Son Kills Father: ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದೇ ತಪ್ಪಾಯ್ತು, ತಂದೆ ಎದೆಗೆ ಗುಂಡಿಟ್ಟು ದೇಹ ಕತ್ತರಿಸಿ ಡ್ರಮ್ ತುಂಬಿದ ಮಗ

Published : Feb 24, 2026, 10:22 AM ISTUpdated : Feb 24, 2026, 10:54 AM IST
Murder

ಸಾರಾಂಶ

Son Kills Father : ನೀಟ್ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ತಂದೆ ಒತ್ತಡ ಹೇರಿದ್ದೇ ತಪ್ಪಾಗಿದೆ. ಕೋಪಗೊಂಡ ಮಗ, ತಂದೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ದೇಹವನ್ನು ಕತ್ತರಿಸಿ ಡ್ರಮ್ ನಲ್ಲಿಟ್ಟಿದ್ದಾನೆ. ಈಗ ತಪ್ಪೊಪ್ಪಿಕೊಂಡು ಜೈಲು ಸೇರಿದ್ದಾನೆ.

ಅಪ್ಪ ಕಾಣೆಯಾಗಿದ್ದಾರೆ ಅಂತ ದೂರು ನೀಡಿದ್ದ ಮಗನೇ ಕೊಲೆಗಾರನಾದ ಘಟನೆಯೊಂದು ಲಕ್ನೋದಲ್ಲಿ ಬೆಳಕಿಗೆ ಬಂದಿದೆ. ನೀಲಿ ಡ್ರಮ್ ಒಳಗಿದ್ದ ಶಿರಚ್ಛೇದಿತ ದೇಹ ನೋಡಿ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ. ಅಪ್ಪನನ್ನು ಹತ್ಯೆ ಮಾಡಿದ್ದ ಮಗ, ಅರ್ಧ ದೇಹವನ್ನು ಕತ್ತರಿಸಿ ಹೊರಗೆ ಎಸೆದ್ರೆ ಉಳಿದ ದೇಹವನ್ನು ಡ್ರಮ್ ನಲ್ಲಿ ಮುಚ್ಚಿಟ್ಟು ಅಲ್ಲೇ ನಿತ್ಯದ ಕೆಲ್ಸ ಮುಂದುವರೆಸಿದ್ದ.

ಅಪ್ಪನ ಹತ್ಯೆ ಮಾಡಿ ಡ್ರಮ್ ನಲ್ಲಿಟ್ಟ ಮಗ

ಘಟನೆ ಲಕ್ನೋದ ಆಶಿಯಾನಾ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ವರ್ಧಮಾನ್ ಪ್ಯಾಥಾಲಜಿ ಮಾಲೀಕ ಮನ್ವೇಂದ್ರ ಸಿಂಗ್ ಹತ್ಯೆಗೊಳಗಾದ ವ್ಯಕ್ತಿ. ಮನ್ವೇಂದ್ರ ಸಿಂಗ್ ಶಿರಚ್ಛೇದಿತ ಅರ್ಧ ದೇಹ ರೂಮಿನಲ್ಲಿ ನೀಲಿ ಡ್ರಮ್ನಲ್ಲಿ ಕಂಡು ಬಂದಿದೆ. ಫೆಬ್ರವರಿ 20 ರಿಂದ ಮನ್ವೇಂದ್ರ ಕಾಣೆಯಾಗಿದ್ದಾರೆ ಅಂತ ಮಗ ಅಕ್ಷತ್ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಎರಡೇ ದಿನದಲ್ಲಿ ಈ ಕಾಣೆಯಾದ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ

ಕಥೆ ಹೇಳಿದ್ದ ಅಕ್ಷತ್

ಫೆಬ್ರವರಿ 20 ರ ಬೆಳಿಗ್ಗೆ, ತಂದೆ ನನ್ನನ್ನು ಎಬ್ಬಿಸಿ, ದೆಹಲಿಗೆ ಹೋಗೋದಾಗಿ ಹೇಳಿದ್ದರು. ಮರುದಿನ ವಾಪಸ್ ಬರ್ತೇನೆ ಎಂದವರು ಬರ್ಲಿಲ್ಲ, ಅವರ ಮೂರೂ ಮೊಬೈಲ್ ಸ್ವಚ್ ಆಫ್ ಬರ್ತಿದೆ ಎಂದು ಅಕ್ಷತ್ ಪೊಲೀಸರಿಗೆ ಹೇಳಿದ್ದ. ಅವರ ಫೋನ್ ಕೊನೆ ಲೊಕೇಶ್ ಕಾಕೋರಿಯಲ್ಲಿ ಪತ್ತೆಯಾಗಿತ್ತು. ಆದ್ರೆ ಮೊಬೈಲ್ ಸಿಕ್ಕಿರಲಿಲ್ಲ. ಅನುಮಾನ ಬಂದ ಪೊಲೀಸರು ಅಕ್ಷತ್ ವಿಚಾರಣೆ ತೀವ್ರಗೊಳಿಸಿದ್ದರು. ವಿಚಾರಣೆ ವೇಳೆ ಅಕ್ಷತ್ ಮತ್ತೊಂದು ಕಥೆ ಶುರು ಮಾಡಿದ್ದ. ತಂದೆ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಎಂದಿದ್ದ. ನಂತ್ರ ಸತ್ಯ ಒಪ್ಕೊಂಡಿದ್ದಾನೆ. ಫೆಬ್ರವರಿ 20 ರಂದು ಬೆಳಿಗ್ಗೆ 4.30 ರ ಸುಮಾರಿಗೆ ನಡೆದ ಜಗಳದಲ್ಲಿ ಪರವಾನಗಿ ಪಡೆದ ಬಂದೂಕಿನಿಂದ ತನ್ನ ತಂದೆ ತಲೆಗೆ ಗುಂಡು ಹಾರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮನ್ವೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದರು. 

ಅಕ್ಷತ್ ಗೆ ತಂದೆ ಒತ್ತಡ ಹೇರಿದ್ದರು. ನೀಟ್ ಮೆಡಿಕಲ್ ಪ್ರವೇಶ ಪರೀಕ್ಷೆ ಪಾಸ್ ಆಗುವಂತೆ ಮಗನಿಗೆ ಒತ್ತಡ ಹೇರ್ತಿದ್ದರು. ಇದ್ರಿಂದ ಕೋಪಗೊಂಡ ಮಗ ತಂದೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. , ನಂತರ ದೇಹವನ್ನು ಕತ್ತರಿಸಿ, ದೇಹವನ್ನು ನೀಲಿ ಡ್ರಮ್ನಲ್ಲಿ ಬಚ್ಚಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರು ಆತನನ್ನು ಬಂಧಿಸುವ ಮೊದಲು ಆತ ಮನೆಯಲ್ಲೇ ಇದ್ದ. ಅಕ್ಷತ್ನ ತಂಗಿ ಈ ಘಟನೆಯನ್ನು ನೋಡಿದ್ದಳು. ಆದ್ರೆ ಅಣ್ಣನ ಕೋಪ ಹಾಗೂ ಬೆದರಿಕೆಗೆ ಆಕೆ ಹೆದರಿದ್ದಳು.

ತಂದೆ ಕೊಲೆ ಮಾಡಿದ ಅಕ್ಷತ್ ಸಾಕ್ಷ್ಯ ನಾಶಕ್ಕೆ ಯತ್ನ ಮಾಡಿದ್ದ. ಮೃತ ದೇಹವನ್ನು ಮೂರನೇ ಮಹಡಿಯಿಂದ ಕೆಳಗೆ ತಂದು ಕತ್ತರಿಸಿದ್ದ. ಅದ್ರಲ್ಲಿ ಕೆಲ ಭಾಗವನ್ನು ಕಾರಿನಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಉಳಿದ ಭಾಗವನ್ನು ಎಸೆಯುವ ಪ್ರಯತ್ನ ನಡೆದಿತ್ತು. ಅದಕ್ಕಾಗಿ ಅದನ್ನು ನೀಲಿ ಡ್ರಮ್ ನಲ್ಲಿ ಮನೆಯಲ್ಲೇ ಬಚ್ಚಿಟ್ಟಿದ್ದ. ರಕ್ತದ ಕಲೆ ಇರುವ ನೀಲಿ ಡ್ರಮ್ ಹಾಗೂ ಅದ್ರೊಳಗಿದ್ದ ಕತ್ತರಿಸಿದ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : CCTVಯಲ್ಲಿ ದೃಶ್ಯ ಸೆರೆ

ಅಣ್ಣನ ಕೃತ್ಯ ನೋಡಿದ್ರೂ ತಂಗಿ ಈ ವಿಷ್ಯವನ್ನು ಬಾಯಿಬಿಟ್ಟಿರಲಿಲ್ಲ. ಪೊಲೀಸರಿಗೆ ಹೇಳಿದ್ರೆ ಹತ್ಯೆ ಮಾಡೋದಾಗಿ ಅಕ್ಷತ್ ತಂಗಿಯನ್ನು ಬೆದರಿಸಿದ್ದ. ಕಾರನ್ನು ಸ್ವಚ್ಛಗೊಳಿಸಿ ಸಾಕ್ಷ್ಯ ನಾಶ ಮಾಡಿದ್ದ. ಮನ್ವೇಂದ್ರ ಮೂಲತಃ ಜಲೌನ್ ಮೂಲದವರು. ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದರು. ಮನ್ವೇಂದ್ರನ ಪತ್ನಿ ಕೆಲ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ಅಕ್ಷತ್ ತನ್ನ ತಂದೆಯ ಬಂದೂಕನ್ನು ಆಗಾಗ ಶೋಕಿಗಾಗಿ ಬಳಸ್ತಿದ್ದ. ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಧಿವಿಜ್ಞಾನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಬಳಿಕ ಸಹಪಾಠಿಯನ್ನ ಕೊಂದ ಅನ್ಯಕೋಮಿನ ಮೂವರು ವಿದ್ಯಾರ್ಥಿಗಳು
ಪಂಜಾಬ್‌ನಲ್ಲಿ ಮತ್ತೊಂದು ಗುಂಡಿನ ದಾಳಿ: ಹಾಡಹಗಲೇ 23 ವರ್ಷದ ನವ ವಿವಾಹಿತೆಗೆ ಗುಂಡೇಟು : CCTVಯಲ್ಲಿ ದೃಶ್ಯ ಸೆರೆ