
ಬೆಂಗಳೂರು(ಜೂ.04): ಪತಿ ಅನಂತರಾಜುಗೆ ರೇಖಾ ಜತೆಗೆ ಸಂಬಂಧ ಇರುವ ವಿಚಾರ ಗೊತ್ತಾದಾಗ ಆಕೆಗೆ ಕರೆ ಮಾಡಿ ಬೈದಿದ್ದೆ. ಪತಿ ಅನಂತರಾಜುಗೂ ಬೈದಿದ್ದೆ. ಆದರೆ, ಗಂಡನನ್ನು ಸಾಯಿಸುವಷ್ಟುಕೆಟ್ಟವಳು ನಾನಲ್ಲ ಎಂದು ಬಿಜೆಪಿ ಮುಖಂಡ ಅನಂತರಾಜು ಪತ್ನಿ ಸುಮಾ ಕಣ್ಣೀರಿಟ್ಟಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇಖಾ ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು. ಪೊಲೀಸರು ತನಿಖೆ ಮಾಡಲಿ. ಆಕೆ ಮಾಡಿರುವ ಆರೋಪಗಳು ಸತ್ಯವಾದರೆ ನನ್ನ ಮೇಲೆ ಕಾನೂನು ಕ್ರಮ ಕೈಗೊಳ್ಳಲಿ. ನನ್ನ ಗಂಡ ಅನಂತರಾಜು ಆರು ವರ್ಷಗಳಿಂದ ರೇಖಾ ಜತೆಗೆ ಸಂಬಂಧ ಇರಿಸಿಕೊಂಡಿದ್ದರು. ಕಳೆದ ಮಾಚ್‌ರ್ 22ರಂದು ಆ ವಿಚಾರ ನನಗೆ ಗೊತ್ತಾಯಿತು. ಯಾವ ಹೆಂಡತಿಗೆ ತನ್ನ ಗಂಡ ಬೇರೆ ಹೆಂಗಸಿನ ಜತೆ ಸಂಬಂಧ ಇದೆ ಎಂಬ ವಿಚಾರ ಗೊತ್ತಾಗಿ ಸುಮ್ಮನಿರುತ್ತಾಳೆ? ನಾನು ಸಹ ರೇಖಾಗೆ ಕರೆ ಮಾಡಿ ಬೈದಿದ್ದೆ. ಹೀಗಾದರೂ ಅವಳು ನನ್ನ ಗಂಡನಿಂದ ದೂರವಾಗುತ್ತಾಳೆ ಎಂದು ಭಾವಿಸಿದ್ದೆ. ಆದರೆ, ಆಕೆ, ನನ್ನ ಗಂಡನ ಖಾಸಗಿ ವಿಡಿಯೋ, ಫೋಟೋ ಇರಿಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ಆರೋಪಿಸಿದರು.
ಅನಂತರಾಜು ಆತ್ಮಹತ್ಯೆ ಪ್ರಕರಣ: ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ ಆರೋಪಿ ರೇಖಾ ಆತ್ಮಹತ್ಯೆ ಯತ್ನ
ಟಾರ್ಚರ್‌ನಿಂದ ನೊಂದಿದ್ದರು:
ರೇಖಾ ಕಳೆದ ಒಂದೂವರೆ ವರ್ಷದಿಂದ ನನ್ನ ಗಂಡ ಅನಂತರಾಜುಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ರಾಜಕೀಯ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಮಾನಸಿಕವಾಗಿ ನೊಂದಿದ್ದ ಅನಂತರಾಜು ಹಲವು ಬಾರಿ ನನ್ನೊಂದಿಗೆ ನೋವು ತೋಡಿಕೊಂಡಿದ್ದರು. ರಾಜಕೀಯವಾಗಿ ಬೆಳೆಯುವ ಆಸೆ ಇರಿಸಿಕೊಂಡಿದ್ದ ಅನಂತರಾಜು ಈ ವಿಚಾರ ಬಹಿರಂಗವಾದರೆ ಮರ್ಯಾದೆ ಧಕ್ಕೆಯಾಗುತ್ತದೆ ಎಂದು ಕೊರಗುತ್ತಿದ್ದರು. ರೇಖಾ ತನ್ನ ಮಗಳನ್ನು ಮೆಡಿಕಲ್ ಓದಿಸಲು ಬೇಕಾಗುವಷ್ಟುದುಡ್ಡು ಕೊಡು ಎಂದು ಅನಂತರಾಜುಗೆ ಬೇಡಿಕೆ ಇರಿಸಿದ್ದಳು. ಅನಂತರಾಜು ಇದಕ್ಕೆ ಒಪ್ಪಿರಲಿಲ್ಲ. ಆದರೆ, ಕಳೆದ ಒಂದೂವರೆ ವರ್ಷದಿಂದ ಬ್ಲ್ಯಾಕ್‌ಮೇಲ್ ಹಣ ಸಾಕಷ್ಟು ಹಣ ಸುಲಿಗೆ ಮಾಡಿದ್ದಳು ಎಂದು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ