ಪ್ರಧಾನಿ ಮೋದಿ ರ‍್ಯಾಲಿ ಡ್ಯೂಟಿಗೆ ತೆರಳುತ್ತಿದ್ದ ಪೊಲೀಸ್ ವಾಹನ ಅಪಘಾತ, 6 ಅಧಿಕಾರಿಗಳು ಸಾವು!

By Suvarna News  |  First Published Nov 19, 2023, 3:35 PM IST

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳ ಕಾರು ಅಪಘಾತಕ್ಕೀಡಾಗಿದ್ದು, 6 ಪೊಲೀಸರು ಮೃತಪಟ್ಟಿದ್ದಾರೆ. ರ‍್ಯಾಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.


ಜೈಪುರ(ನ.19) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಯುಕ್ತ ಪ್ರಧಾನಿ ಮೋದಿ ಸತತ ರ‍್ಯಾಲಿ ನಡೆಸುತ್ತಿದ್ದಾರೆ. ರಾಜಸ್ಥಾನದ ಚುರುವಿನಲ್ಲಿ ಮೋದಿ ರ‍್ಯಾಲಿ  ಆಯೋಜಿಸಲಾಗಿತ್ತು. ಈ ರ‍್ಯಾಲಿಯ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಾರು ಅಪಘಾತಗೊಂಡಿದೆ. ಟ್ರಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 6 ಪೊಲೀಸರು ಮೃತಪಟ್ಟ ಘಟನೆ ಚುರು ಸಮೀಪದ ರಾಷ್ಟ್ರೀಯ ಹೆದ್ದಾರಿ 58ರಲ್ಲಿ ನಡೆದಿದೆ.

ಚುರುವಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ಆಯೋಜನೆಗೊಂಡಿತ್ತು. ಈ ರ‍್ಯಾಲಿಯ ವಿವಿಪಿ ಭದ್ರತೆ ಕರ್ತವ್ಯಕ್ಕೆ 6 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಚುರು ಜಿಲ್ಲೆಯ 6 ಪೊಲೀಸರು ಮಹೀಂದ್ರ ಕ್ಸೈಲೋ ಕಾರಿ ಮೂಲಕ ರ‍್ಯಾಲಿ ಸ್ಥಳಕ್ಕೆ ತೆರಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 58ರಲ್ಲಿ ತೆರಳತ್ತಿದ್ದ ವೇಳೆ ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.

Tap to resize

Latest Videos

TVS Excelಗೆ ಹಿಂದಿನಿಂದ ಬಸ್‌ ಡಿಕ್ಕಿ: ಬಸ್‌ ಚಕ್ರ ಹರಿದು ಮಹಿಳೆ ಸಾವು

ರಾಮಚಂದ್ರ, ಕುಂಭಾರಮ್, ತನರಾಮ್, ಲಕ್ಷ್ಣಣ ಸಿಂಗ್, ಸುರೇಶ್ ಎಂಬ ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇನ್ನು ಹೆಡ್‌ಕಾನ್ಸ್‌ಸ್ಟೇಬಲ್ ಸುಖರಾಮ್ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಿಂದ ರಾಜಸ್ಥಾನ ಪೊಲೀಸ್‌ನ ಖಡಕ್ ಅಧಿಕಾರಿಗಳು ನಷ್ಟವಾಗಿದ್ದಾರೆ. ಇದು ತುಂಬಲಾರದ ನಷ್ಟ ಎಂದು ರಾಜಸ್ಥಾನ ಡಿಜಿಪಿ ಹೇಳಿದ್ದಾರೆ.

ನೆವೆಂಬರ್ 25 ರಂದು ರಾಜಸ್ಥಾನದ ವಿಧಾನಸಭಾ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಫಲಿತಾಂ ಪ್ರಕಟಗೊಳ್ಳಲಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸಿರುವ ವಿಶ್ವಾಸದಲ್ಲಿರುವ ಬಿಜೆಪಿ ಸತತ ಸಮಾವೇಶ ಆಯೋಜಿಸುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಘಟಾನುಘಟಿ ನಾಯಕರು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಒಂದೂವರೆ ವರ್ಷದ ಮಗುವಿನ ಮೇಲೆ ಹರಿದ ಚಿಕ್ಕಪ್ಪನ ಕಾರು, ಮನೆಯಂಗಳದಲ್ಲೇ ದುರಂತ!

ಇತ್ತ ಕಾಂಗ್ರೆಸ್ ಕೂಡ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರ ವಿಸ್ತರಣೆಗೆ ಮುಂದಾಗಿದೆ. ಹಿಮಾಚಲ ಹಾಗೂ ಕರ್ನಾಟಕದ ಮಾದರಿಯಲ್ಲೇ ಇದೀಗ ಪಂಚ ರಾಜ್ಯಗಳ ಚುನಾಣವಣೆ ಗೆಲ್ಲಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಪಂಚ ರಾಜ್ಯಗಳಲ್ಲಿ ಹಲವು ಉಚಿತ ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆ.

click me!