Tunisha Sharma 20 ವರ್ಷಕ್ಕೆ ಬದುಕು ಅಂತ್ಯಗೊಳಿಸಿದ ನಟಿ, ಕಾರಣ ನಿಗೂಢ!

By Suvarna News  |  First Published Dec 24, 2022, 8:22 PM IST

ದಾಸ್ತಾನ್ ಇ ಕಾಬೂಲ್, ಭಾರತ್ ಕಾ ವೀರ್ ಪುತ್ರ, ಇಂಟರ್ನೆಟ್ ವಾಲಾ ಲವ್ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಕಾಣಿಸಿಕೊಂಡಿರುವ ಖ್ಯಾತ ನಟಿ ತುನಿಷಾ ಶರ್ಮಾ ಇನ್ನಿಲ್ಲ.
 


ಮುಂಬೈ(ಡಿ.24): ಧಾರವಾಹಿಗಳ ಮೂಲಕ ಜನಪ್ರಿಯವಾಗಿರುವ ಪ್ರತಭಾನ್ವಿತ ನಟಿ ತುನಿಷಾ ಶರ್ಮಾ ವಯಸ್ಸು ಕೇವಲ 20.  ಆದರೆ 20ನೇ ವಯಸ್ಸಿಗೆ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಕಿರುತೆರೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮಿಂಚಿದ ತುನಿಷಾ ಶರ್ಮಾ ಸಾವಿಗೆ ಕಾರಣ ತಿಳಿದಿಲ್ಲ. ಮಹಾರಾಷ್ಟ್ರದಲ್ಲಿ ಖ್ಯಾತ ಧಾರವಾಗಿ ಶೂಟಿಂಗ್ ವೇಳೆ ತುನಿಷಾ ಬದುಕಿಗೆ ಅಂತ್ಯ ಹಾಡಿದ್ದಾರೆ.  ಮೇಕಪ್ ರೂಂಗೆ ತೆರಳಿದ ತುನಿಷಾ ಕೆಲ ಹೊತ್ತಾದರೂ ವಾಪಸ್ ಬರಲಿಲ್ಲ. ಇದರಿಂದ ಅನುಮಾನಗೊಂಡ ಸಹ ಕಲಾವಿದರು ಮೇಕಪ್ ರೂಂಗೆ ತೆರಳಿದ್ದಾರೆ. ಈ ವೇಳೆ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ನೇಣು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಕ್ಕೂ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ತುನಿಷಾ ಶರ್ಮಾ ಅಗಲಿಕೆ ಇದೀಗ ಧಾರವಾಹಿ ಲೋಕಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅತೀ ಕಿರಿಯ ವಯಸ್ಸಿಗೆ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಹಲವು ಆಘಾತ ವ್ಯಕ್ತಪಡಿಸಿದ್ದಾರೆ. ತುನಿಷಾ ಶರ್ಮಾ ಇನ್ನಿಲ್ಲ ಅನ್ನೋದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವಳ ವಯಸ್ಸು ಕೇವಲ 20. ಶೂಟಿಂಗ್‌ನಲ್ಲಿ ತುಂಬಾ ನಗು ನಗುತ್ತಲೇ ಇರುತ್ತಿದ್ದಳು. ಯಾವತ್ತೂ ಯಾರನ್ನೂ ನೋಯಿಸಿಲ್ಲ. ಆದರೆ ಅವಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಅನ್ನೋದು ನಂಬಲಾಗುತ್ತಿಲ್ಲ ಎಂದು ದಾಸ್ತಾನ್ ಇ ಕಾಬೂಲ್ ಸಹ ನಟ ಮೊಹಿತ್ ಅಬ್ರೋಲ್ ಹೇಳಿದ್ದಾರೆ.

Tap to resize

Latest Videos

Gadag Crime: ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಯೂ ಚಿಕಿತ್ಸೆ ಫಲಿಸದೆ ಸಾವು

ಹಲವು ಸಾವಲಿನ ಪಾತ್ರಗಳನ್ನು ಅತೀ ಕಿರಿಯ ವಯಸ್ಸಿಗೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಳು. ಕೆಲ ಧಾರವಾಹಿಗಳಲ್ಲಿ ತುನಿಷಾ ಜೊತೆ ಕೆಲಸ ಮಾಡಿದ್ದೇನೆ. ಯಾವತ್ತೂ ಆಕೆ ಈ ನಿರ್ಧಾರ ತೆಗೆದುಕೊಳ್ಳುವ ನಟಿ ರೀತಿ ಎನಿಸಿರಲಿಲ್ಲ. ಇದರ ತನಿಖೆ ಅಗತ್ಯವಿದೆ ಎಂದು ತುನಿಷಾ ಸಹ ನಟಿಯರು ಒತ್ತಾಯಿಸಿದ್ದಾರೆ.

ಭಾರತ್ ಕಾ ವೀರ್ ಪುತ್ರ, ಮಹಾರಾಣಾ ಪತ್ರಾಪ್, ಚಕ್ರವರ್ತಿ ಸಾಮ್ರಾಟ್, ಗಬ್ಬಾರ್ ಪೂಂಚವಾಲ, ಶೇರ್ ಇ ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂರ್ಟನೆಟ್ ವಾಲಾ, ಇಶ್ಕ್ ಶುಬಾನ್ ಅಲ್ಲಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ದಾಸ್ತಾನ್ ಇ ಕಾಬೂಲ್‌ನಲ್ಲಿ ಅತ್ಯುತ್ತಮ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ಮುಂಬೈ ಸ್ಮಾಲ್ ಸ್ಕ್ರೀನ್‌ನಲ್ಲಿ ಅತೀ ದೊಡ್ಡ ಹೆಸರು ಮಾಡಿದ್ದರು.

ಚಿಕನ್ ಟಿಕ್ಕಾ ಮಸಾಲಾ' ಕಂಡುಹಿಡಿದ ಬಾಣಸಿಗ ಅಲಿ ಅಹಮದ್ ಅಸ್ಲಾಮ್ ನಿಧನ

ಧಾರವಾಹಿ ಮಾತ್ರವಲ್ಲ, ಮರಾಠಿ, ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿತೂರ್, ಬಾರ್ ಬಾರ್ ದೇಖೋ ಕಹಾನಿ 2, ದುರ್ಗಾ ರಾಣಿ ಸಿಂಗ್, ದಬಾಂಗ್ 3 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಬಾರ್ ಬಾರ್ ದೇಖೋ ಚಿತ್ರದಲ್ಲಿ ಕತ್ರಿನಾ ಕೈಫ್ ಬಾಲ್ಯದ ಪಾತ್ರ ಹಾಕಿದ್ದರು. ಇನ್ನು ದುರ್ಗಾ ರಾಣಿ ಸಿಂಗ್ ಚಿತ್ರದಲ್ಲಿ ವಿದ್ಯಾಬಾಲನ್ ಪುತ್ರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಧಾರಾವಾಹಿ ನಟಿಗಳು, ಮಾಡೆಲ್ ಬದುಕಿನ ಕುರಿತು ಆತುರದ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತುನಿಷಾ  
 

click me!