
ನವದೆಹಲಿ(ಏ. 11) ಏಳು ತಿಂಗಳ ಮಗುವನ್ನು ಅಪಹರಣ ಮಾಡಿದ ಆರೋಪದ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಬಂಧಿಸಲಾಗಿದೆ. ಅಪಹರಣ ಮಾಡಿ 40 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದ.
ಕೆಲಸ ಕಳೆದುಕೊಂಡಿದ್ದ ಇಂಜಿನಿಯರ್ ತನ್ನ ಗರ್ಲ್ ಫ್ರೆಂಡ್ ಜತೆ ಸೆಟಲ್ ಆಗಲು ಈ ಕಿಡ್ನಾಪ್ ಮಾಡಿದ್ದ. ದೆಹಲಿ ಹೊರವಲಯದ ಮೋಹನ್ ಗಾರ್ಡನ್ ಪ್ರದೇಶದಿಂದ ಘಟನೆ ವರದಿಯಾಗಿದೆ. ಮಗುವನ್ನು ಕಿಡ್ನಾಪ್ ಆದ ಏಳು ಗಂಟೆಯಲ್ಲಿ ರಕ್ಷಣೆ ಮಾಡಲಾಗಿದೆ.
ಕೆಲಸದ ಒತ್ತಡ ತಾಳಲಾಗುತ್ತಿಲ್ಲ; ಡೆತ್ ನೋಟ್ ಬರೆದಿಟ್ಟು ಮ್ಯಾನೇಜರ್ ಆತ್ಮಹತ್ಯೆ
ಮಗು ಕಾಣದಿದ್ದಾಗ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ, ಮಧ್ಯಾಹ್ನ 12. 30 ರ ಸುಮಾರಿಗೆ ಶಿವಿ ಕೌಶಿಕ್ ಎಂಬ ಮಹಿಳೆ ಪೊಲೀಸರ ಬಳಿಗೆ ದೂರು ಕೊಟ್ಟಿದ್ದಾರೆ.
ತಮ್ಮ ಮನೆ ಬಳಿ ಬಾಡಿಗೆಗೆ ಇರುವ ಪ್ರಿಯಾನ್ಶು ಕುಮಾರ್ ಮಗು ಕರೆದುಕೊಂಡು ಹೋಗಿದ್ದರು ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಅವಳು ಬೇರೆ ಕೋಣೆಗೆ ಹೋದಾಗ ಅವನು ಮಗುವಿನೊಂದಿಗೆ ಪರಾರಿಯಾಗಿದ್ದಾನೆ.
ಇಲ್ಲಿಂದ ತೆರಳಿದ ಆರೋಪಿ ಮಗುವಿನ ತಂದೆಗೆ ಕ ಕರೆ ಮಾಡಿ 40 ಲಕ್ಷ ರೂ> ನೀಡಬೇಕು ಎಂದು ಬೇಡಿಕೆ ಇಟ್ಟಿದ್ದು ಹಣ ಕೊಡದಿದ್ದರೆ ಮಗು ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಪೊಲೀಸರ ಬಳಿ ದೂರು ಬಂದಾಗ ಆರೋಪಿಯ ಮೊಬೈಲ್ ಲೊಕೇಶನ್ ಆಧಾರಲ್ಲಿ ತನಿಖೆ ನಡೆಸಲಾಗಿದೆ.
ಬಿ ಟೆಕ್ ಮಾಡಿರುವ ಇಂಜಿನಿಯರ್ ಗೆ ಆತನ ಗೆಳತಿ ಮೇಲಿಂದ ಮೇಲೆ ಹಣಕ್ಕಾಗಿ ಡಿಮಾಂಡ್ ಮಾಡುತ್ತಿದ್ದಳು. ಕಾನ್ ಪುರ್ ಗೆಳತಿಯ ಬೇಡಿಕೆ ಪೂರೈಸಲಾಗದೆ ಕೆಲಸವಿಲ್ಲದ ಇಂಜಿನಿಯರ್ ಹೈರಾಣವಾಗಿದ್ದ. ಇದೇ ಕಾರಣದಿಂದ ಕಿಡ್ನಾಪ್ ಗೆ ಕೈ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ