
ಉಡುಪಿ (ಆ.29): ಪ್ರಯಾಣದ ವೇಳೆ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ನಡೆದಿದೆ. ಯುವತಿಯಿಂದ ಮಾಹಿತಿ ಪಡೆದ 24 ಗಂಟೆಯೊಳಗೆ ಮಣಿಪಾಲ ಪೊಲೀಸರು ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದ್ದಾರೆ.
ಭಟ್ಕಳದ ಶುರೈಂ(22) ಬಂಧಿತ ಆರೋಪಿ, ಭಾನುವಾರ ಬೆಳಗ್ಗೆ ನಡೆದಿದ್ದ ಘಟನೆ. ರೈಲಿನಲ್ಲಿ ಪ್ರಯಾಣಿಸುವಾಗ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ. ಈ ಬಗ್ಗೆ ತಕ್ಷಣ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದ ಯುವತಿ. ಕಾರ್ಯಪ್ರವೃತ್ತರಾದ ಪೊಲೀಸರು. ಯುವತಿ ನೀಡಿದ್ದ ಫೋಟೊ ಆಧರಿಸಿ ತನಿಖೆ ಶುರು ಮಾಡಿದ್ದಾರೆ. ಶನಿವಾರ ಬೆಂಗಳೂರು-ಮುರ್ಡೇಶ್ವರ ರೈಲಿನಲ್ಲಿ ಸಾವಿರಾರು ಜನರು ಪ್ರಯಾಣಿಸಿದ್ದರು. ಆದರೂ ಆರೋಪಿಗಳನ್ನು ಚಾಣಾಕ್ಷತನದಿಂದ ಪತ್ತೆ ಹಚ್ಚಿದ ಪೊಲೀಸರು.
ಸೆಕ್ಸ್‌ಗಾಗಿ 286 ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುಟ್ಯೂಬರ್‌ಗೆ ಪ್ರಕಟವಾಯ್ತು ಶಿಕ್ಷೆ!
ಮೊದಲಿಗೆ ರೈಲಿನಲ್ಲಿ ಪ್ರಯಾಣಿಸಿದ ಎಲ್ಲ ಪ್ರಯಾಣಿಕರ ವಿವರ ಪಡೆದುಕೊಂಡ ಪೊಲೀಸರು. ಬಳಿಕ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. ಮೂರು ಹಂತಗಳಲ್ಲಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು. ಆರೋಪಿ ಭಟ್ಕಳದಲ್ಲಿ ಇಳಿದುಹೋಗಿದ್ದನ್ನು ಪತ್ತೆ ಮಾಡಿದ ಪೊಲೀಸರು. ಯುವತಿ ಕಳಿಸಿದ ಫೋಟೊಕ್ಕೂ ಭಟ್ಕಳದಲ್ಲಿ ಇಳಿದವನದು ಮ್ಯಾಚ್ ಆಗಿದೆ. ಬಳಿಕ ಆರೋಪಿ ಅಲ್ಲಿದ ತೆರಳಿದ್ದರ ಬಗ್ಗೆ ಇಂಚಿಂಚು ಸಿಸಿಟಿವಿ ಪೂಟೇಜ್ ಆಧರಿಸಿ ಆರೋಪಿಯ ನಿವಾಸದಿಂದ ಎಳೆದುಕೊಂಡ ಬಂಧ ಪೊಲೀಸರು.
ಸದ್ಯ ಆರೋಪಿ ಪೊಲೀಸರ ವಶದಲ್ಲಿ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ