
ಮುಂಬೈ (ಸೆ. 01) ಪಾದಚಾರಿಗಳ ಮೇಲೆ ಹರಿದ ಕಾರು ನಾಲ್ವರನ್ನು ಬಲಿ ಪಡೆದುಕೊಂಡಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಭೀಕರ ಘಟನೆ ನಡೆದಿದ್ದು ನಿಯಂತ್ರಣ ತಪ್ಪಿದ ಕಾರು ನಂತರ ರೆಸ್ಟೋರೆಂಟ್‌ಗೆ ನುಗ್ಗಿದೆ. ಮುಂಬೈ ಕ್ರಾಪೋರ್ಡ್ ಮಾರುಕಟ್ಟೆ ಬಳಿ ಅಪಘಾತ ನಡೆದಿದೆ. ಗಾಯಗೊಂಡ ನಾಲ್ವರು ಮತ್ತು ಚಾಲಕನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರ್ಮಿಳಾ ಮಾಂಡ್ರೆ ಆಕ್ಸಿಡೆಂಟ್ ಕೇಸ್ ಗೆ ಬಿಗ್ ಟ್ವಿಸ್ಟ್
ಈಗ ಅಪಘಾತ ನಡೆಯುವಾಗ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ಮೇಲೆ ಮೂರು ತಿಂಗಳ ಹಿಂದೆಯೂ ಟ್ರಕ್ ಗೆ ಡಿಕ್ಕಿ ಹೊಡೆದ ಪ್ರಕರಣ ದಾಖಲಾಗಿತ್ತು.
ಸದಾನಂದ ಹೋಟೆಲ್ ಬಳಿ ಮಹಿಳೆಯರ ಮೇಲೆ ಹರಿದ ಕಾರು ಅವರನ್ನು ಕೆಪೇ ಜನತಾ ರೆಸ್ಟೋರೆಂಟ್ ತನಕ ಎಳೆದುಕೊಂಡು ಬಂದಿತ್ತು. ಫುಟ್ ಪಾತ್ ಮೇಲೆ ಜೋರಾಗಿ ಬಂದ ಕಾರು ಜೀವಗಳನ್ನು ಬಲಿಪಡೆದಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ