: ವಿವಾಹಿತೆ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಸುರಭಿ(25) ಮೃತ ದುರ್ದೈವಿ. ಹುಣಸೂರು ಮೂಲದವರಾಗಿರುವ ಮಹಿಳೆ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪೋಷಕರು ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು.
ಹಾಸನ (ಫೆ.23): ವಿವಾಹಿತೆ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸುರಭಿ(25) ಮೃತ ದುರ್ದೈವಿ. ಹುಣಸೂರು ಮೂಲದವರಾಗಿರುವ ಮಹಿಳೆ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪೋಷಕರು ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಆದರೆ ಇದೀಗ ಅನುಮಾನಸ್ಪಾದವಾಗಿರುವುದು ಪೋಷಕರು ಶಾಕ್ ಆಗಿದ್ದಾರೆ. ಮಗಳು ಲೋ ಬಿಪಿಯಿಂದ ಮೃತಪಟ್ಟಿದ್ದಾಳೆಂದು ಸುರಭಿ ಮನೆಯವರಿಗೆ ಫೋನ್ ಮಾಡಿ ತಿಳಿಸಿರುವ ದರ್ಶನ್. ಆದರೆ ಸುರಭಿ ಪೋಷಕರು ಇದನ್ನು ಒಪ್ಪಲು ಸಾಧ್ಯವಿಲ್ಲ. ಆರೋಗ್ಯವಂತಳಾಗಿದ್ದಳು ಯಾವುದೇ ಲೋ ಬಿಪಿ ಅನಾರೋಗ್ಯ ಇರಲಿಲ್ಲ ಮಗಳನ್ನು ಗಂಡನೇ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಮಾಜಿ ಪ್ರಿಯಕರನ ಕಾಟಕ್ಕೆ ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ!
ದರ್ಶನ್ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ:
ಸುರಭಿಯೊಂದಿಗೆ ದರ್ಶನ್ ಮದುವೆಯಾಗಿದ್ದರೂ ಇನ್ನೊಬ್ಬಳೊಂದಿಗೆ ಅಕ್ರಮ ಸಂಬಂಧವಿಟ್ಟಕೊಂಡಿದ್ದಾನೆ. ಈ ವಿಚಾರ ಸುರಭಿಗೆ ಗೊತ್ತಾಗಿ ಮೊದಲಿಗೆ ದುಃಖ ಅನುಭವಿಸಿಕೊಂಡಿದ್ದಾಳೆ. ಆದರೆ ಈ ಸಂಬಂಧ ಅತಿರೇಕಕ್ಕೆ ಹೋದಾಗ ದಾಂಪತ್ಯ ಹಾಳಾಗಿದ್ದಕ್ಕೆ ಗಂಡನನ್ನ ಪ್ರಶ್ನಿಸಿದ್ದಾಳೆ. ಈ ಕಾರಣಕ್ಕೆ ಸುರಭಿಯೊಂದಿಗೆ ದರ್ಶನ ಜಗಳ ಮಾಡಿಕೊಂಡಿದ್ದಾನೆ. ನಮ್ಮ ಮಗಳನ್ನು ದರ್ಶನ್ ಕೊಲೆಮಾಡಿದ್ದಾನೆ, ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಕೊಂದಿದ್ದಾನೆ ಎಂದು ಸುರಭಿ ಪೋಷಕರು ಆರೋಪ ಮಾಡಿದ್ದಾರೆ.
ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್ ಕಥೆ ಕಟ್ಟಿದ ಕಾರು ಚಾಲಕ; ಮುಂದೆ ನಡೆದಿದ್ದೇನು?
ಸದ್ಯ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದರ್ಶನ್ ಹಾಗೂ ಅವರ ತಂದೆ, ತಾಯಿ, ಅಕ್ರಮ ಸಂಬಂಧ ಹೊಂದಿದ್ದಾಕೆ ವಿರುದ್ದ ಸುರಭಿ ಪೋಷಕರು ದೂರು ದಾಖಲಿಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ಮುಂದಾಗಿದ್ದಾರೆ.