ಕ್ಲಾಸ್‌ರೂಮ್‌ನಲ್ಲಿಯೇ ಟೀಚರ್‌ಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ

By Mahmad Rafik  |  First Published Jul 7, 2024, 2:09 PM IST

ಹೊರಗಡೆ ಹೋಗಲು ಒಪ್ಪದಿದ್ದಾಗ, ಸರ್ ಜೋರಾಗಿ ಗದರಿ ಹೇಳಿದರು. ಆಗ ಚಾಕು ತೆಗೆದು ಸರ್‌ಗೆ ಚುಚ್ಚಿದನು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 


ದಿಸ್ಪುರ: ಕ್ಲಾಸ್‌ ರೂಮ್‌ನಲ್ಲಿಯೇ ವಿದ್ಯಾರ್ಥಿಯೋರ್ವ ಟೀಚರ್‌ಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ಶನಿವಾರ ನಡೆದಿದೆ. ಅಸ್ಸಾಂ ರಾಜ್ಯದ ಶಿವಸಾಗರ ಜಿಲ್ಲೆಯ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ಚಾಕು ಇರಿತಕ್ಕೊಳಗಾದ ಶಿಕ್ಷಕ ರಾಜೇಂದ್ರ ಬಾಬು ಮೃತರಾಗಿದ್ದಾರೆ. ಕ್ಲಾಸ್‌ರೂಮ್‌ನಲ್ಲಿ ಕ್ಯಾಸೂಲ್ ಬಟ್ಟೆ ಧರಿಸುವಂತೆ ಹೇಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತರಗತಿ ಕೊಠಡಿಯಲ್ಲಿ ಕೊಲೆ ಆಗಿರೋದರಿಂದ ವಿದ್ಯಾರ್ಥಿಗಳೆಲ್ಲಾ ಆತಂಕದಲ್ಲಿದ್ದಾರೆ. 

ಶನಿವಾರ ಮಧ್ಯಾಹ್ನ 3.15ಕ್ಕೆ ಕೊಲೆಯಾಗಿದೆ. ಚಾಕು ಇರಿತಕ್ಕೊಳಗಾಗಿದ್ದ ಶಿಕ್ಷಕ ರಾಜೇಂದ್ರ ಬಾಬು ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿತ್ತು. ವೈದ್ಯರು ಶಿಕ್ಷಕ ಮೃತರಾಗಿರೋದನ್ನು ಘೋಷಿಸಿದ್ದಾರೆ. ಕೊಲೆ ಸಂಬಂಧ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೊಯಿದುಲ್ ಇಸ್ಲಾಂ ಹೇಳಿದ್ದಾರೆ. ಆರೋಪಿ ವಿದ್ಯಾರ್ಥಿ 11ನೇ ತರಗತಿ ಓದುತ್ತಿದ್ದನು.

Tap to resize

Latest Videos

ಇನ್ನು ಕೊಲೆ ಮಕ್ಕಳ ಮುಂದೆಯೇ ನಡೆದಿದ್ದು, ಕೆಲ ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ಘಟನೆಯನ್ನು ವಿವರಿಸಿದ್ದಾರೆ. ರಾಜೇಂದ್ರ ಬಾಬು ಕ್ಲಾಸ್ ನಡೆಯುತ್ತಿತ್ತು. ಕ್ಯಾಸುಲ್ ಡ್ರೆಸ್ ಹಾಕದಿದ್ದಕ್ಕೆ ಆತನನ್ನು ಹೊರಗೆ ಹೋಗುವಂತೆ ಸಮಾಧಾನದಿಂದಲೇ ಹೇಳಿದರು. ಆದ್ರೆ ಅವನು ಹೊರಗಡೆ ಹೋಗಲು ಒಪ್ಪದಿದ್ದಾಗ, ಸರ್ ಜೋರಾಗಿ ಗದರಿ ಹೇಳಿದರು. ಆಗ ಚಾಕು ತೆಗೆದು ಸರ್‌ಗೆ ಚುಚ್ಚಿದನು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. 

ಆತನ ಬಳಿ ಹರಿತವಾದ ಆಯುಧ ಇದೆ ಎಂಬ ವಿಷಯ ನಮಗೆ ಗೊತ್ತೇ ಇರಲಿಲ್ಲ. ಶಿಕ್ಷಕರು ಬೈದಿದ್ದಕ್ಕೆ ಚಾಕು ಹೊರಗೆ ತೆಗೆದು ತಲೆಗೆ ಚುಚ್ಚಿದನು. ಗಾಯದಿಂದ ಶಿಕ್ಷಕರು ಕೆಳಗೆ ಬಿದ್ದರು. ಕ್ಲಾಸ್‌ರೂಮ್‌ನಲ್ಲಿ ರಕ್ತ ಹರಿಯಿತು. ನಮ್ಮ ಗಲಾಟೆ ಕೇಳಿ ಪಕ್ಕದ ಕ್ಲಾಸ್‌ರೂಮ್ ಶಿಕ್ಷಕರು ಬಂದರು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯನ್ನು ವಿವರಿಸಿದ್ದಾರೆ. 

ರಾತ್ರಿ ಮಹಿಳೆಯಿಂದ ಬಂತು ಫೋನ್ ಕಾಲ್; ಕಾಡು ಸೇರಿ, ನನ್ನಿಂದ ಆಗಲ್ಲ ಎಂದು ವಿಷ ಕುಡಿದ ಯುವಕ

ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿದಿದ್ದ ವಿದ್ಯಾರ್ಥಿ

ಮದ್ಯ ಸೇವಿಸಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ತಡೆದ ಕಾರಣಕ್ಕೆ ಕೋಪಗೊಂಡು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್‌ ಎದೆಗೆ ಚಾಕುವಿನಿಂದ ಇರಿದು ವಿದ್ಯಾರ್ಥಿಯೊಬ್ಬ ಹತ್ಯೆಗೈದಿರುವ ದಾರುಣ ಘಟನೆ ಹೆಬ್ಬಾಳ ಸಮೀಪ ಖಾಸಗಿ ಕಾಲೇಜಿನ ‍ಆ‍ವರಣದಲ್ಲಿ ಬುಧವಾರ ನಡೆದಿತ್ತು. ಯಲಹಂಕ ನಿವಾಸಿ ಜೈ ಕಿಶೋರ್ ರೈ (45) ಮೃತ ದುರ್ದೈವಿ. 

ಹತ್ಯೆ ಸಂಬಂಧ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಅಸ್ಸಾಂ ಮೂಲದ ಭಾರ್ಗವ್ ಬರ್ಬನ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರ್ಗವ್ ಬಂದಾಗ ಈ ಕೃತ್ಯ ನಡೆದಿದೆ. ಭಾರ್ಗವ್‌, ಕಾಲೇಜಿನ ಸಮೀಪದಲ್ಲಿ ಪಿಜಿಯಲ್ಲಿ ನೆಲೆಸಿದ್ದನು. ಮೃತ ಜೈ ಕಿಶೋರ್ ರೈ ಕಳೆದ ಏಳೆಂಟು ವರ್ಷಗಳಿಂದ ಇಲ್ಲಿ ಕೆಲಸ ಮಾಡಿಕೊಂಡಿದ್ದನು.

ಕೈಯಲ್ಲಿ ಮದರಂಗಿ, ಪ್ರೀತಿಸಿದವನೊಂದಿಗೆ ಮದುವೆ ಫಿಕ್ಸ್; ಆದ್ರೂ ನೇಣಿಗೆ ಕೊರಳೊಡ್ಡಿದ ವಧು

click me!