Haveri Suicide: ಪೋಷಕರು ಓದು ಎಂದು ಬುದ್ದಿ ಹೇಳಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿ!

By Govindaraj S  |  First Published Apr 29, 2022, 8:52 PM IST

ಹಾವೇರಿ ತಾಲೂಕು ಗುತ್ತಲ ಸಮೀಪದ ಹೊಸಮೇಲ್ಮುರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಯುವಕ ಹೊಸಮೇಲ್ಮುರಿಯ  ಪಕ್ಕಿರೇಶ ಸುರೇಶ ಅರಳಿ (18) ಎಂದು ತಿಳಿದು ಬಂದಿದೆ.


ಹಾವೇರಿ (ಏ.29): ಹಾವೇರಿ ತಾಲೂಕು ಗುತ್ತಲ ಸಮೀಪದ ಹೊಸಮೇಲ್ಮುರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು (Suicide) ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಯುವಕ ಹೊಸಮೇಲ್ಮುರಿಯ  ಪಕ್ಕಿರೇಶ ಸುರೇಶ ಅರಳಿ (18) ಎಂದು ತಿಳಿದು ಬಂದಿದೆ. ನಿನ್ನೆ ಗುರುವಾರ ದಿವಸ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ (PUC Exam) ಬರೆದು ಬಂದ ಮೇಲೆ ಸಂಜೆಯ ವೇಳೆ ಪಾಲಕರು (Parents) ಪರೀಕ್ಷೆ ಇರುವ ಸಲುವಾಗಿ ಕಾಲ ಹರಣ ಮಾಡದೇ ಓದಲು ಬುದ್ಧಿವಾದ ಹೇಳಿದ್ದಕ್ಕೆ ಬೇಜಾರ್ ಮಾಡಿಕೊಂಡು ಅವರ ಹೊಲದಲ್ಲಿನ ರೇಷ್ಮೆ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

ಶೀಲಶಂಕಿಸಿ ಪತಿಯ ಕಿರುಕುಳ, ನದಿಗೆ ಹಾರಿ ಮಹಿಳೆ ಆತ್ಮಹತ್ಯೆ: ಪತಿ ಹಾಗು ನಾದಿನಿಯಿಂದ ಕಿರುಕುಳದಿಂದ  ಬೇಸತ್ತು ಮಹಿಳೆಯೊಬ್ಬರು ಕಾವೇರಿ ನದಿಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ (Suicide) ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜೆಎಸ್ಎಸ್‌ ಆಸ್ಪತ್ರೆಯಲ್ಲಿ (JSS Hospital) ಫಿಸಿಯೋ ಥೆರಪಿಸ್ಟ್  ಆಗಿದ್ದ 32 ವರ್ಷದ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು ಇವರ ಶವ ಮಂಡ್ಯ (Mandya) ಜಿಲ್ಲೆ ಬೆಳಕವಾಡಿ ಬಳಿ ಹರಿಯುವ ಕಾವೇರಿ ನದಿಯಲ್ಲಿ (Cauvery River) ಶವ ಪತ್ತೆಯಾಗಿದೆ. 

Tap to resize

Latest Videos

undefined

ಚಾಮರಾಜನಗರ: ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ

ಚಾಮರಾಜನಗರ ಜಿಲ್ಲೆ ಯಳಂದೂರು ನಿವಾಸಿಯಾಗಿದ್ದ ನಾಗವೇಣಿ ಶನಿವಾರ ಕಾಣೆಯಾಗಿದ್ದರು‌.ಈ ಬಗ್ಗೆ ನಾಗವೇಣಿ ಪೋಷಕರು  ಯಳಂದೂರು ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು ಪತ್ನಿಯ ಶೀಲಶಂಕಿಸಿ ಪತಿ ಸ್ವಾಮಿನಾಯಕ ಅವರು ನಾಗವೇಣಿಗೆ ಮಾನಸಿಕ ಹಾಗು ದೈಹಿಕ  ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.  ಈ ಬಗ್ಗೆ ನಾಗವೇಣಿ ಅವರು ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿದ್ದರು. 

ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗ ಸೂಪರ್‌‌ವೈಸರ್ ಆಗಿರುವ ಸ್ವಾಮಿನಾಯಕ ಹಾಗು ಅವರ ಸಹೋದರಿ ಸಂತೇಮರಹಳ್ಳಿ ಮೋಳೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಭಾಗ್ಯ ಅವರು ನಾಗವೇಣಿಗೆ ನಿತ್ಯ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತು ನಾಗವೇಣಿ ಮನೆ ಬಿಟ್ಟು ಹೋಗಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗವೇಣಿ ಪೋಷಕರು, ನಾಗವೇಣಿಯ ಪತಿ ಸ್ವಾಮಿನಾಯಕ್ ಹಾಗು ನಾದಿನಿ  ಭಾಗ್ಯ ವಿರುದ್ದ  ಮಂಡ್ಯ ಜಿಲ್ಲೆ ಮಳವಳ್ಳಿ ತಾಲೋಕಿನ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಾಲದ ಬಾಧೆಗೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣು: ಸತತ ಶುಂಠಿ ಧಾರಣೆ ಕುಸಿತವಾದ ಹಿನ್ನೆಲೆಯಲ್ಲಿ ಸಾಲದ ಬಾಧೆಗೆ ಸಿಲುಕಿದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಇಂದು(ಭಾನುವಾರ) ನಡೆದಿದೆ.  ಬಸವಾಪುರ ಗ್ರಾಮದ ವಸಂತ (34) ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. 

Raichur Suicide: ಸಿಂಧನೂರಲ್ಲಿ ಒಂದೇ ನೇಣಿಗೆ ಕೊರಳೊಡ್ಡಿದ ಪ್ರೇಮಿಗಳು: ಕಾರಣ?

ಕಳೆದ ಐದು ವರ್ಷಗಳಿಂದ ಜಾಗ ಬಾಡಿಗೆ ಪಡೆದು ಶುಂಠಿ ಬೆಳೆ ಹಾಕಿದ್ದ ಮೃತ ವಸಂತ. ಸತತ ಮೂರು ವರ್ಷಗಳಿಂದ ಶುಂಠಿ ಧಾರಣೆ ಕುಸಿತಗೊಂಡಿದ್ದರಿಂದ ತೀವ್ರ ಸಂಕಷ್ಟಗೊಳಗಾಗಿದ್ದ ವಸಂತ. ನಷ್ಟದಲ್ಲಿದ್ದ ರೈತ ವಸಂತ ಸಂಘ ಸಂಸ್ಥೆ ಹಾಗೂ ಇತರೆ ಕೈಗಡ ಸೇರಿದಂತೆ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದನು ಅಂತ ತಿಳಿದು ಬಂದಿದೆ.  ಸಾಲಗಾರರ ಕಾಟಕ್ಕೆ ಹೆದರಿ ಕೋಟೆತಾರಿಗಾ ಗ್ರಾಮದ ಹಿಂಡ್ಲೆಮನೆ ರಸ್ತೆಯ ಪಕ್ಕದ ಕಾಡಿನಲ್ಲಿ ಕಳೆನಾಶಕ ಕುಡಿದು ರೈತ ವಸಂತ ಸಾವನ್ನಪ್ಪಿದ್ದಾನೆ. ಈ ಸಂಬಂಧ ರಿಪ್ಪನ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!