ಕೊಪ್ಪಳ: ಶಾಲಾ ಆವರಣದಲ್ಲಿ ವಿದ್ಯಾರ್ಥಿ ನೇಣಿಗೆ ಶರಣು

By Kannadaprabha News  |  First Published Aug 26, 2021, 8:19 AM IST

*  ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಹಗೇದಾಳ ಬಳಿ ನಡೆದ ಘಟನೆ
*  ಬೆಂಗಳೂರಿಗೆ ದುಡಿಯಲು ಹೋಗುವುದಾಗಿ ಹಠ ಹಿಡಿದಿದ್ದ ಬಾಲಕ
*  ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ 


ಕೊಪ್ಪಳ(ಆ.26): ದುಡಿಯಲು ಬೆಂಗಳೂರಿಗೆ ತೆರಳುವುದಾಗಿ ಹಠ ಹಿಡಿದ ಯೊಬ್ಬ ಕುಟುಂಬದ ಸದಸ್ಯರೊಡನೆ ಜಗಳವಾಡಿ ಶಾಲಾ ಆವರಣದಲ್ಲಿ ನೇಣಿಗೆ ಶರಣಾದ ಘಟನೆ ಕಾರಟಗಿ ತಾಲೂಕಿನ ಹಗೇದಾಳ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. 

ಚಳ್ಳೂರು-ಹಗೇದಾಳದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ರಮೇಶ ಭೋಗಾಪುರ(16) ತನ್ನ ಶಾಲೆಯ ಆವರಣದಲ್ಲೇ ಮಂಗಳವಾರ ತಡರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವ.

Tap to resize

Latest Videos

ಸಾಲಗಾರರ ಕಾಟಕ್ಕೆ ಹೆದರಿ ಸ್ನಾತಕೋತ್ತರ ಪದವೀಧರ ರೈತ ಆತ್ಮಹತ್ಯೆ

ಬೆಂಗಳೂರಿಗೆ ದುಡಿಯಲು ಹೋಗುವುದಾಗಿ ಹಠ ಹಿಡಿದಿದ್ದ ಬಾಲಕ, ಮನೆಯವರು ಒಪ್ಪದ ಕಾರಣ, ಮಂಗಳವಾರ ಸಂಜೆ ತನ್ನ ಮನೆಯಲ್ಲಿ ಹಿರಿಯರೊಂದಿಗೆ ಜಗಳವಾಡಿದ್ದ. ಪಾಲಕರು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
 

click me!