16ರ ಬಾಲಕಿಗೆ ಲವ್ ‌ಲೆಟರ್‌ ಕೊಟ್ಟ 66ರ ವೃದ್ಧ ಅರೆಸ್ಟ್‌!

By Kannadaprabha News  |  First Published Jun 25, 2020, 11:27 AM IST

16ರ ಬಾಲಕಿಗೆ ಲವ್‌ಲೆಟರ್‌ ಕೊಟ್ಟ66ರ ವೃದ್ಧ ಅರೆಸ್ಟ್‌! ಇದು ತಮಾಷೆಯಲ್ಲ... ಇಲ್ಲಿದೆ ನೋಡಿ ತಮಿಳುನಾಡಿನಲ್ಲಿ ನಡೆದ ಘಟನೆಯ ವಿವರ


ಚೆನ್ನೈ(ಜೂ.25): ಮುಪ್ಪಿನಲ್ಲಿ ಚಪಲ ಜಾಸ್ತಿ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ 60 ವರ್ಷ ದಾಟಿದ ವೃದ್ಧನೊಬ್ಬ 16 ವರ್ಷದ ಬಾಲಕಿಯೊಬ್ಬಳಿಗೆ ಲವ್‌ ಲೆಟರ್‌ ನೀಡಿದ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಹೋಮಕುಂಡದಲ್ಲಿ ಸುಟ್ಟಿದ್ದರು; ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಆರೋಪಿಗೆ ಷರತ್ತುಬದ್ಧ ಜಾಮೀನು

Tap to resize

Latest Videos

66 ವರ್ಷದ ಮೊಹಮ್ಮದ್‌ ಬಾಹಿರ್‌ ಬಾಷಾ ಎಂಬಾತನೇ ಈ ಚಪಲಚನ್ನಿಗರಾಯ. ವೃದ್ಧ ನೀಡಿದ ಪ್ರೇಮಪತ್ರದಿಂದ ಶಾಕ್‌ ಆದ ಬಾಲಕಿ ಅದನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ಬಳಿಕ ಪೋಷಕರು ಬಾಷಾನನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಆತ ಕ್ಷಮಾಪಣೆ ಕೇಳಿದ್ದ. ಆದರೆ, ಇಷ್ಟಕ್ಕೇ ಸುಮ್ನನಾಗದ ಆತ, ಬಾಲಕಿಗೆ ಮತ್ತೊಮ್ಮೆ ಲವ್‌ ಲೆಟರ್‌ ಕೊಟ್ಟು ಬೆದರಿಕೆ ಹಾಕಿದ್ದ.

ಬಳಿಕ ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಬಾಷಾ ಈಗ ಸೆಂಟ್ರಲ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

click me!