ಕಾಸರಗೋಡಿನ ಲವ್ ಜಿಹಾದ್ ಪ್ರಕರಣಕ್ಕೆ ಬೆಂಗಳೂರಿನಲ್ಲಿ ಜೀವ| ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲು| ಅನುಭವಿಸಿದ ನೋವು ತೋಡಿಕೊಂಡ ಸಂತ್ರಸ್ತ ಯುವತಿ| ಸೋಶಿಯಲ್ ಮೀಡಿಯಾ ಮೂಲಕ ಇಬ್ಬರ ನಡುವೆ ಪರಿಚಯ
ಬೆಂಗಳೂರು(ಜ. 07) ಕೇರಳದ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ತಿರುವು ಪಡೆದುಕೊಂಡಿದೆ. ಚಿತ್ರಹಿಂಸೆಯ ಒಂದೊಂದೆ ಸಂಗತಿಗಳು ಬೆಳಕಿಗೆ ಬರುತ್ತಿವೆ. ಇದೊಂದು ಲವ್ ಜಿಹಾದ್ ಪ್ರಕರಣದ ಕರಾಳ ಮುಖ ಎಂಬುದು ಗೊತ್ತಾಗುತ್ತಿದೆ.
ಕೈ ಮೇಲಿದ್ದ ‘ಓಂ’ ಟ್ಯಾಟೂವನ್ನು ಆಪರೇಷನ್ ಮಾಡಿಸಿ ತೆಗೆಸಿ ಹಾಕು. ಇನ್ನುಮುಂದೆ ದೇವಸ್ಥಾನಕ್ಕೆ ಕೈ ಮುಗಿದರೆ ಜೀವ ತೆಗೆಯುತ್ತೇನೆ..! ಇದು ಲವ್ ಜಿಹಾದ್ಗೆ ಒಳಗಾದ ಯುವತಿಗೆ ಆರೋಪಿ ಕೊಟ್ಟ ಒಂದೊಂದೇ ನೋವಿನ ಕರಾಳ ಮುಖ.
ಘಟನೆಯ ಮೂಲ ಕೇರಳದ ಕಾಸರಗೋಡು. ಸಂತ್ರಸ್ತ ಯುವತಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಬಳಿ ಕರೆದುಕೊಂಡು ಬಂದಿದ್ದರು.
ಸಂತ್ರಸ್ತೆಯ ಕರೆದುಕೊಂಡು ಬಂದ ಶೋಭಾ ಕರಂದ್ಲಾಜೆ
ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೇರಳದ ಮಲಪ್ಪುರಂನ ರಿಶಾಭ್, ಎಲೆಕ್ಟ್ರಾನಿಕ್ ಸಿಟಿಯ ಅನ್ಸಾರ್ ಮತ್ತು ಈತನ ಪತ್ನಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ದೂರಿನಲ್ಲಿ ಏನಿದೆ? ಸೋಶಿಯಲ್ ಮೀಡಿಯಾ ಇಸ್ಟಾಗ್ರ್ಯಾಮ್ ನಲ್ಲಿ ಪರಿಚಯವಾದ ವ್ಯಕ್ತಿ ನನಗೆ ದೂರವಾಣಿ ಸಂಖ್ಯೆ ನೀಡಿದ್ದು ನಂತರ ವಾಟ್ಸಪ್ ಮೂಲಕ ಇಬ್ಬರ ನಡುವೆ ಸಂದೇಶ ವಿನಿಮಯ ಆಗುತ್ತಿತ್ತು. ಪರಿಚಯನಾದ ರಿಶಾಭ್, ಮಂಗಳೂರಿಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಡಿ.12ರಂದು ಸ್ನೇಹಿತ ಅನ್ಸಾರ್ ಮನೆಯಲ್ಲಿ 4 ದಿನ ಇರಿಸಿ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ.
ಮದುವೆಗೂ ಮುನ್ನ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು. ಅದಕ್ಕೂ ಮೊದಲು ನಿನ್ನ ಕೈ ಮೇಲಿರುವ ‘ಓಂ’ ಟ್ಯಾಟೂವನ್ನು ಆಪರೇಷನ್ ಮಾಡಿಸಿ ತೆಗೆಸಬೇಕಾಗಿದೆ. ಹಣೆಯಲ್ಲಿ ಕುಂಕುಮ ಇಟ್ಟುಕೊಳ್ಳಬೇಡ. ಇದನ್ನೆಲ್ಲ ಒಪ್ಪಿದರೆ ಮಾತ್ರ ಇಸ್ಲಾಂಗೆ ಮತಾಂತರ ಆಗಿ ಇಬ್ಬರು ಒಟ್ಟಿಗೆ ಇರಲು ಸಾಧ್ಯವೆಂದು ವರಾತ ಬದಲಿಸಿದ್ದಾನೆ.
ಇದಕ್ಕೆ ನಾನು ಒಪ್ಪದಿದ್ದಾಗ ಕೆನ್ನೆಗೆ ಹೊಡೆದು, ಹೆಲ್ಮೆಟ್ನಿಂದ ತಲೆಗೆ ಹಲ್ಲೆ ನಡೆಸಿ ಚಿತ್ರ ಹಿಂಸೆ ಕೊಟ್ಟಿದ್ದಾನೆ. ಮತಾಂತರಕ್ಕೆ ಒಪ್ಪದೆ ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು
ಪ್ರಾಣ ಬೆದರಿಕೆ ಒಡ್ಡಿದ್ದಾನೆ. ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಸಂತ್ರಸ್ತೆ ಕೈ ಮುಗಿದಾಗ, ತಲೆ ಕೆಟ್ಟಿದಿಯಾ..? ಇನ್ನೊಮ್ಮೆ ದೇವರಿಗೆ ಕೈ ಮುಗಿಯುವುದನ್ನು ನೋಡಿದರೆ ನಿನ್ನ ಬಿಡುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ.
ನೀನು ಮಾತ್ರ ಅಲ್ಲ ನಿನ್ನ ತಂದೆಯನ್ನು ಬಿಟ್ಟು ತಾಯಿ, ಅಕ್ಕ, ತಮ್ಮನನ್ನು ಸಹ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಬೇಕು. ಇಲ್ಲವಾದರೆ,ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆತಂಕ ತೋಡಿಕೋಡಿಂದ್ದಾರೆ.
ಒತ್ತಾಯದಿಂದ ಗಾಂಜಾ ನೀಡಿದರು: ಎಲೆಕ್ಟ್ರಾನಿಕ್ ಸಿಟಿಯ ದೊಡ್ಡನಾಗಮಂಗಲ ಸಮೀಪದ ಮುನಿರೆಡ್ಡಿ ಲೇಔಟ್ನಲ್ಲಿ ಅನ್ಸಾರ್ ಮನೆಯಲ್ಲಿ 4 ದಿನ ನನ್ನನ್ನು ಇಟ್ಟುಕೊಳ್ಳಲಾಗಿತ್ತು. ಬೀಡಿಯಲ್ಲಿ ಗಾಂಜಾ ಸೇರಿಸಿ ಒತ್ತಾಯದಿಂದ ನನಗೆ ನೀಡಿ ರಿಶಾಭ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ನಿರ್ಭಯಾ ರೆಪಿಸ್ಟ್ ಗಳಿಗೆ ಒಮ್ಮೆಗೆ ಗಲ್ಲು!
ಆಶ್ರಯ ಕೊಟ್ಟವ ಪೊಲೀಸರ ಬಲೆಗೆ: ಮುನಿರೆಡ್ಡಿಪಾಳ್ಯ ಆರೋಪಿ ಅನ್ಸಾರ್ ಅಲಿಯಾಸ್ ಅನ್ವರ್(30) ಎಂಬಾತನನ್ನು ಬಂಧಿಸಲಾಗಿದೆ. ಅಕ್ವೇರಿಯಮ್ ಮಾರಾಟ ಮಾಡುತ್ತಿದ್ದ ಅನ್ಸಾರ್, ಆರೋಪಿ ರಿಶಾಭ್ ಕರೆತಂದಿದ್ದ ಸಂತ್ರಸ್ತೆಯನ್ನು ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ. ಆಕೆಯ ಮೇಲೆ ಅನ್ಸಾರ್, ಲೈಂಗಿಕ ದೌರ್ಜನ್ಯ ಎಸಗಿಲ್ಲ. ಆದರೆ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿ ಕಿರುಕುಳ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೈಹಿಕ ಮತ್ತು ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಹಿಂದು ಧರ್ಮಕ್ಕೆ ಅಪಮಾನ, ಲೈಂಗಿಕ ದೌರ್ಜನ್ಯ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ.