ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಠಿಸಿರೋ ಕಿಡಿಗೇಡಿಗಳು ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಜನಸಾಮಾನ್ಯರಿಂದ ಹಣ ಕೀಳಲು ಮುಂದಾಗಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಮೇ.23): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಠಿಸಿರೋ ಕಿಡಿಗೇಡಿಗಳು ವಿನಯ್ ಗುರೂಜಿ ಹೆಸರಲ್ಲಿ ಜನಸಾಮಾನ್ಯರಿಂದ ಹಣ ಕೀಳಲು ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬದುಕಿನ ಬಗ್ಗೆ ಭಯ ಹುಟ್ಟಿಸುವ ಸಂದೇಶಗಳನ್ನ ಹಾಕ್ತಿರೋ ಕಿಡಿಗೇಡಿಗಳು ಹಣಕ್ಕಾಗಿ ಪೀಡಿಸುತ್ತಿದ್ದಾರೆ.
undefined
ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್:
ಅವಧೂತ ವಿನಯ್ ಗುರೂಜಿಯೇ ಮೇಸೆಜ್ ಮಾಡಿದಂತೆ ಮಾಡಿ ನಿಮ್ಮ ಡೇಟ್ ಅಫ್ ಬರ್ತ್ ಏನು. ನಿಮಗೆ ಕಾಳಸರ್ಪ ದೋಶವಿದೆ. ನೀವು ಒಂದು ವಾರ ಮನೆ ಬಿಟ್ಟು ಹೋಗಬಾರದು, ಪಾರ್ಕ್, ಹೊರಗಡೆ ಎಲ್ಲೂ ಹೋಗಬಾರದು. ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಅನ್ಸತ್ತೆ. ನಿಮ್ಮನ್ನ ದೇವರೇ ಕಾಪಾಡಬೇಕು, 45 ದಿನದಲ್ಲಿ ನಿಮಗೆ ದೋಶ ಇದೆ ಎಂದು ಭಯ ಹುಟ್ಟಿಸುವಂತಹಾ ಸಂದೇಶಗಳನ್ನ ಹಾಕಿ ಹಣ ಕೀಳುವ ದಂಧೆ ಆರಂಭಿಸಿದ್ದಾರೆ. ಆದರೆ, ಈ ಸಂದೇಶಗಳ ಬಗ್ಗೆ ಸ್ಪಷ್ಟಪಡಿಸಿರೋ ಮಠದ ಸಿಬ್ಬಂದಿ ಆ ರೀತಿ ಗುರುಗಳು ಯಾರಿಗೂ ಮೇಸೇಜ್ ಮಾಡುವುದಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಸಾಮಾಜಿಕ ಜಾಲತಾಣವನ್ನ ದುರುಪಯೋಗಪಡಿಸಿಕೊಂಡು ಮಠ, ಸ್ವಾಮಿಜಿಯ ಹೆಸರನ್ನ ಹಾಳು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ, ಕಾಂಗ್ರೆಸ್ ಸರ್ಕಾರದ ಹೊಸ ಪಠ್ಯಪುಸ್ತಕ ಮುದ್ರಣ!
ರಾಜಕಾರಣ ಪಾಲಿಗೆ ನಡೆದಾಡುವ ದೈವ:
ಅವಧೂತ ವಿನಯ್ ಗುರೂಜಿಯವರನ್ನ ನಡೆದಾಡುವ ದೈವ ಎಂದೇ ಭಕ್ತಗಣ ಕರೆಯುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಅವಧೂತ ವಿನಯ್ ಗುರೂಜಿ ಪಾದಪೂಜೆ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು ಹಲವು ಬಾರಿ ಮಠಕ್ಕೆ ಭೇಟಿ ನೀಡಿದ್ದಾರೆ.
ತಂದೆಯವ್ರ ತರ ಇಲ್ಲದೇ ಇರ್ಬಹುದು, ನನ್ನದೇ ಆದ ಆಲೋಚನೆ ಇದೆ:ದರ್ಶನ್