ಲೈಂಗಿಕ ಕಿರುಕಳ ವಿರೋಧಿಸಿದ ವಿದ್ಯಾರ್ಥಿನಿಯ ರೈಲಿನಡಿಗೆ ತಳ್ಳಿದ ಕಾಮುಕ, ಬಾಲಕಿ ಸ್ಥಿತಿ ಗಂಭೀರ!

Published : Oct 12, 2023, 11:05 PM IST
ಲೈಂಗಿಕ ಕಿರುಕಳ ವಿರೋಧಿಸಿದ ವಿದ್ಯಾರ್ಥಿನಿಯ ರೈಲಿನಡಿಗೆ ತಳ್ಳಿದ ಕಾಮುಕ, ಬಾಲಕಿ ಸ್ಥಿತಿ ಗಂಭೀರ!

ಸಾರಾಂಶ

ಕಳೆದ ಹಲವು ದಿನಗಳಿಂದ 17ರ ಬಾಲಕಿಯನ್ನು ಯುವಕನೊಬ್ಬ ಹಿಂಬಾಲಿಸುತ್ತಿದ್ದ. ನೀಟ್ ಕೋಚಿಂಗ್ ಕ್ಲಾಸ್ ಮುಗಿಸಿ ಮರಳುತ್ತಿದ್ದ ಬಾಲಕಿಯನ್ನು ತಡೆದು ನಿಲ್ಲಿಸಿದ ಯುವಕನ ಲೈಂಗಿಕ ಕಿರುಕುಳ ನೀಡಿದ್ದಾರೆ.ಆದರೆ ಯವಕನ ಕಿರುಕಳ ವಿರೋಧಿಸಿದ ಬಾಲಕಿಯನ್ನು ರೈಲಿನಡಿಗೆ ತಳ್ಳಿದ ಘಟನೆ ನಡೆದಿದೆ.

ಬರೇಲಿ(ಅ.12) ನೀಟ್ ಪರೀಕ್ಷೆಗಾಗಿ ಕೋಚಿಂಗ್ ಕ್ಲಾಸ್‌ಗೆ ತೆರಳುತ್ತಿದ್ದ 17ರ ಬಾಲಕಿ ಮೇಲೆ ಭೀಕರ ದಾಳಿಯಾಗಿದೆ. ತನ್ನ ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಕಾರಣಕ್ಕೆ ಬಾಲಕಿಯನ್ನು ರೈಲಿನಡಿಗೆ ತಳ್ಳಿದ ಘಟನೆ ನಡೆದಿದೆ. ಬಾಲಕಿ ಎರಡೂ ಕಾಲು ಮುರಿದಿದೆ. ಎಡಗೈ ಕೂಡ ಮುರಿದಿದೆ. ತೀವ್ರ ರಕ್ತಸ್ರಾವವಾಗಿರುವ ಕಾರಣ ಬಾಲಕಿ ಪರಿಸ್ಥಿತಿ ಗಂಭೀರವಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಯೋಗಿ ಆದಿತ್ಯನಾಥ್ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಕೆಲ ಪೊಲೀಸರು, ಅಧಿಕಾರಿಗಳನ್ನು ನಿರ್ಲಕ್ಷ್ಯದ ಕಾರಣಕ್ಕೆ ಅಮಾನತು ಮಾಡಲಾಗಿದೆ. ಯುವತಿ ಕುಟುಂಬಕ್ಕೆ ತಕ್ಷಣವೇ 5 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

ಬಾಲಕಿಗೆ 17 ವರ್ಷ. ನೀಟ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಬಾಲಕಿ ಪ್ರತಿ ದಿನ ಕೋಚಿಂಗ್ ಕ್ಲಾಸ್ ತೆರಳಿ ಮನೆಗೆ ಮರಳುತ್ತಿದ್ದಳು. ಕೆಲ ದಿನಗಳಿಂದ ವಿಜಯ್ ಅನ್ನೋ ಯುವಕನ ಕಾಟ ಹೆಚ್ಚಾಗಿದೆ. ಈ ಕುರಿತು ಪೋಷಕರಿಗೂ ಬಾಲಕಿ ಮಾಹಿತಿ ನೀಡಿದ್ದಳು. ಪ್ರತಿ ದಿನ ಯುವತಿಯನ್ನು ಹಿಂಬಾಲಿಸುತ್ತಿದ್ದ ವಿಜಯ್ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ಯುವಕ ನಟೊರಿಯಸ್ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದ. 

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ಮಂಗಳವಾರ ಕೋಚಿಂಗ್ ಕ್ಲಾಸ್ ಮುಗಿಸಿ ಮನೆಗೆ ಮರಳಲು ರೈಲು ನಿಲ್ದಾಣದ ಬಳಿ ಬಂದಿದ್ದಾಳೆ. ಈ ವೇಳೆ ಹಿಂಬಾಸಿಕೊಂಡು ಬಂದ ಈ ಯುವಕ ಬಾಲಕಿಯನ್ನು ತಡೆದು ನಿಲ್ಲಿಸಿ ಲೈಂಗಿಕರ ಕಿರುಕುಳ ನೀಡಲು ಆರಂಭಿಸಿದ್ದಾನೆ. ಬಾಲಕಿಯ ದೇಹ ಮುಟ್ಟಿ ವಿಕೃತಿ ಮೆರೆದಿದ್ದಾನೆ.. ಇಷ್ಟೇ ಅಲ್ಲ ಬಾಲಕಿಯನ್ನು ಗದರಿಸಲು ಆರಂಭಿಸಿದ್ದಾನೆ. ಆದರೆ ಕಿರುಕುಳ ವಿರೋಧಿಸಿದ ಬಾಲಕಿ, ಆತನಿಂದ ದೂರ ಸರಿಯುವ ಪ್ರಯತ್ನ ಮಾಡಿದ್ದಾಳೆ.

ಆಕ್ರೋಶಗೊಂಡ ಯುವಕ ಬಾಲಕಿಯನ್ನು ಬರುತ್ತಿದ್ದ ರೈಲಿನಡಿಗೆ ತಳ್ಳಿದ್ದಾನೆ. ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆ ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ಕೆಲ ಅದಿಕಾರಿಗಳನ್ನು, ಪೊಲೀಸರನ್ನು ಅಮಾನತು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಲೀವ್ ಇನ್ ಪಾರ್ಟ್ನರ್ ಕ್ರೈಂ, ಗೆಳತಿ ಮಾರ್ಫ್ ಫೋಟೋ ಹರಿಬಿಟ್ಟ ಬಾಯ್‌ಫ್ರೆಂಡ್!

ತಕ್ಷಣವೇ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಇತ್ತ ಬಾಲಕಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಹೈಯರ್ ಮೆಡಿಕಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇತ್ತ ಆರೋಪಿ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 354, 307, 504, 342, 326 ಜೊತೆಗೆ ಪೋಕ್ಸೋ ಕೇಸ್ ಕೂಡ ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!