ರೇಪ್ ಮಾಡಿ ಮದುವೆ ಆಗ್ತೀನಿ ಎಂದು ಸಂತ್ರಸ್ತೆ ಕಾಲಿಗೆ ಬಿದ್ದ ಬೆಂಗಳೂರು ಟೆಕ್ಕಿ!

By Suvarna News  |  First Published Jan 7, 2020, 5:46 PM IST

ಇದೊಂದು ಕೊಂಚ  ವಿಚಿತ್ರ ರೇಪ್ ಕಹಾನಿ| ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿ ನಂತರ ಮದುವೆ ಆಗ್ತೆನೆ ಎಂದು ಕಾಲಿಗೆ ಬಿದ್ದ| ಬೆಂಗಳೂರಿನ ಕೋರಮಂಗಲದಲ್ಲಿ ವಿಚಿತ್ರ ಪ್ರಕರಣ


ಬೆಂಗಳೂರು(ಜ. 07) ಬೆಂಗಳೂರಿನಲ್ಲಿ ಉತ್ತರ ಭಾರತ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ದಿಶಾ ಕೇಸ್ ಬಗ್ಗೆ ತಿಳಿದಿದ್ದ ಆಕೆ ಕೊಲ್ಲಬೇಡ ಅಂತ ಕಣ್ಣೀರು ಹಾಕಿದ್ದಾಳೆ ಇದಾದ ಮೇಲೆ  ಎನ್ಕೌಂಟರ್ ಭಯದಲ್ಲಿ ಯುವತಿ ಕಾಲಿಗೆ ಕಾಮುಕ ಬಿದ್ದಿದ್ದಾನೆ.

ಪ್ರತಿಷ್ಠಿತ ಕಂಪನಿಯ ಸೀನಿಯರ್ ಇಂಜಿನಿಯರ್ ಕೃತ್ಯ ಎಸಗಿದ್ದು  ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಘಟನೆ ಸುದ್ದಿಯಾಗುತ್ತಿದೆ. ಟೆಕ್ಕಿ ವಿನೋದ್ ರಾಜ್ ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

Tap to resize

Latest Videos

ಮಸಾಜ್ ಪಾರ್ಲರ್ ರೇಡ್: ಸಿಕ್ಕಿಬಿದ್ದ ಬೆಂಗಳೂರು ಪೊಲೀಸರು!

ಇದೇ ಜನವರಿ 3 ರಂದು ಕೋರಮಂಗಲದ ಪಬ್ ಒಂದರಲ್ಲಿ ಇಬ್ಬರೂ ಸೇರಿ ಪಾರ್ಟಿ ಮಾಡಿದ್ದಾರೆ. ಹೊಸ ವರ್ಷದ ಶುಭಕೊರುವ ಹಿನ್ನಲೆ ಕಾಲ್ ಮಾಡಿದ್ದ ಮ್ಯಾಜೇಜರ್ ಮಾತಿಗೆ ಬೆಲೆಕೊಟ್ಟು ಆಕೆಯೂ ಬಂದಿದ್ದಾಳೆ.  ಈ ವೇಳೆ ಮಾತನಾಡಲು ಕರೆದು ಪಾರ್ಟಿಯಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ್ದಾರೆ.  ಯುವತಿಗೂ ಮದ್ಯಪಾನ ಮಾಡಿಸಿ ಒಂದೇ ರೂಂ ಬುಕ್ ಮಾಡಿಕೊಂಡಿದ್ದಾರೆ.

'ಕುಂಕುಮ ಇಟ್ಕೋಬೇಡ, ಕೈ ಮೇಲಿನ ಓಂ ಟ್ಯಾಟೂ ತೆಗೆಸು'

ಸ್ಥಳೀಯ ಲಾಡ್ಜ್ನ ನಲ್ಲಿ ರೂಂ.ನಂಬರ್ 302 ಬುಕ್ ಮಾಡಲಾಗಿದೆ. ಮದ್ಯದ ನಶೆಯಲ್ಲಿ ಸ್ನೇಹಿತೆ ಮೇಲೆ ಟೆಕ್ಕಿ ವಿನೋದ್ ಅತ್ಯಾಚಾರ ಎಸಗಿದ್ದಾನೆ. ಆಂಧ್ರಪ್ರದೇಶದಲ್ಲಿ ನಡೆದ ದಿಶಾ ರೇಪ್ ಆಂಡ್ ಮರ್ಡರ್ ಬಗ್ಗೆ ತಿಳಿದಿದ್ದ ಸಂತ್ರಸ್ತೆ  ಆಗಿದ್ದಾಯ್ತು ನನ್ನನ್ನ ಕೊಲ್ಲಬೇಡ ಅಂತ ಕಣ್ಣೀರು ಹಾಕಿದ್ದಾಳೆ.

ಇತ್ತ ರೇಪಿಸ್ಟ್ ಗಳನ್ನು ಎನ್ಕೌಂಟರ್ ಮಾಡಿದ್ದ ವಿಚಾರ ತಿಳಿದಿದ್ದ ಕಾಮುಕ ಹೀಗಾಗಿ "ನಾನು ನಿನ್ನ ಮದುವೆಯಾಗ್ತಿನಿ ಪ್ಲೀಸ್ ಪೊಲೀಸರಿಗೆ ದೂರು ನೀಡಬೇಡ..ಅಂತ ಯುವತಿಯ ಕಾಲಿಗೆ ಬಿದ್ದಿದ್ದಾನೆ. ಆದರೂ ಯುವತಿ  ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿ ವಿನೋದ್ ನನ್ನು ಬಂಧಿಸಲಾಗಿದೆ.

click me!