ದುಬೈನಲ್ಲಿ ಕುಳಿತು ಬೆಂಗಳೂರಿನಲ್ಲಿ ತಾಯಿ, ಮಗಳ ಡ್ರಗ್ ದಂಧೆ!

By Kannadaprabha News  |  First Published Jul 7, 2024, 12:50 PM IST

ವಿದೇಶದಲ್ಲಿ ನೆಲೆಸಿ ಬೆಂಗಳೂರಿನ ಸ್ಥಳೀಯರನ್ನು ಬಳಸಿಕೊಂಡು ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿರುವ ಆರೋಪದಡಿ ತಾಯಿ, ಮಗಳು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಬೆಂಗಳೂರು (ಜು.7): ವಿದೇಶದಲ್ಲಿ ನೆಲೆಸಿ ನಗರದಲ್ಲಿ ಸ್ಥಳೀಯರನ್ನು ಬಳಸಿಕೊಂಡು ಮಾದಕವಸ್ತು ಮಾರಾಟ ದಂಧೆ ನಡೆಸುತ್ತಿರುವ ಆರೋಪದಡಿ ತಾಯಿ, ಮಗಳು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಕ್ಕೂರಿನ ಎಂಬೆಸ್ಸಿ ಬುಲೆವಾರ್ಡ್ ನಿವಾಸಿ ಆಯಾಜ್ ಮೆಹಮೂದ್ ಎಂಬುವವರು ನೀಡಿದ ದೂರಿನ ಮೇರೆಗೆ ದುಬೈ ನಿವಾಸಿಗಳಾದ ನತಾಲಿಯಾ ನಿರ್ವಾನಿ, ಅವರ ತಾಯಿ ಲೀನಾ ನಿರ್ವಾನಿ ಹಾಗೂ ರಂಜನ್ ಎಂಬುವವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

ಡ್ರಗ್ಸ್‌ ಸ್ಮಗ್ಲಿಂಗ್ ಮಾಡುತ್ತಿದ್ದ ಮಗನನ್ನೇ ಪೊಲೀಸರಿಗೆ ಹಿಡಿದು ಕೊಟ್ಟ ತಾಯಿ!

ದೂರುದಾರ ಆಯಾಜ್ ಮೆಹಮೂದ್ ನೀಡಿದ ದೂರಿನಲ್ಲಿ ' ನತಾಲಿಯಾ ನಿರ್ವಾನಿ ಅವರು ತಮ್ಮ ತಾಯಿ ಲೀನಾ ನಿರ್ವಾನಿ ಜತೆಗೆ ದುಬೈನಲ್ಲಿ ನೆಲೆಸಿದ್ದಾರೆ. ನತಾಲಿಯಾ ನಗರದ ಸ್ಥಳೀಯ ರಂಜನ್ ಎಂಬಾತನ ಮುಖಾಂತರ ಸ್ಥಳೀಯರಿಂದ ಹಣ ಪಡೆದು ಹೈಡೋ ಗಾಂಜಾ ಮತ್ತು ಎಂಡಿಎಂಎ ಸೇರಿ ಇತರೆ ಮಾದಕಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅಂತೆಯೇ ತಮ್ಮ ಮಗ ಆಯಾನ್ ಮೆಹಮೂದ್ಗೂ ಸಹ ಮಾದಕವಸ್ತು ಸರಬರಾಜು ಮಾಡಿ ಒತ್ತಾಯ ಪೂರ್ವಕವಾಗಿ ಸೇವಿಸುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

'ನತಾಲಿಯಾ ಖಾಸಗಿ ಬ್ಯಾಂಕ್ ಖಾತೆ ಹೊಂದಿದ್ದು, ಈ ಖಾತೆಗೆ ಯುವಕರಿಂದ ಹಣ ಹಾಕಿಸಿಕೊಂಡು ರಂಜನ್ ಹಾಗೂ ಇತರರ ಮೂಲಕ ಅವರಿಗೆ ಮಾದಕಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ನತಾಲಿಯಾ ದುಬೈ-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾ ಮಾದಕವಸ್ತು ದಂಧೆಯಲ್ಲಿ ತೊಡಗಿದ್ದಾರೆ' ಎಂದು ಆರೋಪಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಒದ್ದೆ ಕೈಯಲ್ಲಿ ಮೊಬೈಲ್‌ ಚಾರ್ಜ್‌ ಹಾಕಲು ಹೋದ ವಿದ್ಯಾರ್ಥಿ ಶಾಕ್‌ ಹೊಡೆದು ಸಾವು!

ಇಬ್ಬರು ವಿದೇಶಿಗರು ಸೇರಿದಂತೆ ಮೂವರು ಡ್ರಗ್ಸ್‌ ಪೆಡ್ಲರ್‌ಗಳ ಸೆರೆ
ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಮೂವರನ್ನು ಸಿಸಿಬಿ ಹಾಗೂ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೀಪಾಂಜನಲಿ ನಗರದ ಫ್ಲವರ್ ಗಾರ್ಡನ್‌ ನಿವಾಸಿ ವಿಕಾಸ್ ಹಾಗೂ ನೈಜೀರಿಯಾ ಪ್ರಜೆಗಳು ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್‌, ಕೊಕೇನ್‌, ಎಕ್ಸ್‌ಟೈಸಿ ಹಾಗೂ 10.6 ಕೇಜಿ ಗಾಂಜಾ ಸೇರಿದಂತೆ ₹13.80 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಲಾಗಿದೆ.

ವಿದ್ಯಾರಣ್ಯಪುರ ಸಮೀಪದ ವಿದೇಶಿ ಪೆಡ್ಲರ್‌ಗಳು ಸಿಸಿಬಿ ಬಲೆಗೆ ಬಿದ್ದಿದ್ದರೆ, ನಾರಾಯಣನಗರದ ದೊಡ್ಡಕಲ್ಲಸಂದ್ರ ಕೆರೆ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ವಿಕಾಸ್ ಕೋಣನಕುಂಟೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಬಂದಿದ್ದ ವಿದೇಶಿ ಪ್ರಜೆಗಳು, ಬಳಿಕ ನಗರಕ್ಕೆ ಬಂದು ನೆಲೆಸಿದ್ದರು. ಹಣದಾಸೆಗೆ ಡ್ರಗ್ಸ್ ದಂಧೆಗಳಿದ ಆರೋಪಿಗಳು, ಗೋವಾ, ಮುಂಬೈ ಹಾಗೂ ದೆಹಲಿ ನಗರಗಳಲ್ಲಿರುವ ತಮ್ಮ ದೇಶದ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸಿ ನಂತರ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜಸ್ಥಾನದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ:
ವಿಕಾಸ್‌ ಮೂಲತಃ ರಾಜಸ್ಥಾನ ರಾಜ್ಯದವನಾಗಿದ್ದು, ದೀಪಾಂಜಲಿ ನಗರದಲ್ಲಿ ಆತ ವಾಸವಾಗಿದ್ದ. ನಗರದಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಆತ, ರಜೆಯಲ್ಲಿ ತನ್ನೂರಿಗೆ ಹೋದಾಗ ರೈಲಿನಲ್ಲಿ ಗಾಂಜಾ ತಂದು ನಗರದಲ್ಲಿ ಬಿಕರಿ ಮಾಡುತ್ತಿದ್ದ. ಕಳೆದ ಏಳೆಂಟು ತಿಂಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ಆತ ನಿರತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!