Bengaluru Crime: ಆಸ್ತಿಗಾಗಿ ತಂದೆಯನ್ನೇ ಮುಗಿಸಲು ಮಲತಾಯಿ ಪ್ಲಾನ್‌?: ಮಗನಿಂದಲೇ ದೂರು

By Girish Goudar  |  First Published Apr 11, 2022, 11:43 AM IST

*  ಮಂಡ್ಯ ಮೂಲದ ಡಾಕ್ಟರ್ ರವಿಪ್ರಕಾಶ್ ಎಂಬುವರಿಂದ ದೂರು
*  ಮಲತಾಯಿ ಧನಮಣಿ, ತಂದೆಯ ಪಿಎ ವೆಂಕಟೇಶ್ ಮೂರ್ತಿಯ ಮೇಲೆ ದೂರು 
*  ತನಿಖೆ ಆರಂಭಿಸಿದ ಪೊಲೀಸರು  


ಬೆಂಗಳೂರು(ಏ.11):  ಆಸ್ತಿಗಾಗಿ(Property) ತಂದೆಯನ್ನೇ ಮಲತಾಯಿ ಮುಗಿಸ್ತಿದ್ದಾಳೆ ಎಂಬ ಆರೋಪವೊಂದು ಬೆಂಗಳೂರಿನ(Bengaluru) ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯ ಮಗನಿಂದಲೇ ಮಲತಾಯಿ ಹಾಗೂ ತಂದೆಯ ಪಿಎ ವಿರುದ್ಧ ದೂರು ದಾಖಲಾಗಿದೆ. ಮಂಡ್ಯ ಮೂಲದ ಡಾಕ್ಟರ್ ರವಿಪ್ರಕಾಶ್ ಎಂಬವರಿಂದ ದೂರು ದಾಖಲಾಗಿದೆ.  

ಸದ್ಯ ರವಿಪ್ರಕಾಶ್ ಆರ್. ಆರ್. ನಗರದಲ್ಲಿ ವಾಸವಾಗಿದ್ದಾರೆ. ರವಿಪ್ರಕಾಶ್ ತಂದೆ ಎಲ್. ಶಿವಲಿಂಗಯ್ಯರವರು ಇತ್ತೀಚಿಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಲಿಂಗಯ್ಯರವರು ನಿವೃತ್ತ ಚೀಫ್ ಇಂಜಿನಿಯರ್ ಆಗಿ ಕೆಲಸವನ್ನ ನಿರ್ವಹಿಸಿದ್ದರು. ಅದೇ ರೀತಿ ಆನಂದ ಸೋಷಿಯಲ್ ಎಜುಕೇಷನ್ ಟ್ರಸ್ಟ್‌ನ ಮುಖ್ಯಸ್ಥರಾಗಿದ್ದಾರೆ. 

Tap to resize

Latest Videos

Gadag: ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

ಈ ಟ್ರಸ್ಟ್‌ನ ಮುಖಾಂತರ ಅಂಬೇಡ್ಕರ್ ಡೆಂಟಲ್ ಕಾಲೇಜು ಹಾಗೂ ಎಜ್ಯುಕೇಷನ್ ಟ್ರಸ್ಟ್ ನಡೆಸುತ್ತಿದ್ದರು. ಇತ್ತೀಚಿಗೆ ಶಿವಲಿಂಗಯ್ಯರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿವಲಿಂಗಯ್ಯರವರ ಪತ್ನಿ ಕಳೆದ ಹದಿನೈದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೃತಪಟ್ಟ(Death) ಕೆಲವೇ ವರ್ಷದಲ್ಲಿ ಧನಮಣಿ ಎಂಬುವರನ್ನ ವಿವಾಹವಾಗಿದ್ದರು(Marriage). ಧನಮಣಿಯವರಿಗೆ ಅದಾಗ್ಲೇ ಮದ್ವೆಯಾಗಿ ಇಬ್ಬರು ಮಕ್ಕಳೂ ಇದ್ದಾರೆ. 

ಪರ್ಸನಲ್‌ ಅಸಿಸ್ಟೆಂಟ್ ‌ವೆಂಕಟೇಶ್ ಮೂರ್ತಿ ಕೂಡ ಕಳೆದ ಹತ್ತಾರು ವರ್ಷದಿಂದ ಶಿವಲಿಂಗಯ್ಯರವರ ಜೊತೆ ಇದ್ದಾರೆ.  ಇತ್ತೀಚಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ(Manipal Hospital) ಶಿವಲಿಂಗಯ್ಯ ದಾಖಲಾಗಿದ್ದರು. ರಕ್ತ ಪರೀಕ್ಷೆಯ ವೇಳೆ ಶಿವಲಿಂಗಯ್ಯರವರ ದೇಹದಲ್ಲಿ ಅಲ್ಯುಮಿನಿಯಮ್ ಕಂಟೆಂಟ್ ಇರೋದು ಖಚಿತವಾಗಿದೆ. ಇದರಿಂದ ಅನುಮಾನಗೊಂಡ ಮಗ ರವಿಪ್ರಕಾಶ್ ಇದೀಗ ದೂರು ನೀಡಿದ್ದಾರೆ.

ನಮ್ಮ ತಂದೆಯ ಆಸ್ತಿಯನ್ನ ಲಪಟಾಯಿಸಲು ತಂದೆಗೆ ಸ್ಲೋ ಪಾಯ್ಸನ್(Slow Poison) ನೀಡಲಾಗಿದೆ. ಇದರಿಂದಲೇ ತಂದೆಯ ಆರೋಗ್ಯ ಕೆಟ್ಟಿದೆ ಅಂತ ಆರೋಪ ಮಾಡುತ್ತಿದ್ದಾರೆ. ಇದೀಗ ಮಲತಾಯಿ ಧನಮಣಿ ಹಾಗೂ ತಂದೆಯ ಪಿಎ ವೆಂಕಟೇಶ್ ಮೂರ್ತಿಯ ಮೇಲೆ ರವಿಪ್ರಕಾಶ್ ದೂರು ನೀಡಿದ್ದಾರೆ‌. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು(Police) ತನಿಖೆಯನ್ನ ಆರಂಭಿಸಿದ್ದಾರೆ. 

ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

ಬೆಂಗಳೂರು(ಏ.09):  ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಗೋವಿಂದಪುರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ರಾಜಧಾನಿಗೆ ಸಗಟು ರೂಪದಲ್ಲಿ ಕೇಜಿಗಟ್ಟಲೇ ಡ್ರಗ್ಸ್‌(Drugs) ಪೂರೈಸುತ್ತಿದ್ದ ಆರು ಮಂದಿ ಅಂತಾರಾಜ್ಯ ಪೆಡ್ಲರ್‌ಗಳನ್ನು ಪ್ರತ್ಯೇಕವಾಗಿ ಸೆರೆಹಿಡಿದು 38 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಬೃಹತ್‌ ಮೌಲ್ಯದ ಡ್ರಗ್‌ ಜಾಲದ ವಿರುದ್ಧ ಬೃಹತ್‌ ಕಾರ್ಯಾಚರಣೆ ನಡೆಸುವ ಮೂಲಕ ಗೋವಿಂದಪುರ ಠಾಣೆ ಪೊಲೀಸರು ಇತಿಹಾಸ ಬರೆದಿದ್ದರು. 

Chitradurga: ವ್ಯಕ್ತಿಯ ತಲೆ ಕಡಿದು ಜಮೀನಿನಲ್ಲಿ ಹೂತಿಟ್ಟಿದ್ದ ಸಿನಿಮಾ ಕಲಾವಿದನ ಬಂಧನ

ಮುಂಬೈ(Mumbai) ಮೂಲದ ರಜನಿಬಾನು ಗುಪ್ತಾ, ತಮಿಳುನಾಡಿನ ಚೆನ್ನೈ ನಗರದ ಆಂಡ್ರೋ ಫಿಲಿಫ್ಸ್‌, ರಾಜೇಶ್‌, ಒಡಿಶಾ ಮೂಲದ ಸಮರಕರ್‌, ರಮೇಶ್‌ ಕುಮುಂದಿ ಹಾಗೂ ಮುಗುಲು ಶಿಷಾ ಬಂಧಿತರಾಗಿದ್ದು(Arrest), ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಅಂಕಿತ್‌ ಶರ್ಮಾ ಸೇರಿದಂತೆ ಇನ್ನುಳಿದವರ ಪತ್ತೆಗೆ ತನಿಖೆ ನಡೆದಿದೆ. ಈ ಎರಡು ತಂಡಗಳಿಂದ .1.45 ಕೋಟಿ ಮೌಲ್ಯದ 290 ಕೇಜಿ ಗಾಂಜಾ, 6.5 ಕೇಜಿ ಎಂಡಿಎಂಎ, 300 ಗ್ರಾಂ ಟ್ರೊಮೊಡೆಲ್‌, 75 ಗ್ರಾಂ ಕೊಕೇನ್‌ ಹಾಗೂ .35 ಕೋಟಿ ಮೌಲ್ಯದ ಮೆಥಾಕ್ಯುಲೊನ್‌ ಸೇರಿದಂತೆ ಒಟ್ಟು .37 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿಯಾಗಿತ್ತು. 

ಇತ್ತೀಚೆಗೆ ಮುಂಬೈ ಹಾಗೂ ಒಡಿಶಾ ಪೆಡ್ಲರ್‌ಗಳು ಪ್ರತ್ಯೇಕವಾಗಿ ನಗರಕ್ಕೆ ಗಾಂಜಾ(Marijuana) ಮತ್ತು ಸಿಂಥೆಟಿಕ್‌ ಡ್ರಗ್ಸ್‌ ಪೂರೈಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಜಗದೀಶ್‌ ಹಾಗೂ ಗೋವಿಂದಪುರ ಠಾಣೆ ಆರ್‌.ಪ್ರಕಾಶ್‌ ತಂಡ ಈ ಬೃಹತ್‌ ಬೇಟೆ ನಡೆಸಿದೆ. ನಾಗವಾರ ಸಮೀಪದ ಹಂದಿಜೋಗಿ ರುದ್ರಭೂಮಿ ಹತ್ತಿರ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಒಡಿಶಾ ಗ್ಯಾಂಗ್‌ ಸಿಕ್ಕಿಬಿದ್ದರೆ, ಎಚ್‌ಬಿಆರ್‌ ಲೇಔಟ್‌ 5ನೇ ಹಂತದ ಫಾರೆಸ್ಟ್‌ ಆಫೀಸ್‌ ಹಿಂಭಾಗದಲ್ಲಿ ಸಬ್‌ ಪೆಡ್ಲರ್‌ಗಳಿಗೆ ಡ್ರಗ್ಸ್‌ ಪೂರೈಸಲು ಬಂದಾಗ ಮುಂಬೈ ಗ್ಯಾಂಗ್‌ ಪೊಲೀಸರ ಗಾಳಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ಹೇಳಿದ್ದರು. 
 

click me!