ಸುರಪುರ: ಸಂಶಯಾಸ್ಪದವಾಗಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

By Kannadaprabha News  |  First Published Oct 15, 2022, 1:28 PM IST

ಯಾದಗಿರಿ ಜಿಲ್ಲೆಯ ಸುರಪುರ ನಗರದ ಪಾಲಿಟೆಕ್ನಿಕ್‌ ನಿರ್ಮಾಣ ಹಂತದ ಹಾಸ್ಟೆಲ್‌ ಕಟ್ಟಡದಲ್ಲಿ ನಡೆದ ಘಟನೆ 


ಸುರಪುರ(ಅ.15):  ವಿದ್ಯಾರ್ಥಿಯೊಬ್ಬ ಸಂಶಯಾಸ್ಪದವಾಗಿ ನೇಣಿಗೆ ಶರಣಾದ ಘಟನೆ ನಗರದ ಪಾಲಿಟೆಕ್ನಿಕ್‌ ನಿರ್ಮಾಣ ಹಂತದರಲ್ಲಿರುವ ಹಾಸ್ಟೆಲ್‌ ಕಟ್ಟಡದಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಸುಮಾರಿಗೆ ಸಂಭವಿಸಿದೆ.

ತಾಲೂಕಿನ ಶೆಟ್ಟಿಗೆರೆಯ ನಿವಾಸಿ, ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಭೀಮಾಶಂಕರ ತಂದೆ ನಿಂಗಪ್ಪ ನೇಣಿಗೆ ಶರಣದ ಮೃತ ವಿದ್ಯಾರ್ಥಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್‌ ಅಭ್ಯಾಸ ಮಾಡುತ್ತಿದ್ದನು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಮೆಟ್ರಿಕ್‌ ವಸತಿ ನಿಲಯದಲ್ಲಿ ಇದ್ದನು. ವಿದ್ಯಾರ್ಥಿ ಸಾವಿಗೆ ಕಾರಣ ತಿಳಿದುಬಂದಿಲ್ಲ.

Tap to resize

Latest Videos

undefined

ಲವರ್‌ಗಾಗಿ ಪ್ರಿಯತಮೆ ಆತ್ಮಹತ್ಯೆ: ಮಗಳ ಸಾವಿಗೆ ಕಾರಣನಾದ ಯುವಕನನ್ನು ಕೊಂದ ಯುವತಿ ಮನೆಯವರು..!

ಸ್ಥಳಕ್ಕೆ ಡಿವೈಎಸ್‌ಪಿ ಟಿ. ಮಂಜುನಾಥ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ಸುನೀಲ್‌ಕುಮಾರ್‌ ಮೂಲಿಮನಿ, ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿ ವಿಭಾಗದ ಸಹಾಯ ನಿರ್ದೇಶಕ ಸತ್ಯನಾರಾಯಣ ದರಬಾರಿ, ಎಸ್‌ಟಿ ವಿಭಾಗದ ಸಹಾಯಕ ನಿರ್ದೇಶಕ ಮಹ್ಮದ್‌ ಸಲೀಂ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಅನುವು ಮಾಡಿಕೊಟ್ಟರು. ಅಪಾರ ಪ್ರಮಾಣದಲ್ಲಿ ಕಟ್ಟಡದ ಮುಂದೆ ವಸತಿ ನಿಲಯದ ವಿದ್ಯಾರ್ಥಿಗಳು, ಕುಟುಂಬಸ್ಥರು, ಸಂಬಂಧಿಕರು ಜಮಾಯಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸುರಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
 

click me!