
ಉತ್ತರಖಂಡ(ಜು.19) ಹೆಣ್ಣು, ಹೊನ್ನು ಮಣ್ಣು ವಿಚಾರಕ್ಕೆ ಜಗಳ ಕೊಲೆಗಳು ನಡೆದಿದೆ. ಇದೀಗ ದುಷ್ಕರ್ಮಿಗಳು ಹತ್ಯೆಗೆ ಹೆಣ್ಣು, ಹೆಂಡ ಹಾಗೂ ಹಾವು ಬಳಕೆ ಮಾಡುತ್ತಿದ್ದರೆ. ಈ ಮೂರು ಅಸ್ತ್ರ ಬಳಸಿ ಯುವ ಉದ್ಯಮಿಯನ್ನು ಕೊಲೆ ಮಾಡಿರುವ ಘಟನೆ ಉತ್ತರಖಂಡದಲ್ಲಿ ನಡೆದಿದೆ. ಯುವ ಉದ್ಯಮಿ ತನ್ನ ಸಮ್ರಾಜ್ಯ ವಿಸ್ತರಣೆಗೆ ಸತತ ಪರಿಶ್ರಮದಲ್ಲಿದ್ದ. ಇದೇ ವೇಳೆ ಕಾರಿನಲ್ಲಿ 30ರ ಹರೆಯದ ಉದ್ಯಮಿ ಶವವಾಗಿ ಪತ್ತೆಯಾಗಿದ್ದ.ಕಾರಿನೊಳಗೆ ಕಾರ್ಬನ್ ಅಥವಾ ಗ್ಯಾಸ್ ಲೀಕ್ ಸೇರಿದಂತೆ ಆಮ್ಮಜನಕ ಕೊರೆತೆಯಿಂದ ಈ ಕೊಲೆ ಆಗಿರಬಹುದು ಅನ್ನೋ ಲೆಕ್ಕಾಚಾರವಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿ ಪೊಲೀಸರಿಗೆ ಅನುಮಾನ ತಂದಿದೆ. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರಿಗೆ ಹಲವು ಮಾಹಿತಿಗಳು ಲಭ್ಯವಾಗಿದೆ. ರಹಸ್ಯವಾಗಿ ಕೆಲ ಫೋನ್ ನಂಬರ್ ಟ್ರೇಸ್ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಇದು ಅವಘಡವಲ್ಲ, ಕೊಲೆ ಅನ್ನೋದು ಬಹಿರಂಗವಾಗಿದೆ. 30 ವರ್ಷದ ಅಂಕಿತ್ ಚೌವ್ಹಾಣ್‌ನನ್ನು ಹಾವು ಕಚ್ಚಿಸಿ ಕೊಲ್ಲಲಾಗಿದೆ ಅನ್ನೋ ಸತ್ಯ ಬಯಲಾಗಿದೆ. ಈ ಪ್ರಕರಣ ಸಂಬಂಧ ಹಾವಾಡಿಗನ ಬಂಧಿಸಲಾಗಿದೆ. ಇತ್ತ ಐವರ ವಿರುದ್ದ ಪ್ರಕರಣ ದಾಖಲಾಗಿದೆ.
ಜುಲೈ 15 ರಂದು ಉದ್ಯಮಿ ಅಂಕಿತ್ ಚೌವ್ಹಾಣ್ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ಮಾಹಿತಿಗಳನ್ನು ದಾಖಲಿಸಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಕುಟುಂಬಸ್ಥರು ಘಟನಗೆ ಆಘಾತ ವ್ಯಕ್ತಪಡಿಸಿದ್ದರು. ಇದೇ ವೇಳೆ ಉದ್ಯಮಿಯ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರಲ್ಲಿ ಇಬ್ಬರ ಹೆಸರು ಉಲ್ಲೇಖಿಸಿದ್ದರು.
ವಿಷಸರ್ಪ ಕಚ್ಚಿಸಿ ಮುದ್ದಿನ ಮಡದಿಯನ್ನೇ ಸಾಯಿಸಿದ್ದ ಆತ, ಪೊಲೀಸರು ಬಂದಾಗ ಅಳುತ್ತಾ ನಿಂತಿದ್ದ!
ಕಾರಿನ ಇಗ್ನಿಶನ್ ಕೂಡ ಆನ್ ಆಗಿತ್ತು. ಹೀಗಾಗಿ ಕಾರಿನ ಕಾರ್ಬನ್ ಅಥವಾ ಗ್ಯಾಸ್ ಲೀಕ್ ಸಮಸ್ಯೆಗಳಿಂದ ಉದ್ಯಮಿ ಮೃತಪಟ್ಟಿರಬಹುದು ಅನ್ನೋ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ಈ ಪ್ರಕರಣದ ತನಿಖೆ ಚುರುಕುಗೊಳಿಸಲು ಪೊಲೀಸರು ನಿರ್ಧರಿಸಿದ್ದರು. ಮರಣೋತ್ತರ ಪರೀಕ್ಷೆ ವರದಿ ಪೊಲೀಸರಿಗೆ ಅಚ್ಚರಿ ತಂದಿದೆ. ಉದ್ಯಮಿ ಹಾವಿನ ವಿಷದಿಂದ ಮೃತಪಟ್ಟಿದ್ದಾರೆ ಅನ್ನೋ ವರದಿ ಬಂದಿದೆ. ಜೊತೆಗೆ ದೇಹದಲ್ಲಿ ಮದ್ಯಪಾನ ಪ್ರಮಾಣ ಕೂಡ ಪತ್ತೆಯಾಗಿತ್ತು.
ಅನುಮಾನಗೊಂಡ ಪೊಲೀಸರು ಅಂಕಿತ್ ಚೌವ್ಹಾಣ್ ಫೋನ್ ಹಿಸ್ಟರಿ ಪರಿಶೀಲನೆ ನಡೆಸಿದ್ದಾರೆ. ಅಂಕಿಚ್ ಅಂತಿಮ ಕ್ಷಣದಲ್ಲಿ ಮಾಹಿ ಅನ್ನೋ ಯುವತಿ ಜೊತೆ ಮಾತನಾಡಿರುವುದು ಪತ್ತೆಯಾಗಿದೆ. ಮಾಹಿ ಫೋನ್ ಟ್ರೇಸ್ ಮಾಡಿದಾಗ, ಈಕೆ ಉತ್ತರ ಪ್ರದೇಶದ ಹಾವಾಡಿಗ ರಮೇಶ್ ನಾಥ್ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಇತ್ತ ರಮೇಶ್ ನಾಥ್ ಫೋನ್ ಟ್ರೇಸ್ ಮಾಡಿದಾಗ ಕೆಲ ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವ ಮಾಹಿತಿಗಳು ಲಭ್ಯವಾಗಿದೆ. ಈ ಕುರಿತು ಮತ್ತಷ್ಟು ದಾಖಲೆ ಸಂಗ್ರಹಿಸಿದ ಪೊಲೀಸರು ಹಾವಾಡಿಗ ರಮೇಶ್ ನಾಥ್‌ನನ್ನು ಬಂಧಿಸಿದ್ದಾರೆ.
ವಿಷ ಸರ್ಪ ಕಚ್ಚಿ ಆಸ್ಪತ್ರೆ ಸೇರಿದ, ಚೇತರಿಸಿಕೊಂಡು ಮರಳಿದ ಬೆನ್ನಲ್ಲೇ ಮತ್ತೆ ಹಾವು ಕಚ್ಚಿ ಸಾವು!
ಇತ್ತ ಮಾಹಿ ಅಲಿಯಾಸ್ ಡೋಲಿ ಆರ್ಯ, ಈಕೆಯ ಆಪ್ತರು ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ಈ ಆರೋಪಿಗಳ ಫೋನ್ ಸ್ವಿಚ್ ಮಾಡಿ ಪರಾರಿಯಾಗಿದ್ದಾರೆ. ಜುಲೈ 14 ರಂದು ಉದ್ಯಮಿ ಯವತಿ ಮಾಹಿ ಮನೆಗೆ ತೆರಳಿದ್ದ. ಈ ವೇಳೆ ಈ ಆರೋಪಿಗಳು ಮಾಹಿ ಮನೆಯಲ್ಲಿ ಇದ್ದರು ಅನ್ನೋದು ಲೋಕೇಶನ್ ಟ್ರೇಸ್‌ನಲ್ಲಿ ಪತ್ತೆಯಾಗಿದೆ. ಈ ವೇಳೆ ಉದ್ಯಮಿಗೆ ನಶೆ ಪಾರ್ಟಿ ನೀಡಿದ್ದಾರೆ. ಬಳಿಕ ಹಾವು ಬಿಟ್ಟು ಕೊಲೆ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ