ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹೋಮಕುಂಡ ಹತ್ಯೆ ಪ್ರಕರಣ/ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್‌ಗೆ ಜಾಮೀನು/ ಮಧ್ಯಂತರ ಜಾಮೀನು ನೀಡಿದ ಉಡುಪಿ ನ್ಯಾಯಾಲಯ
ಉಡುಪಿ(ಜೂ. 24) ನಾಲ್ಕು ವರ್ಷದ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಪತ್ನಿ, ಪುತ್ರ ಮತ್ತು ಜ್ಯೋತಿಷಿಯೊಬ್ಬ ಸೇರಿ ಹತ್ಯೆ ಮಾಡಿ ಹೋಮಕುಂಡದಲ್ಲಿ ಸುಟ್ಟಿದ್ದರು ಎಂಬ ಆರೋಪ ಬಂದಿತ್ತು. ಪ್ರಮುಖ ಆರೋಪಿ ನಿರಂಜನ ಭಟ್ಟಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಘೋರ ಹತ್ಯೆ ಮಾಡಿ ಹೋಮಕುಂಡಲ್ಲಿಯೇ ಸುಟ್ಟಿದ್ದರು
ಜು.28, 2016 ರಲ್ಲಿ ನಡೆದಿದ್ದ ಉದ್ಯಮಿ ಭಾಸ್ಕರ ಶೆಟ್ಟಿಕೊಲೆ ಪ್ರಕರಣ. ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಜೊತೆ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಬಂದಿದ್ದು ನಿರಂಜನ ಭಟ್ ಸಹ ಪ್ರಮುಖ ಆರೋಪಿ.
ನಿರಂಜನ ಭಟ್ ತಂದೆ ಶ್ರೀನಿವಾಸ ಭಟ್(65) ಖಿನ್ನತೆ ಮತ್ತು ಅನಾರೋಗ್ಯದಿಂದ ನಿಧನರಾಗಿದ್ದು ಈ ಕಾರಣದಿಂದ ಮಧ್ಯಂತರ ಜಾಮೀನು ನೀಡಲಾಗಿದೆ. ತಂದೆ ನಿಧನದ ಕಾರಣ 14 ದಿನಗಳಮಟ್ಟಿಗೆ ಮಧ್ಯಂತರ ಜಾಮೀನು ನೀಡಲಾಗಿದ್ದು ಐದು ಲಕ್ಷ ರೂಪಾಯಿ ಗಳ ವೈಯ್ಯಕ್ತಿಕ ಬಾಂಡ್ ಬರೆಸಿಕೊಳ್ಳಲಾಗಿದೆ. ಉಡುಪಿ ಜಿಲ್ಲಾ ಸೆಷನ್ ನ್ಯಾಯಾಲಯ ಜಾಮೀನು ನೀಡಿದೆ.