
ಕಲಬುರಗಿ(ಜೂ.12): ಅಪರಿಚಿತ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ನಗರದ ಗುಬ್ಬಿ ಕಾಲೋನಿಯ ಲಕ್ಷ್ಮೀ ನಗರದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ 30-40 ವರ್ಷ ವಯಸ್ಸಿನಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದು ಡಿಸಿಪಿ ಆಡೂರು ಶ್ರೀನಿವಾಸಲು, ಎಂ.ಬಿ. ನಗರ ಪೊಲೀಸ್ ಠಾಣೆ ಪಿಐ ಚಂದ್ರಶೇಖರ ತಿಗಡಿ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Davanagere: ಚಿಕನ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಕೊಂದ ಕಿರಾತಕ ಪತಿ
ಹಾಡು ಹಗಲೇ ವಿಕಲಚೇತನನ ಕೊಲೆಗೆ ಯತ್ನ
ಕಲಬುರಗಿ ನಗರದ ಜನನಿಬಿಡ ಪ್ರದೇಶವಾದ ಗೋಲ್ಡ್‌ಹಬ್ ಮಳಿಗೆ ಸಂಕೀರ್ಣ ಹಾಗೂ ಲಾಹೋಟಿ ಪೆಟ್ರೊಲ್ ಬಂಕ್ ಹತ್ತಿರ ವಿಕಲಚೇತನನನ್ನು ನಾಲ್ವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ಫಿಲ್ಟರ್ ಬೆಡ್ ಏರಿಯಾದ ವಿಜಯಕುಮಾರ ಎಂಬಾತನನ್ನೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ. ವಿಜಯಕುಮಾರ ಬೈಕ್ ಮೇಲೆ ಹೋಗುತ್ತಿದ್ದಾಗ ಬೈಕ್ ಮೇಲೆ ಬೆನ್ನಟ್ಟಿಬಂದ 3-4 ಜನ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಯತ್ನಕ್ಕೆ ಕಾರಣವೇನು, ಯತ್ನಿಸಿದವರು ಯಾರು ಎಂಬುವುದು ತಿಳಿದುಬಂದಿಲ್ಲ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ವಿಜಯಕುಮಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಸ್ಟೇಷನ್ ಬಜಾರ್ ಪೊಲೀಸರು ಮತ್ತು ಸಂಚಾರಿ ಪೊಲೀಸ್ ಠಾಣೆ ಪಿಐ ಶಾಂತಿನಾಥ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!
ಕೆಲವು ತಿಂಗಳ ಹಿಂದಷ್ಟೆದುಷ್ಕರ್ಮಿಗಳು ದಾಳಿ ಮಾಡಿ ವಿಜಯನ ಒಂದು ಕಾಲನ್ನೆ ತುಂಡರಿಸಿದ್ದರು ಎನ್ನಲಾಗಿದ್ದು ಇದೀಗ ಅದೇ ದುಷ್ಕರ್ಮಿಗಳ ಗುಂಪೇ ಮತ್ತೆ ದಾಳಿ ನಡೆಸುವ ಮೂಲಕ ಈ ಕುಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆಗ ಮುಂದಾಗಿದ್ದಾರೆ. ಸ್ಟೇಷನ್ ಬಜಾರ್ ಪಿಐ ಸಿದ್ದರಾಮೇಶ ಗಡೇದ್, ಸಂಚಾರ ಟಾಣೆ ಪೊಲೀಸರು, ಇಎಆರ್‌ಎಸ್ ಪೊಲೀಸ್ ಗಸ್ತು ವಾಹನ ಸೇರಿದಂಎ ಅನೇಕ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪ್ರಕರಣದ ಎಲ್ಲಾ ಮಗ್ಗುಲಗಳ ತನಿಖೆ ಮುಂದುವರಿಸಿದ್ದಾರೆ.
ಚಾಕುವಿನಿಂದ ಇರಿದು ದುಷ್ಕರ್ಮಿಗಳು ಬೈಕನಲ್ಲಿಯೇ ಲಾಹೋಟಿ ಬಂಕ್ ಪಕ್ಕದ ರಸೆಯ ಮೂಲಕ ಪರಾರಿಯಾಗಿದ್ದಾರೆಂದು ಗೊತ್ತಾಗಿದೆ. ಈ ರಸ್ತೆಯಲ್ಲಿರುವ ಸೀಸಿ ಟೀವಿಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ