ದೆಹಲಿ: 11ರ ಬಾಲಕನಿಗೆ ಲೈಂಗಿಕ ಕಿರುಕುಳ: ಪೋಕ್ಸೋ ಕೇಸಲ್ಲಿ ಮದರಸಾ ಶಿಕ್ಷಕ ಅರೆಸ್ಟ್‌

By Suvarna News  |  First Published Oct 15, 2022, 1:26 PM IST

Crime News: ಹನ್ನೊಂದು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪದ ಮೇಲೆ  ದೆಹಲಿಯ ಮದೀನಾ ಮಸೀದಿಯ ಶಿಕ್ಷಕನ್ನು ಪೋಕ್ಸೋ ಕೇಸ್‌ ಅನ್ವಯ ಬಂಧಿಸಲಾಗಿದೆ. 


ನವದೆಹಲಿ (ಅ. 15): ಹನ್ನೊಂದು ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪದ ಮೇಲೆ  ದೆಹಲಿಯ ಕರವಾಲ್ ನಗರದ ಶಿವ ವಿಹಾರ್‌ನಲ್ಲಿರುವ ಮದೀನಾ ಮಸೀದಿಯ ಶಿಕ್ಷಕನ್ನು ಪೋಕ್ಸೋ ಕೇಸ್‌ ಅನ್ವಯ ಬಂಧಿಸಲಾಗಿದೆ. ಆರೋಪಿ ಶಿಕ್ಷಕನನ್ನು ಮೌಲಾನಾ ಮೊಹಮ್ಮದ್ ಜಾವೇದ್ ಎಂದು ಗುರುತಿಸಲಾಗಿದೆ.  ಗುರುಗ್ರಾಮ್ ನಿವಾಸಿಯಾಗಿರುವ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ದೆಹಲಿಯ ಪಿಎಸ್ ಕರವಾಲ್ ನಗರದಲ್ಲಿ ಭಾರತೀಯ ದಂಡ ಸಂಹಿತೆ (IPC) ಮತ್ತು 6/8 POCSO ಕಾಯ್ದೆಯ ಸೆಕ್ಷನ್ 377 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಬಾಲಕ ಮದರಸಾದಲ್ಲಿ ಓದುತ್ತಿದ್ದು , ಶಿಕ್ಷಕ ತನ್ನ ಮಗನಿಗೆ ನೀಡಿದ ಕಿರುಕುಳದ ಬಗ್ಗೆ ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ. ಈದ್‌ ರಜೆಗಳ ಬಳಿಕ  ಮಗನನ್ನು ಮದರ್ಸಾಗೆ ಕರೆದೊಯ್ದಾಗ ಮಗ ಅಲ್ಲಿ ಓದಲು ನಿರಾಕರಿಸಿದ್ದಾನೆ. ಬಾಲಕ ಮದರಸಾದಲ್ಲಿ ಜಾರಿ ಬಿದ್ದು ಗಾಯಗೊಂಡು ಮನೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಆತ ತನ್ನ ತಾಯಿಗೆ ತನ್ನ ಸಂಕಟವನ್ನು ವಿವರಿಸಿದ್ದಾನೆ. ಈ ಬಳಿಕ  ಅಕ್ಟೋಬರ್ 10 ರಂದು ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. 

Tap to resize

Latest Videos

ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು  ತನಗೆ ಮದುವೆಯಾಗಿರುವುದಾಗಿ ತಿಳಿಸಿದ್ದಾನೆ. ಮಸೀದಿ ಸಂಕೀರ್ಣದಲ್ಲಿಯೇ ಒದಗಿಸಲಾದ ವಸತಿಗೃಹದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದೇನೆ ಎಂದು ಮದರಸಾ ಶಿಕ್ಷಕ ಬಹಿರಂಗಪಡಿಸಿದ್ದಾನೆ. ಅಲ್ಲದೇ ಹುಡುಗನ ಮೇಲಿನ ಆಕರ್ಷಣೆಯನ್ನು ಒಪ್ಪಿಕೊಂಡಿದ್ದಾನೆ.

Sodomising Case 14 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ, ಪೋಕ್ಸೋ ಕಾಯ್ಡೆಯಡಿ ಮದರಸಾ ಶಿಕ್ಷಕ ಅರೆಸ್ಟ್! 

ಕೋಣೆಗೆ ಕರೆದು ಅಸಭ್ಯ ವರ್ತನೆ: ಕೌನ್ಸೆಲಿಂಗ್ ಸಮಯದಲ್ಲಿ ಬಾಲಕ ಮೂರನೇ ಮಹಡಿಯಲ್ಲಿ ಇತರ 15-21 ವಿದ್ಯಾರ್ಥಿಗಳೊಂದಿಗೆ ಮಸೀದಿಯಿಂದ ಒದಗಿಸಲಾದ ವಸತಿಗೃಹದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾನೆ.  ಆರೋಪಿ ಶಿಕ್ಷಕ ಮೌಲಾನಾ ಮೊಹಮ್ಮದ್ ಜಾವೇದ್  ಮಾರ್ಚ್ 2021 ರಿಂದ ಮದರಸಾದಲ್ಲಿ ಕಲಿಸುತ್ತಿದ್ದು ಕಟ್ಟಡದಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತಿರುವು ತಿಳಿದುಬಂದಿದೆ. 

ಆಗಸ್ಟ್ ಮಧ್ಯದಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ತಯಾರಿ ವೇಳೆ, ಮೌಲಾನಾ ಆಗಸ್ಟ್ 14, 2022 ರಂದು ತನ್ನನ್ನು ಕೋಣೆಗೆ ಕರೆದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಬಾಲಕ ತಿಳಿಸಿದ್ದಾನೆ. ಹೇಯ ಕೃತ್ಯವನ್ನು ಬಹಿರಂಗಪಡಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹುಡುಗನಿಗೆ ಮೌಲಾನಾ ಬೆದರಿಕೆ ಹಾಕಿದ್ದಲ್ಲದೇ  ಅನೇಕ ಬಾರಿ ಕಿರುಕುಳ ನೀಡಿದ್ದಾನೆ ಎಂದು ಬಾಲಕ ತಿಳಿಸಿದ್ದಾನೆ. 

click me!