
ರಾಂಚಿ(ಸೆ. 23) ಮಾಟಗಾತಿ ಎಂದು ಮಹಿಳೆಯೊಬ್ಬಳ ಮೇಲೆ ಆರೋಪ ಹೊರಿಸಿ ಆಕೆಯನ್ನು ಊರಿನ ತುಂಬಾ ಮೆರವಣಿಗೆ ಮಾಡಲಾಗಿದೆ. ಜಾರ್ಖಂಡ್ ಕೋಲಬೇರಿಯಾ ಬ್ಲಾಕ್ ಶೀಂಡೆಗಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಲೇ ಪೊಲೀಸರು ಮಹಿಳೆ ಸೇರಿ 9 ಜನರ ಬಂಧನ ಮಾಡಿದ್ದಾರೆ. ಮಹಿಳೆ ತನಗೆ ಅವಮಾನವಾದ ನಂತರ ಪೊಲೀಸರ ಮೊರೆ ಹೋಗಿದ್ದರು. ಊರವರೆಲ್ಲ ಸಭೆ ಸೇರಿ ಮಹಿಳೆಗೆ ಮಾಟಗಾತಿ ಪಟ್ಟ ಕಟ್ಟಿದ್ದಾರೆ.
ಸಿಕ್ಕಿಬಿದ್ದವನ ಮೊಬೈಲ್‌ನಲ್ಲಿ ನೂರಾರು ಮಹಿಳೆಯರ ಬೆತ್ತಲೆ ಪೋಟೋಗಳು
ಸಭೆ ಸೇರಿ ಮಾಟಗಾತಿ ಎಂದರು: ಕೊಂಬಕೇರ ಹಳ್ಳಿಯ ಜನರು ಶನಿವಾರ ಸಂಜೆ ಸಭೆ ಸೇರಿದ್ದರು. ಗ್ರಾಮದ ಮುಖಂಡನ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 55 ವರ್ಷದ ಮಹಿಳೆಗೆ ಮಾಟಗಾತಿ ಪಟ್ಟ ಕಟ್ಟಲಾಯಿತು.
ಮಾ ಮಂತ್ರ ಮಾಡಿ ತಿಂಗಳ ಹಿಂದೆ ಬಾಲಕನೊಬ್ಬನ ಸಾವಿಗೆ ಮಹಿಳೆ ಕಾರಣವಾಗಿದ್ದಳು ಎಂಬುದು ಗ್ರಾಮಸ್ಥರ ಆರೋಪ. ಇದೇ ಕಾರಣಕ್ಕೆ ಕಾನೂನು ಕೈಗೆ ತೆಗೆದುಕೊಂಡು ಶಿಕ್ಷೆ ಕೊಟ್ಟಿದ್ದಾರೆ.
ಮಹಿಳೆಯ ಕೂದಲು ಕತ್ತರಿಸಲಾಗಿದೆ. ನಂತರ ಆಕೆಯನ್ನು ಊರುತುಂಬಾ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಗ್ರಾಮಸ್ಥರ ಭಯಕ್ಕೆ ಮಹಿಳೆ ಯಾವುದೆ ಪ್ರತಿರೋಧ ತೋರಿಲ್ಲ.
ಮಹಿಳೆ ನೀಡಿದ ದೂರಿನ ಆಧಾರಲ್ಲಿ 49 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧನ ಮಾಡುತ್ತಿದ್ದಂತೆ ಹಳ್ಳಿಗರು ಪೊಲೀಸರ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ