ಕಾವೇರಿ ಕೂಗು ಹೆಸರಲ್ಲಿ ಎಷ್ಟು ಹಣ ಸಂಗ್ರಹಿಸಿದ್ದೀರಿ? ವಿವರ ಕೊಡಲೇಬೇಕು

By Suvarna NewsFirst Published Jan 7, 2020, 8:18 PM IST
Highlights

ಕಾವೇರಿ ಕಾಲಿಂಗ್ ಸಂಬಂಧಿಸಿ ಈಶ ಫೌಂಡೇಶನ್ ನಿಂದ ಹಣ ಸಂಗ್ರಹಣೆ ವಿಚಾರ| ರಾಜ್ಯ ಸರ್ಕಾರಕ್ಕೂ ಚಾಟಿ ಬೀಸಿದ ಹೈಕೋರ್ಟ್| ಹಣ ಪಡೆಯುತ್ತಿದ್ದಾರೆ ಎಂದರೆ ನೀವು ಯಾಕೆ ತನಿಖೆ ಮಾಡಲಿಲ್ಲ?

ಬೆಂಗಳೂರು(ಜ. 07)  ಕಾವೇರಿ ಕಾಲಿಂಗ್ ಯೋಜನೆಗೆ ಹಣ ಸಂಗ್ರಹ ವಿಚಾರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆ ಒಳಪಟ್ಟಿದೆ.

ಆಧ್ಯಾತ್ಮಿಕ ಚಟುವಟಿಕೆ ನಡೆಸಿದಾಕ್ಷಣ ಕಾನೂನಿಗೆ ಅತೀತರಲ್ಲ. ಹಣ ನೀಡಲು ಒತ್ತಾಯಿಸುತ್ತಿಲ್ಲವೆಂದು ಸ್ಪಷ್ಟನೆ ನೀಡಿ. ಹಣ ಸಂಗ್ರಹದ ಬಗ್ಗೆ ವಿವರಣೆ ನೀಡಲು ಈಶ ಫೌಂಡೇಷನ್ ಗೆ ಹೈಕೋರ್ಟ್ ಸೂಚನೆ ನೀಡಿದೆ.

ಸರ್ಕಾರದ ಹೆಸರಲ್ಲಿ ಹಣ ಸಂಗ್ರಹವೆಂದು ಆರೋಪವಿದೆ. ಸರ್ಕಾರ ಈ ಬಗ್ಗೆ ವಿಚಾರಣೆ ಏಕೆ ನಡೆಸಿಲ್ಲ? ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದೇವೆ. ಈವರೆಗೆ ಯಾರೂ ದೂರು ಸಲ್ಲಿಸಿಲ್ಲವೆಂದು ಸರ್ಕಾರದ ಸ್ಪಷ್ಟನೆ. ಸಮರ್ಪಕ ಆಕ್ಷೇಪಣೆ ಸಲ್ಲಿಸಲು ಈಶ ಫೌಂಡೇಶನ್ ಕಾಲಾವಕಾಶ ಕೋರಿದೆ.

ವಿಚಾರಣೆ ಎರಡು ವಾರ ಹೈಕೋರ್ಟ್ ಮುಂದಕ್ಕೆ ಹಾಕಿದೆ. ಈಶ ಫೌಂಡೇಷನ್ ಅನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಕಾವೇರಿ ಕೂಗು ಅಭಿಯಾನದ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ನಿಮಗೆ ಅಧಿಕಾರ ಯಾರು ಕೊಟ್ಟವರು ಎಂದು ಪ್ರಶ್ನೆ ಮಾಡಿದೆ.

ಕಾವೇರಿ ಕೂಗು ಅಭಿಯಾನ ಎಂದರೇನು?

ಆಧ್ಯಾತ್ಮಿಕ ಚಟುವಟಿಕೆ ನಡೆಸಿದಾಕ್ಷಣ ಕಾನೂನಿಗೆ ಅತೀತರೇ?  ಈ ವಿಚಾರದಲ್ಲಿ ಸರ್ಕಾರ ಏಕೆ ಮೌನ ವಹಿಸಿದೆ? ಅಧ್ಯಾತ್ಮದ ಹೆಸರಿನಲ್ಲಿ ಏನು ಮಾಡಿದ್ರೂ‌ ಸರ್ಕಾರ ಸುಮ್ಮನೆ ಇರುತ್ತದೆಯೇ? ಹಣ ಸಂಗ್ರಹಿಸುತ್ತಿರುವ ವಿಷಯ ತಿಳಿದ ಕೂಡಲೇ ಸರ್ಕಾರ ತನಿಖೆ ನಡೆಸಬೇಕಿತ್ತು ಎಂದು ರಾಜ್ಯ ಸರ್ಕಾರಕ್ಕೂ ಚಾಟಿ ಬೀಸಿದೆ.

ಜನರಿಂದ ಯಾವ ರೀತಿ ಹಣ ಸಂಗ್ರಹಿಸಲಾಗುತ್ತಿದೆ? ಈವರೆಗೂ ಒಟ್ಟು ಎಷ್ಟು ಹಣ ಸಂಗ್ರಹಿಸಲಾಗಿದೆ? ವಿವರಣೆ ನೀಡುವಂತೆ ಈಶ ಫೌಂಡೇಶನ್ ಪರ ವಕೀಲರಿಗೆ ಸೂಚನೆ ನೀಡಲಾಗಿದೆ.

click me!