ರಾಮನಗರ: ಆಸ್ತಿಗಾಗಿ ಮಗನಿಂದಲೇ ಹೆತ್ತ ತಾಯಿ ಮೇಲೆ ಹಲ್ಲೆ

By Kannadaprabha News  |  First Published Dec 9, 2023, 1:24 PM IST

ಬಿಡಿಸಲು ಬಂದ ಸಹೋದರ ಕುಮಾರನ ಮೇಲೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಶಾರದಮ್ಮನವರು ನೀಲಕಂಠ ಮತ್ತು ಚಂದ್ರಕಲಾ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 


ಮಾಗಡಿ(ಡಿ.09):  ಆಸ್ತಿ ವಿಚಾರವಾಗಿ ಮಗನೊಬ್ಬ ಹೆತ್ತ ತಾಯಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಮಾಡಬಾಳ್‌ ಹೋಬಳಿ ಬೆಸ್ತರಪಾಳ್ಯದಲ್ಲಿ ನಡೆದಿದೆ. ಗ್ರಾಮದ ಶಾರದಮ್ಮ ಗಾಯಾಳು. ಈಕೆಯ ಪುತ್ರ ನೀಲಕಂಠ ದುಷ್ಕೃತ್ಯ ಎಸಗಿದವನು.

ಗಾಯಾಳು ಶಾರದಮ್ಮರವರ ಪತಿ ಕೆಂಚಯ್ಯ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದು, ಮೂವರಿಗೂ ಮದುವೆಯಾಗಿದೆ. ಮೊದಲ ಮಗ ನೀಲಕಂಠ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ತಾಯಿಯೊಂದಿಗೆ ನೆಲೆಸಿದ್ದನು. ಪುತ್ರಿ ಚಂದ್ರಕಲಾಳನ್ನು ಕನಕಪುರ ತಾಲೂಕು ಎರಂದಪ್ಪನಹಳ್ಳಿಗೆ ಮದುವೆ ಮಾಡಿಕೊಡಲಾಗಿದೆ. 

Tap to resize

Latest Videos

ಚಾಮರಾಜನಗರ: ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಕಾಮುಕನ ಬಂಧನ

ಕೆಂಚಯ್ಯನವರ ಆಸ್ತಿಯ ಭಾಗಾಂಶದ ವಿಚಾರವಾಗಿ ಚಂದ್ರಕಲಾ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅಲ್ಲದೆ, ಆಕೆ ತನ್ನ ಸಹೋದರ ನೀಲಕಂಠನಿಗೆ ಆಸ್ತಿ ವಿಷಯವಾಗಿ ಕಿರುಕುಳ ನೀಡುವಂತೆ ಕುಮ್ಮಕ್ಕು ನೀಡಿದ್ದಾಳೆ. ಅದರಂತೆ ಆತ ತಾಯಿ ಶಾರದಮ್ಮನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. 

ಬಿಡಿಸಲು ಬಂದ ಸಹೋದರ ಕುಮಾರನ ಮೇಲೂ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಶಾರದಮ್ಮನವರು ನೀಲಕಂಠ ಮತ್ತು ಚಂದ್ರಕಲಾ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

click me!