ಪಿಎ​ಸ್‌ಐ ಹೆಸ​ರಿ​ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿ​ಕೆ

By Kannadaprabha NewsFirst Published Dec 16, 2020, 12:41 PM IST
Highlights

ಪಿಎಸ್‌ಐ ಕುಸುಮಾಧರ ಹೆಸರಿನ ನಕಲಿ ಫೇಸ್‌ಬುಕ್‌ ಖಾತೆಯಿಂದ ರಿಕ್ವೆಸ್ಟ್‌| ಪಿಎಸ್‌ಐ ಹೆಸರಿನಲ್ಲಿ ಹಣ ಕೇಳಲು ಆರಂಭಿಸಿದ ವಂಚಕರು| ಸಣ್ಣ ಸಹಾಯ ಮಾಡಿ ಎಂವ ಸಂದೇಶ ಕಳಿಸಿದ ಖದೀಮರು| 

ಕಾರವಾರ(ಡಿ.16): ಜಿಲ್ಲೆಯ ವಿವಿಧ ಕಡೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದ ಪಿಎಸ್‌ಐ ಕುಸುಮಾಧರ ಅವರ ಹೆಸರಿನಲ್ಲಿ ವಂಚಕರು ಹಣ ಕೇಳಲು ಆರಂಭಿಸಿದ್ದಾರೆ.

ಮಂಗಳವಾರ ಹಲವಾರು ಜನರಿಗೆ ಕುಸುಮಾಧರ ಅವರ ಹೆಸರಿನ ನಕಲಿ ಫೇಸ್‌ಬುಕ್‌ ಖಾತೆಯಿಂದ ರಿಕ್ವೆಸ್ಟ್‌ ಹೋಗಿದ್ದು, ಸಣ್ಣ ಸಹಾಯ ಮಾಡಿ ಎನ್ನುವ ಸಂದೇಶ ಕಳಿಸಿದ್ದಾರೆ. ಏನು ಸಹಾಯ ಎಂದು ಕೇಳಿದಾಗ ಹಣ ನೀಡುವಂತೆ ಕೋರಿದ್ದು, ನಾಳೆ ವಾಪಸ್‌ ನೀಡುತ್ತೇನೆ ಎಂದಿದ್ದಾರೆ. ಕುಸುಮಾಧರ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಪೊಲೀಸರು ನಕಲಿ ಖಾತೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆಲಸದ ಆಸೆ ತೋರಿಸಿ ಯುವಕನಿಗೆ ಪಂಗನಾಮ ಹಾಕಿದ ಖದೀಮರು

ಈ ಹಿಂದೆ ಭಟ್ಕಳ ಎಎಸ್‌ಪಿ ನಿಖಿಲ್‌ ಬುಳ್ಳಾವರ್‌, ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ರೇವಣಸಿದ್ದಪ್ಪ ಜೀರಂಕಲಗಿ ಒಳಗೊಂಡು ವಿವಿಧ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ತೆರೆದು ಹಣ ಕೇಳಿದ್ದರು.
 

click me!