ಶಕ್ತಿ ಯೋಜನೆ ಅವಾಂತರ: ಫ್ರೀ ಬಸ್ ಹತ್ತಿ ನಾಪತ್ತೆಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ತಿಂಥಿಣಿ ಜಾತ್ರೆಯಲ್ಲಿ ಪತ್ತೆ!

By Ravi Janekal  |  First Published Feb 23, 2024, 11:27 AM IST

ಮನೆಯಲ್ಲಿ ಪೋಷಕರಿಗೆ ತಿಳಿಸದೇ ನಾಲ್ವರು ಅಪ್ರಾಪ್ತ ಬಾಲಕಿಯರು ಬಸ್ ಹತ್ತಿ ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಊರಿನ ಅಕ್ಕಪಕ್ಕದ ಮನೆಯವರಾದ ಬಾಲಕಿಯರು. ಆಧಾರ್ ಕಾರ್ಡ್‌ ಕೈಯಲ್ಲಿಡಿದು ಬಸ್ ಹತ್ತಿರುವ ಹೋಗಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ


ರಾಯಚೂರು (ಫೆ.23): ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಾರಿಗೆ 'ಶಕ್ತಿ ಯೋಜನೆ' ಮಹಿಳೆಯರಿಗೆ ಅನುಕೂಲ ಆಗುವುದರ ಜೊತೆಗೆ ಸಾಕಷ್ಟು ಅವಾಂತರಗಳಗಳಾಗಿವೆ. ಸೀಟಿಗಾಗಿ ಹೊಡೆದಾಟ, ಕಂಡಕ್ಟರ್ ನಡುವೆ ಜಗಳ, ಇದರ ಜೊತೆ ಉಚಿತ ಪ್ರಯಾಣವೆಂದು ಚಿಕ್ಕಮಕ್ಕಳು ಮನೆಬಿಟ್ಟು ಹೋದ ಘಟನೆಗಳು ನಡೆದಿವೆ. ಅದರ ಅವೆಲ್ಲವುಗಳ ಸಾಲಿಗೆ ರಾಯಚೂರು ಜಿಲ್ಲೆಯಲ್ಲಿ ಮತ್ತೊಂದು ಅವಾಂತರ ನಡೆದುಹೋಗಿದೆ.

ಮನೆಯಲ್ಲಿ ಪೋಷಕರಿಗೆ ತಿಳಿಸದೇ ನಾಲ್ವರು ಅಪ್ರಾಪ್ತ ಬಾಲಕಿಯರು ಬಸ್ ಹತ್ತಿ ಹೋಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ. ಒಂದೇ ಊರಿನ ಅಕ್ಕಪಕ್ಕದ ಮನೆಯವರಾದ ಬಾಲಕಿಯರು. ಆಧಾರ್ ಕಾರ್ಡ್‌ ಕೈಯಲ್ಲಿಡಿದು ಬಸ್ ಹತ್ತಿರುವ ಹೋಗಿದ್ದಾರೆ. ಆದರೆ ರಾತ್ರಿಯಾದರೂ ಮನೆಗೆ ಬಾರದ್ದು ಕಂಡು ಪೋಷಕರು ಆತಂಕಕ್ಕೊಳಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳ ನಾಪತ್ತೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಲಿಂಗಸೂಗೂರು ಪೊಲೀಸರು. ಅಪ್ರಾಪ್ತ ಬಾಲಕಿಯರ ಪತ್ತೆಗೆ ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದ್ದರು.

Tap to resize

Latest Videos

ಮುಂದುವರಿದ ಶಕ್ತಿ ಯೋಜನೆ ಅವಾಂತರ: ಸೀಟು ಹಿಡಿಯಲು ಹೋದ ವೃದ್ಧ ಬಸ್ಸಿನ ಚಕ್ರಕ್ಕೆ ಸಿಲುಕಿ ತೀವ್ರ ಗಾಯ!

ತಿಂಥಿಣಿ ಮೌನೇಶ್ ಜಾತ್ರೆಯಲ್ಲಿ ಪತ್ತೆ!

ನಾಪತ್ತೆಯಾದ ಮಕ್ಕಳಿಗಾಗಿ ಲಿಂಗಸೂಗೂರು ಸುತ್ತಮುತ್ತ ಹಳ್ಳಿಗಳಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು. ಒಂದು ತಂಡ ತಿಂಥಿಣಿ ಮೌನೇಶ್ವರ ಜಾತ್ರೆಯಲ್ಲೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ 

ಮುಂದುವರಿದ ಮಹಿಳೆಯರ 'ಶಕ್ತಿ' ಪ್ರದರ್ಶನ; ಕಂಡಕ್ಟರ್, ಡ್ರೈವರ್ ಮೇಲೆಯೇ ಮನಬಂದಂತೆ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

ತಿಂಥಣಿ ಜಾತ್ರೆಯಲ್ಲಿ ಪತ್ತೆಯಾದ ನಾಲ್ವರು ಬಾಲಕಿಯರು. ತಿಂಥಿಣಿ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿ ಜಾತ್ರೆಯಲ್ಲಿ ತಿರುಗಾಡಿದ್ದ ಬಾಲಕಿಯರು ದೇವಸ್ಥಾನದ ಬಳಿ ವಿಶ್ರಾಂತಿಗೆ ಕುಳಿತಿದ್ದಾಗ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಾಲಕಿಯರ ಕೈಯಲ್ಲಿ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ತಿಂಥಿಣಿ ಮೌನೇಶ್ವರ ಜಾತ್ರೆಗೆ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿರುವ ಬಾಲಕಿಯರು ಬಳಿಕ ನಾಲ್ವರು ಬಾಲಕಿಯರನ್ನು  ಪೊಲೀಸ್ ಠಾಣೆಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಫ್ರೀ ಪ್ರಯಾಣದಿಂದ ಮಕ್ಕಳಿಗೆ ಚಿನ್ನಾಟ ಹೆತ್ತವರಿಗೆ ಪ್ರಾಣಸಂಕಟ ಎಂಬಂತಾಗಿ ಕೊನೆಗೆ ಸುರಕ್ಷಿತವಾಗಿ ಮನೆ ಸೇರಿರುವ ಬಾಲಕಿಯರು. ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

click me!