ವಿಜಯೇಂದ್ರ ದಾಖಲಿಸಿರುವ ಕೇಸ್‌ಗೆ ಶ್ರೀರಾಮುಲು ಪಿಎ ರಾಜಣ್ಣ ಸ್ಪಷ್ಟೀಕರಣ

By Suvarna NewsFirst Published Jul 2, 2021, 5:24 PM IST
Highlights

* ಸಚಿವ ಶ್ರೀರಾಮುಲು ಆಪ್ತ ಸಹಾಯಕ ವಿರುದ್ಧ ಕೇಸ್
* ಸಿಸಿಬಿ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ರಾಮುಲು ಪಿಎ ಸ್ಪಷ್ಟೀಕರಣ
* ರಾಮುಲು ಪಿಎ ವಿರುದ್ಧ ದೂರು ನೀಡಿದ್ದ ಬಿವೈ ವಿಜಯೇಂದ್ರ

ಬೆಂಗಳೂರು, (ಜುಲೈ.02): ಸಿಎಂ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ದೂರು ನೀಡಿರುವ ಬಗ್ಗೆ ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ  ಪ್ರತಿತಿಕ್ರಿಯಿಸಿದ್ದಾರೆ.

ಸಿಸಿಬಿ ಪೊಲೀಸರಿಂದ ವಿಚಾರಣೆಗೊಳಗಾಗಿದ್ದ ಪ್ರವಾಸೋದ್ಯಮ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ರಾಜು ಇಂದು ಫೇಸ್​ಬುಕ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಅದು ಈ ಕೆಳಗಿನಂತಿದೆ.

ವಿಜಯೇಂದ್ರ ನಡೆಗೆ ಸಚಿವ ಶ್ರೀರಾಮುಲು ಅಸಮಾಧಾನ

ರಾಜಣ್ಣನ ಸ್ಪಷ್ಟೀಕರಣ 
ಕಳೆದ 24 ಗಂಟೆಯಿಂದ ನಡೆಯುತ್ತಿರುವ ವಿದ್ಯಮಾನಗಳ ಹಿನ್ನಲೆಲಿ ಎರಡು ಮಾತು, ವಾಸ್ತವ ಸಂಗತಿ ಹಾಗೂ ಸತ್ಯಂಶವನ್ನ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ...

ಸುಮಾರು 20 ವರ್ಷಗಳಿಂದ ಸಚಿವ ಮಾನ್ಯ ಬಿ.ಶ್ರೀರಾಮುಲು ಅವರ ನೆರಳಲ್ಲಿ ಬದುಕುತ್ತಿದ್ದೇವೆ. ಸಚಿವರ ಪ್ರಾಮಾಣಿಕ ಜನಸೇವೆಲಿ ನೂರಾರು ಮಂದಿ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ.

ಅರೆಸ್ಟ್ ಆಗಿದ್ದ ರಾಮುಲು ಆಪ್ತ ರಿಲೀಸ್, ಅನುಮಾನ ಮೂಡಿಸಿದ ಸಿಸಿಬಿ ನಡೆ

ಶ್ರೀರಾಮುಲು ಅವರಿಗಾಗಲಿ, ಮತ್ಯಾರಿಗೆ ಆಗಲಿ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ, ಬಿ ವೈ ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ.. 

"

ಪೊಲೀಸರು ಈ ಕುರಿತು ವಿಚಾರಣೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೋ ಕೇಳಿಸಿದ್ದು, ಅದು ನನ್ನದಲ್ಲ ಎಂದು ನನ್ನ ಧ್ವನಿಯಿಂದ ಗೊತ್ತಾಗಿದೆ. ನನ್ನ ಕುರಿತ ಸತ್ಯಂಶ ಅವರಿಗೆ ಮನವರಿಕೆಯಾಗಿದೆ. 

ನನ್ನ ವಾಯ್ಸ್ ಸ್ಯಾಂಪಲ್ ಗಳನ್ನು ಪಡೆದಿದ್ದು, ಸತ್ಯಾಂಶ ಖಾತ್ರಿ ಪಡಿಸಿಕೊಳ್ಳಲು ಅವರ ಬಳಿಯಿರುವ ಆಡಿಯೋ ಜೊತೆ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಲಿ ಮನವರಿಕೆಯಾಗಿದೆ. ಇವುಗಳನ್ನು FSLಗೂ ಕಳುಹಿಸಿಕೊಡಲಾಗಿದೆ. 

ಮತ್ತೆ ಹೇಳುವೆ..ಸಚಿವರ ಸೇವೆಯಲ್ಲಿ ಪ್ರಾಮಾಣಿಕವಾಗಿ ಅಳಿಲು ಸೇವೆ ಸಲ್ಲಿಸಲು ಬಂದವರಲ್ಲಿ ನಾನು ಒಬ್ಬ..

ಕಳೆದ ಒಂದು ದಿನದಿಂದ ಈಚೆಗೆ ನಡೆದ ಬೆಳವಣಿಗೆಗಳು ಹಾಗೂ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಾನು ಆಘಾತಕ್ಕೆ ಒಳಗಾಗಿದ್ದೇನೆ, ನನ್ನ ಕುಟುಂಬವೂ ನೋವಿನಲ್ಲಿ ಇದೆ. ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸುವ ಮುನ್ನ,  ನನ್ನನು ಕರೆಯಿಸಿ ಮಾತನಾಡಿದ್ದಿದ್ದರೆ, ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು. 

ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ. ನಾನು ಜೀವನಕ್ಕೆ ಕಷ್ಟ ಪಟ್ಟು ದುಡಿದುಕೊಂಡು ಬದುಕುವ ವ್ಯಕ್ತಿ. ಅಡ್ಡದಾರಿ ಹಿಡಿಯುವವನಲ್ಲ.. ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತೇವೆ ಹೊರತು ಅಡ್ಡದಾರಿ ಹಿಡಿದು ಬದುಕುವವರಲ್ಲ ಎಂದು ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

click me!