
ವಿಜಯಪುರ (ಫೆ.13): ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ತಹಶಿಲ್ದಾರ ಕಚೇರಿಯ ಆವರಣದಲ್ಲಿ ಸಿಂದಗಿ ತಾಲೂಕಿನ ಸಾಸಬಾಳ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಬಸವರಾಜ್ (55) ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಪತ್ರ ಬರೆದಿಟ್ಟಿರುವ ಮೃತ ಶಿಕ್ಷಕ ಶಾಲೆಯಲ್ಲಿನ ಸಹ ಶಿಕ್ಷಕರು ಹಾಗೂ ಗ್ರಾಮದ ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ. ಡೆಟ್ ನೋಡ್ ನಲ್ಲಿ ಸಹ ಶಿಕ್ಷಕರು ಹಾಗೂ ಗ್ರಾಮದ ಕೆಲ ಜನರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ, ಸಿಂದಗಿ ಬಿಇಓ, ಸಿಆರ್ಪಿ ಜಿ ಎನ್ ಪಾಟೀಲ್, ಟಾರ್ಚರ್ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ಎಸ್ ಎಲ್ ಭಜಂತ್ರಿ ಮುಖ್ಯ ಶಿಕ್ಷಕ ಹುದ್ದೆಯ ಚಾರ್ಜ್ ಶಿಕ್ಷಕ ಬಸವರಾಜ ಗೆ ಬಿಟ್ಟು ಕೊಟ್ಟಿದ್ದರು. ಚಾರ್ಜ್ ಬಿಟ್ಟುಕೊಡುವ ವೇಳೆ ಶಿಕ್ಷಕರ, ಹಾಗೂ ಮಕ್ಕಳ ಹಾಜರಾತಿ,1ನೇ ನಂಬರ್ ರಿಜಿಸ್ಟರ್ ಹಸ್ತಾಂತರ ಮಾಡಲಾಗಿತ್ತು. ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮದಿನಾಂಕಯುಳ್ಳ 1ನೇ ನಂಬರ್ ರಿಜಿಸ್ಟರ್ ಅಪೂರ್ಣವಾಗಿತ್ತು. ಹಿಂದಿನ ಮುಖ್ಯ ಶಿಕ್ಷಕ ಎಸ್ ಎಲ್ ಭಜಂತ್ರಿ. 1ನೇ ನಂಬರ್ ರಿಜಿಸ್ಟರ್ ಸರಿಯಾಗಿ ಬರೆದಿರಲಿಲ್ಲ. ನಾನು ಸಿಆರ್ ಪಿ ಆಗುತ್ತೇನೆ ಆಗಾಗ ಬಂದು1ನೇ ನಂಬರ್ ರಿಜಿಸ್ಟರ್ ಸರಿಪಡಿಸೋದಾಗಿ ಹೇಳಿದ್ದ ಎಸ್ ಎಲ್ ಭಜಂತ್ರಿ. ಚಾರ್ಜ್ ಬಿಟ್ಟುಕೊಟ್ಟ ಬಳಿಕ ಸತಾಯಿಸಿದ್ದರು.
ಮುಖ್ಯಶಿಕ್ಷಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆತ್ಮಹತ್ಯೆಗೆ ಶರಣಾದ ಶಿಕ್ಷಕ ಬಸವರಾಜ್ ಈ ಬಗ್ಗೆ ಸಿಂದಗಿ ಬಿಇಓ ಗಮನಕ್ಕೂ ತಂದಿದ್ದರೂ ಪ್ರಯೋಜನ ಆಗಿಲ್ಲ. ಇದರ ಜೊತೆಗೆ ಟಾರ್ಚರ್ ನೋಟಿಸ್ ಕೊಡುತ್ತಿದ್ದ ಸಿಂದಗಿ ಬಿಇಓ ಎಚ್ ಎಂ ಹರಿನಾಳ. ಸಾಸಾಬಳ ಶಾಲೆಯ ಟಿಜಿಟಿ ಶಿಕ್ಷಕ ಬಿಎಂ ತಳವಾರ ಕೂಡ ಕಿರುಕುಳ ಆರೋಪ ಮಾಡಿದ್ದಾರೆ ಬಸವರಾಜ್.
Kodagu: ಶಾಲೆಗೆ ರಜೆಯೆಂದು ನದಿಗೆ ಹೋದ ಮಕ್ಕಳು: ಈಜು ಬಾರದೇ ಪ್ರಾಣ ಬಿಟ್ಟರು
ಗ್ರಾಮದ ಸಂಗಮೇಶ್ ಚಿಂಚೋಳಿಯಿಂದ ಅಲಿಗೆಷನ್ ಮಾಡಿ ಸಿಆರ್ ಪಿ ಹಾಗೂ ಸಂಗಮೇಶ್ ನನ್ನಿಂದ ಹಣ ಪಡೆದಿದ್ದರು. ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ಶಿಕ್ಷಕ ಬಸವರಾಜ್ ವಿರುದ್ಧ ಬಿಇಓಗೆ ದೂರು ಕೊಟ್ಟಿದ್ದ ಸಂಗಮೇಶ್ ಚಿಂಚೋಳಿ.
ACCIDENT: ಮದುವೆ ಮುಗುಸಿ ಮನೆಗೆ ಹೊರಟಿದ್ದ ಮಿನಿ ಬಸ್ ಡಿಕ್ಕಿ: ಆಟೋದಲ್ಲಿದ್ದ ಮೂವರು ಸಾವು
ನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ನನ್ನ ಹೆಂಡತಿ ಓರ್ವ ಮಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ