* ವೇಶ್ಯಾವಾಟಿಕೆ ಜಾಲ ಬಯಲು
* ದಂಧೆಯ ಕಿಂಗ್ ಪಿನ್ ತೃತೀಯ ಲಿಂಗಿ
* ಐವರು ಮಹಿಳೆಯರ ರಕ್ಷಣೆ
* ಮಾನವ ಕಳ್ಳಸಾಗಾಟದ ದೊಡ್ಡ ಜಾಲ ಇರುವ ಶಂಕೆ
ಮುಂಬೈ(ಜು. 13) ವೇಶ್ಯಾವಾಟಿಕೆ ದಂಧೆ ಹಿಂದ ಪ್ರಭಾವಿಗಳು, ಮಹಿಳೆಯರು, ಪುರುಷರು ಇರುವಂತಹ ಅನೇಕ ಸುದ್ದಿಗಳನ್ನು ಕೇಳಿದ್ದೇವೆ. ಆದರೆ ಇಲ್ಲಿ ತೃತೀಯ ಲಿಂಗಿಯೊಬ್ಬರವು ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದು ಆರೋಪಿಯನ್ನು ಬಂಧಿಸಲಾಗಿದೆ.
35 ವರ್ಷದ ತೃತೀಯ ಲಿಂಗಿಯ ಜಾಲದಿಂದ ಐವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ನೆಹರೂ ನಗರ ವಿಲೇ ಪಾರ್ಲೆನಲ್ಲಿರುವ ಪ್ರದೇಶದಲ್ಲಿ ಜಾಲ ಸಕ್ರಿಯವಾಗಿತ್ತು.
ಪಿಜಿ ಬಳಿ ಮೋರಿಯಲ್ಲಿ ಸಿಕ್ಕ ಕಾಂಡೋಮ್ ರಾಶಿಗಳು ಹೇಳಿದ ಕತೆ
ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ತೃತೀಯ ಲಿಂಗಿ ಒಬ್ಬರಿಂದಲೇ ಮಾಹಿತಿ ಗೊತ್ತಾಗಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಕೋಣೆಯೊಂದರಲ್ಲಿ ಐವರು ಮಹಿಳೆಯರು ಇದ್ದರು.
ಭಾರತೀಯ ದಂಡ ಸಂಹಿತೆ ಮತ್ತು ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ (ಪಿಟಾ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.