ಷಡಕ್ಷರಿ ಮಠದ ಸ್ವಾಮೀಜಿ ರಾಸಲೀಲೆ ವಿಡಿಯೋ: 6 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಬಂಧನ

By Sathish Kumar KHFirst Published Oct 2, 2024, 12:40 PM IST
Highlights

ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಯನ್ನು ಹನಿಟ್ರ್ಯಾಪ್‌ ಮಾಡಿ 6 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ವಾಮೀಜಿಯ ರಾಸಲೀಲೆ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಬೆಂಗಳೂರು (ಅ.02): ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಯನ್ನು ಹನಿಟ್ರ್ಯಾಪ್‌ ಮಾಡಿ ಅವರಿಗೆ ರಾಸಲೀಲೆ ವಿಡಿಯೋವನ್ನು ತೋರಿಸಿ ಬರೋಬ್ಬರಿ  6 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಹನಿಟ್ರ್ಯಾಪ್ ಮಾಡಿ ಖೆಡ್ಡಾಕ್ಕೆ ಬೀಳಿಸಿದ್ದ ತಂಡದ ವಿದ್ಯಾ ಬಿರಾದರ್ ಪಾಟೀಲ್ ಹಾಗೂ ಆಕೆಯ ಸಹಚರರಾದ ಗಗನ್, ಸೂರ್ಯನಾರಾಯಣ್ ಎಂಬುವವರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿರುವ ಮಠ ಮಂದಿರಗಳ ಮೇಲೆ ದುಷ್ಟರ ಕಣ್ಣು ಬಿದ್ದಿದೆ. ಮಠ ಮಂದಿರದ ಸ್ವಾಮೀಜಿಗಳಿಗೆ ಹನಿಟ್ರ್ಯಾಪ್, ಬೆದರಿಕೆಗಳನ್ನು ಹಾಕಿ ಕೋಟ್ಯಂತರ ರೂ. ಹಣವನ್ನು ವಂಚನೆ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರಿಂದ ಬರುವ ದೇಣಿಗೆ ಆಧಾರದಲ್ಲಿಯೇ ನಡೆಯುವ ಮಠದ ಸ್ವಾಮೀಜಿಗಳ ಮೇಲೆ ಧಾರ್ಮಿಕ ಭಾವನೆ ಇಲ್ಲದೇ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆಯ ಚಿಂತನೆ ಎತ್ತ ಸಾಗುತ್ತಿದೆ ಎಂಬ ಅನುಮಾನಗಳು ಹಾಗೂ ಆತಂಕ ವ್ಯಕ್ತವಾಗುತ್ತಿದೆ. 

Latest Videos

ಇದನ್ನೂ ಓದಿ: ಗದ್ದನಕೇರಿ ರಾಮಾರೂಢ ಶ್ರೀಗಳಿಗೆ 1 ಕೋಟಿ ರೂ. ವಂಚಿಸಿದ್ದ ಜೆಡಿಎಸ್ ನಾಯಕ ಪ್ರಕಾಶ ಮುಧೋಳ ಅರೆಸ್ಟ್!

ಏನಿದು ರುದ್ರಮುನಿಸ್ವಾಮಿಜೀ ಹನಿಟ್ರ್ಯಾಪ್ ಪ್ರಕರಣ.?
ರುದ್ರಮುನಿ ಸ್ವಾಮಿಜಿಯ ರಾಸಲೀಲೆ ವಿಡಿಯೋ ಪೆನ್ ಡ್ರೈವ್ ತೋರಿಸಿ ಬೆದರಿಕೆ ಹಾಕಲಾಗಿದೆ. ಹಣ ಕೊಟ್ಟರೆ ಪೆನ್ ಡ್ರೈವ್ ಕೊಡುವುದಾಗಿ ಬೆದರಿಸಿದ್ದಾರೆ. ವಿದ್ಯಾ ಬಿರಾದರ್ ಪಾಟೀಲ್, ಗಗನ್, ಸೂರ್ಯನಾರಾಯಣ ಸೇರಿ ಮೂವರೂ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಗಾಂಧಿನಗರದ ರಾಮಕೃಷ್ಣ ಹೋಟೆಲ್‌ನಲ್ಲಿ ಒಟ್ಟು 6 ಕೋಟಿ ರೂ. ಹಣವನ್ನು ನೀಡುವಂತೆ ಡೀಲ್ ಮಾಡಲಾಗಿದೆ. ನೀವು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ರಾಸಲೀಲೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದೆ.

ಷಡಕ್ಷರಿ ಮಠದ ಸ್ವಾಮೀಜಿಗೆ ತಕ್ಷಣಕ್ಕೆ ನೀವು 50 ಲಕ್ಷ ರೂ. ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ರಾಸಲೀಲೆ ವಿಡಿಯೋದ ಒಂದು ತುಣುಕನ್ನು ಈಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವದಾಗಿ ಹೇಳಿದ್ದಾರೆ. ಇನ್ನು ಹಣವನ್ನು ಹೊಂದಿಸಲಾಗದೇ ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರು ಸ್ಥಳೀಯವಾಗಿ ಯಾವುದೇ ದೂರನ್ನು ನೀಡದೇ ಗುಪ್ತವಾಗಿ ಬಂದು ಸಿಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಈ  ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ಬೆನ್ನು ಹತ್ತಿ ಮೂವರು ವಂಚಕರನ್ನು ಕೆಡ್ಡಾಕ್ಕೆ ಬೀಳಿಸಿದ್ದಾರೆ.

ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್​! ಚಿನ್ನಾಭರಣ ವ್ಯಾಪಾರಿಗೆ 1.3 ಕೋಟಿ ರೂ. ಟೋಪಿ

ಗದ್ದನಕೇರಿ ಮಠದ ಸ್ವಾಮೀಜಿಯಿಂದ 1 ಕೋಟಿ ರೂ. ಪಡೆದು ವಂಚನೆ: ಇನ್ನು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ರಾಮರೂಢ ಮಠದ ಪರಮ ರಾಮರೂಢ ಸ್ವಾಮೀಜಿಗೆ, ಜೆಡಿಎಸ್ ನಾಯಕ ಪ್ರಕಾಶ್ ಮುಧೋಳ್ ಎನ್ನುವವರು ಬರೋಬ್ಬರಿ 1 ಕೋಟಿ ರೂ. ವಂಚನೆ ಮಾಡಿದ್ದರು. ನಾನು ಬೆಂಗಳೂರು ಡಿಸಿಪಿ, ನಿಮ್ಮ ವಿರುದ್ಧ ಹಾಗೂ ಮಠದ ವಿರುದ್ಧ ಗಂಭೀರ ದೂರು ಕೇಳಿ ಬಂದಿದ್ದು, ನೀವು 1 ಕೋಟಿ ರೂ. ಕೊಟ್ಟರೆ ಈ ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡಿದ್ದ ಸ್ವಾಮೀಜಿಯ ಮನೆಗೆ ಅಸಲಿ ಪೊಲೀಸರನ್ನು ಕಳುಹಿಸಿ ಅವರಿಂದ ಸ್ವಾಮೀಜಿಗೆ ಫೋನ್ ಕೊಟ್ಟು ಮಾತನಾಡಿಸಿ ಬೆದರಿಕೆ ಹಾಕಿದ್ದಾನೆ. ಸ್ವಾಮೀಜಿ ಎರಡು ಕಂತುಗಳಲ್ಲಿ ಒಂದು ಕೋಟಿ ರೂ. ಹಣವನ್ನೂ ಕೊಟ್ಟಿದ್ದಾರೆ. ಇದಾದ ಮೇಲೆಯೂ ಪುನಃ ಹಣಕ್ಕೆ ಬೆಡಿಕೆ ಇಟ್ಟಿದ್ದ ಆರೋಪಿ ಪ್ರಕಾಶ ಮುಧೋಳ ಸಿಕ್ಕಿಬಿದ್ದಿದ್ದಾನೆ.

click me!