ಸಾಗುವಳಿ ಚೀಟಿ ಇರುವ ಯಾರದ್ದೋ ಹೆಸರಿನ ಸಾಗುವಳಿ ಚೀಟಿ ನಂಬರ್ ಬಳಸಿ ಅದೇ ಸಂಖ್ಯೆಯಲ್ಲಿ ಮತ್ತೊಬ್ಬರಿಗೆ ಜಮೀನು ಖಾತೆ ಮಾಡಿಕೊಟ್ಟ ಆರೋಪ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷನನ್ನ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.15): ಸಾಗುವಳಿ ಚೀಟಿ ಇರುವ ಯಾರದ್ದೋ ಹೆಸರಿನ ಸಾಗುವಳಿ ಚೀಟಿ ನಂಬರ್ ಬಳಸಿ ಅದೇ ಸಂಖ್ಯೆಯಲ್ಲಿ ಮತ್ತೊಬ್ಬರಿಗೆ ಜಮೀನು ಖಾತೆ ಮಾಡಿಕೊಟ್ಟ ಆರೋಪ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷನನ್ನ ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ನಡೆದಿದೆ. ಲಕ್ಷ್ಮಣ್ ಬಂಧಿತ ರೆವಿನ್ಯೂ ಇನ್‌ಸ್ಪೆಕ್ಟರ್.
ಕಳೆದ ಎರಡು ವರ್ಷದಿಂದ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯಲ್ಲಿ ಆರ್.ಐ. ಆಗಿರುವ ಲಕ್ಷ್ಮಣ್ ಹೊಸಪುರ ಗ್ರಾಮದ ನೀಲಯ್ಯ ಪೂಜಾರಿ ಅವರಿಗೆ ಸೇರಿದ ಸಾಗುವಳಿ ಚೀಟಿ ಸಂಖ್ಯೆ 666/12-13ನ್ನ ಬಳಸಿ ಅಭಿಷೇಕ್ ಬಿನ್ ಮಂಜುನಾಥ್ ಎಂಬುವವರಿಗೆ ಅಕ್ರಮವಾಗಿ ಹೊಸಪುರ ಗ್ರಾಮದ ಸರ್ವೇ ನಂಬರ್ 73ರಲ್ಲಿ 25 ಗುಂಟೆ ಜಮೀನನ್ನ ಅಕ್ರಮವಾಗಿ ಖಾತೆ ಮಾಡಿ ಅನುಮೋದನೆ ಮಾಡಿರುವ ಆರೋಪವಿದೆ.
ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ
ಅಭಿಷೇಕ್ ಬಿನ್ ಮಂಜುನಾಥ್ ಅವರ ಫಾರಂ ನಂಬರ್ 94ರ ಅಡಿ ಅರ್ಜಿ ಸಲ್ಲಿಸದೆ ಇದ್ದರೂ ಕೂಡ ರಾಜಸ್ವ ನಿರೀಕ್ಷಕ ಲಕ್ಷ್ಮಣ್ ನಿಯಮ ಬಾಹಿರವಾಗಿ ದಾಖಲೆ ಸೃಷ್ಟಿಸಿ ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸಿದ್ದಾರೆ. 2021ರ ಜೂನ್ 2ರಂದು ಜಮೀನಿನ ಖಾತೆಯನ್ನು ಅಭಿಷೇಕ್ ಬಿನ್ ಮಂಜುನಾಥ್ ರವರಿಗೆ ಅಕ್ರಮವಾಗಿ ಖಾತೆಗೆ ಅನುಮೋದಿಸಿದ್ದಾರೆ ಎಂದು ನೀಲಯ್ಯ ಪೂಜಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ದೂರು ಸ್ವಿಕರಿಸಿದ ಜಿಲ್ಲಾಧಿಕಾರಿ ಮೂಡಿಗೆರೆ ತಹಸೀಲ್ದಾರ್‌ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.
ದತ್ತಪೀಠ ಅರ್ಚಕರು, ಸದಸ್ಯರು, ಮುಜಾವರ್‌ಗೆ ಗನ್‌ಮ್ಯಾನ್ ಭದ್ರತೆ
ತನಿಖೆಯಲ್ಲಿ ಅಕ್ರಮ ಪತ್ತೆ: ತಹಸಿಲ್ದಾರ್ ತನಿಖೆಯಲ್ಲಿ ಅಕ್ರಮ ಖಾತೆ ಮಾಡಿರುವುದು ದೃಢಪಟ್ಟಿದ್ದು, ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎ ಮತ್ತು ಬಿ ಕಂದಾಯ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ರಾಜಸ್ವ ನಿರೀಕ್ಷಕ ಲಕ್ಷ್ಮಣ್‌ನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.