'ಕೆಲಸದ ಒತ್ತಡ ತಾಳಲಾಗ್ತಿಲ್ಲ' ಮಹಿಳಾ ಮ್ಯಾನೇಜರ್ ಬ್ಯಾಂಕ್‌ನಲ್ಲಿಯೇ ನೇಣಿಗೆ ಶರಣು

Published : Apr 11, 2021, 03:03 PM ISTUpdated : Apr 11, 2021, 03:06 PM IST
'ಕೆಲಸದ ಒತ್ತಡ ತಾಳಲಾಗ್ತಿಲ್ಲ'  ಮಹಿಳಾ ಮ್ಯಾನೇಜರ್ ಬ್ಯಾಂಕ್‌ನಲ್ಲಿಯೇ ನೇಣಿಗೆ ಶರಣು

ಸಾರಾಂಶ

ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ/ ನೇಣಿಗೆ ಶರಣಾದ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್/ ಬ್ಯಾಂಕ್ ನಲ್ಲಿಯೇ ನೇಣು ಹಾಕಿಕೊಂಡ ಸ್ವಪ್ನಾ/ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ತಿರುವನಂತಪುರ(ಏ.  11)  ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಕೆಲಸದ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆ ಕುಥುಪರಂಬರದಿಂದ ಘಟನೆ ವರದಿಯಾಗಿದೆ.

ಇಬ್ಬರು ಮಕ್ಕಳ ತಾಯಿ  ಕೆಎಸ್ ಸ್ವಪ್ನಾ (40)  ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ..ಹಾಗಾಗಿ ಇಂಥ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ಪ್ರಿಯತಮನೊಂದಿಗೆ ಬೆಡ್ ರೂಂನಲ್ಲಿದ್ದವಳು ಗಂಡನ ಕೈಗೆ ಸಿಕ್ಕಳು!

ಕಳೆದ ವರ್ಷ ಕುಥುಪರಂಬರ ಶಾಖೆಗೆ ಸ್ವಪ್ನ ಬಂದಿದ್ದರು. ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ ಎಂದಿದ್ದ ಸ್ವಪ್ನಾ ಬ್ಯಾಂಕ್ ನಲ್ಲಿಯೇ ನೇಣು ಹಾಕಿಕೊಂಡಿದ್ದಾರೆ.

ಬೆಳಗ್ಗೆ ಕೆಲಸಕ್ಕೆ ಬಂದ ಸಿಬ್ಬಂದಿ ಸ್ವಪ್ನಾ ಅವರನ್ನು ನೇಣು  ಹಾಕಿಕೊಂಡ ಸ್ಥಿತಿಯಲ್ಲಿ ನೋಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಬೆಳಗ್ಗೆ 8.10ಕ್ಕೆ ಬ್ಯಾಂಕ್ ಗೆ ಬಂದ ಸ್ವಪ್ನಾ  8.17ಕ್ಕೆ ನೇಣು ಹಾಕಿಕೊಂಡಿದ್ದಾರೆ. ಸಿಸಿಟಿವಿಯ ದೃಶ್ಯಾವಳಿ ಎಲ್ಲ ವಿವರ ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು