖಾಕಿ ತೊಟ್ಟು ಲಾ ಎಂಡ್ ಆರ್ಡರ್ ಕಾಪಾಡ್ಲಿ, ನೊಂದವರಿಗೆ ನ್ಯಾಯ ಕೊಡಿಸಲಿ ಅಂತ ಸರ್ಕಾರ ಸಮವಸ್ತ್ರ ಕೊಟ್ಟು ತಿಂಗ್ಳ ಸಂಬಳ ಕೊಡುತ್ತೆ. ಆದರೆ ಈ ಮಹಾಶಯ ಮಾಡೋದೇ ಬೇರೆ. ಕೈಗೆ ಲಾಟಿ ಹಿಡ್ದು ಸಮಾಜದ ಡೊಂಕು ತಿದ್ದೊ ಬದ್ಲು ಕಾಲೇಜ್ ಕನ್ಯೆಯರಿಗೆ ಗಾಳ ಹಾಕೋದೆ ತನ್ನ ಫುಲ್ ಟೈಂ ಜಾಬ್ ಮಾಡ್ಕೊಂಡಿದ್ದ ಈ ಪ್ರೊಬೇಷನರಿ ಪಿಎಸ್ಐ ಜಗದೀಶಾ ಮಾಡ್ತಿದ್ದೇನೆಂದರೆ ಫೇಸ್ ಬುಕ್ ನಲ್ಲಿ ಚೆಂದದ ವಿದ್ಯಾರ್ಥಿನಿಯರಿಗೆ ಗಾಳ ಹಾಕೋ ಕೆಲಸ.
ಬೆಂಗಳೂರು: ಮೆಟ್ರೋ ಅಧಿಕಾರಿಗಳಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಸಹಕರಿಸದಿದ್ದರೆ ಕೆಲಸದಿಂದ ವಜಾ ಬೆದರಿಕೆ!
ಮೊದಲಿಗೆ ವಿದ್ಯಾರ್ಥಿನಿಯರ ಅಕೌಂಟ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಿದ್ದ. ರಿಕ್ವೆಸ್ಟ್ ಆಕೆಪ್ಟ್ ಆಗ್ತಿದ್ದಂತೆ ಫೋನ್ ನಂಬರ್ ಪಡೆಯುತ್ತಿದ್ದ. ಇವ ಪೊಲೀಸ್ ಆಫೀಸರ್, ಇಂಥವರು ಪರಿಚಯ ಆದರೆ ನಮ್ಮಗೊಂದು ದೊಡ್ಡಸ್ತಿಕೆ ಅಂದುಕೊಂಡೋ, ಮೊಬೈಲ್ ನಂಬರ್ ಕೊಟ್ರೆ ಏನೂ ಸಮಸ್ಯೆ ಆಗೊಲ್ಲ ಅಂದುಕೊಂಡೋ ಮುಗ್ಧ ವಿದ್ಯಾರ್ಥಿನಿಯರು ಹಿಂದು ಮುಂದು ನೋಡದೇ ಮೊಬೈಲ್ ನಂಬರ್ ಶೇರ್ ಮಾಡ್ಕೊಳ್ತಿದ್ರು. ಇಲ್ಲಿ ಒಂದು ಭಾಗ ಮುಗಿದಂತೆ ಇನ್ನು ಎರಡನೇ ಭಾಗದಲ್ಲಿ ಕೈಚಳಕ ತೋರಿಸುತ್ತಿದ್ದ ಕಾಮುಕ. ನಿಧಾನಕ್ಕೆ ಮೆಸೇಜ್ ಮಾಡ್ತಾ ವಿದ್ಯಾರ್ಥಿನಿಯರಿಗೆ ಲವ್ವುಗಿವ್ವು ಅಂತಾ ತಲೆ ಕೆಡಿಸೋ ಕೆಲಸ ಮಾಡ್ತಿದ್ದ ಕಾಮುಕ. ವಿದ್ಯಾರ್ಥಿನಿಯರಿಗೆ ಮರ್ಮಾಂಗ ಕಳಿಸಿ ಮಂಚಕ್ಕೆ ಕರೆದೇ ಬಿಡ್ತಿದ್ದ ಸೈಕೋಪಾತ್!
ಯಾವಾಗ ಈತನ ಟಾರ್ಚರ್ ಹೆಚ್ಚಾಗ್ತಾ ಹೋಯ್ತೊ ರೋಸಿ ಹೋದ ಗಿರಿಜನ ವಿದ್ಯಾರ್ಥಿನಿಯರು ಸೀದಾ ಗಿರಿಜನ ಹಾಗೂ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘಕ್ಕೆ ನಡೆದ ವಿಚಾರ ತಿಳಿಸಿ ತಮ್ಮ ಬಳಿಯಿದ್ದ ಫೋಟೊಸ್ ಕಳಿಸಿ ಸಹಾಯಕ್ಕೆ ಅಂಗಲಾಚಿದ್ದಾರೆ. ಆಗಲೇ ಪಿಎಸ್‌ಐ ಜಗದೀಶನ ಅಸಲಿಮುಖ ಬಯಲಿಗೆ ಬಂದಿದೆ.
ಈತ ವಿದ್ಯಾರ್ಥಿನಿಯರನ್ನ ಬರಿ ಮಂಚಕ್ಕೆ ಕರೆದಿದ್ದು ಅಲ್ದೇ ಮನೆ ಕಟ್ಟಿಸಬೇಕೆಂದು ಹಣ ಪೀಕಿದ್ದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಸಂಬಂಧ ಸೀದಾ ಮೈಸೂರಿಗೆ ಐಜಿ ಕಚೇರಿಗೆ ಹೋದ ಬುಡಕಟ್ಟು ಗಿರಿಜನ ಸೇವಾ ಸಂಸ್ಥೆಯವರು ಪ್ರಕರಣವನ್ನ ಚಾಮರಾಜನಗರ ಎಸ್ ಪಿ ಗೆ ವರ್ಗಾವಣೆ ಮಾಡಿದ್ದಾರೆ..
ಚಾಮರಾಜನಗರ ಎಸ್ ಪಿ ಕಚೇರಿಯಲ್ಲಿ ಪ್ರೊ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್ಐ ವಿರುದ್ದ ತನಿಖೆ ನಡೆಸುತ್ತಿರುವುದಾಗಿ ಸ್ವತಃ ಚಾಮರಾಜನಗರ ಎಸ್ ಪಿ ಪದ್ಮಿನಿ ಸಾಹು ತಿಳಿಸಿದ್ದು, ತನಿಖೆಯ ಹೊಣೆಯನ್ನ ಚಾಮರಾಜನಗರ ಡಿವೈಎಸ್ಪಿಗೆ ವಹಿಸಲಾಗಿದೆ. ಅದೇನೆ ಹೇಳಿ ಸಮಾಜದ ಗೌರವಾನ್ವಿತ ಸ್ಥಾನದಲ್ಲಿರುವ ಖಾಕಿ ತೊಟ್ಟ ಪೊಲೀಸಪ್ಪನೇ ಈ ರೀತಿ ಪೋಲಿ ಆಗಿದ್ದು ಮಾತ್ರ ನಿಜಕ್ಕು ದುರಂತವೇ ಸರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ