ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವನಪ್ಪ ಹತ್ಯೆಯಾದ ತಂದೆ. ಈತನ ಮಗ ಈರಣ್ಣ ಎಂಬಾತ ಕೊಲೆಗಾರ.
ರಾಯಚೂರು(ಜು.20): ಭೂಸ್ವಾಧೀನ ಪರಿಹಾರದ ಹಣಕ್ಕಾಗಿ ಮಗನೇ ತಂದೆಯನ್ನು ಕೊಲೆ ಮಾಡಿ, ಮೃತದೇಹವನ್ನು ಗುಟ್ಟಾಗಿ ಹೂತಿಟ್ಟ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವನಪ್ಪ (70) ಹತ್ಯೆಯಾದ ದುರ್ದೈವಿ ತಂದೆ. ಈತನ ಮಗ ಈರಣ್ಣ ಎಂಬಾತ ಕೊಲೆಗಾರ.
ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಇವರು ತಮ್ಮ ಜಮೀನು ನೀಡಿದ್ದರು. ಇದರಿಂದ ಬಂದ ಪರಿಹಾರದ ಹಣಕ್ಕಾಗಿ ತಂದೆ ಹಾಗೂ ಮಗನ ನಡುವೆ 15 ದಿನಗಳ ಹಿಂದೆ ಗಲಾಟೆಯಾಗಿತ್ತು. ಈ ವೇಳೆ, ಕೋಪಗೊಂಡ ಈರಣ್ಣ, ತಂದೆ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದ. ನಂತರ, ಯಾರಿಗೂ ಅನುಮಾನ ಬಾರದಂತೆ ಶವವನ್ನು ಹೆದ್ದಾರಿ ಪಕ್ಕದ ಮಣ್ಣಲ್ಲಿ ಹೂತಿಟ್ಟಿದ್ದ. ನಂತರ, ಮನೆಗೆ ಬಂದು ತಂದೆ ಕಾಣೆಯಾಗಿದ್ದಾನೆ ಎಂಬ ನಾಟಕವಾಡಿದ್ದ. ತಾಯಿ ಜೊತೆ ತಾನೇ ಪೊಲೀಸ್ ಠಾಣೆಗೆ ಹೋಗಿ, ತಂದೆ ಕಾಣೆಯಾಗಿದ್ದಾನೆಂದು ದೂರು ಕೊಟ್ಟಿದ್ದ.
Bengaluru : ಜನ್ಮವಿತ್ತ ತಂದೆ-ತಾಯಿಯನ್ನೇ ಕೊಲೆಗೈದು ಪರಾರಿಯಾದ ಸೈಕೋ ಪುತ್ರ
ಮೃತನ ಸಹೋದರರು ಅನುಮಾನಗೊಂಡು ಈತನನ್ನು ವಿಚಾರಿಸಿದಾಗ ಹೆದರಿ ಸತ್ಯ ಬಾಯಿಬಿಟ್ಟ. ಬಳಿಕ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.