
ಗ್ರೇಟರ್ ನೋಯ್ಡಾ (ಡಿ. 09) ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಅತಿದೊಡ್ಡ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಏಳು ಮಹಿಳೆಯರು ಸೇರಿದಂತೆ ಹದಿನೆಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಜಗತ್ ಫಾರ್ಮ್ ಮಾರುಕಟ್ಟೆಯಲ್ಲಿರುವ ಸ್ಪಾ ಕೇಂದ್ರದ ಮೇಲೆ ಸ್ಥಳೀಯ ಪೊಲೀಸರು ದಾಳಿ ನಡೆಸಿದಾಗ ಈ ದಂಧೆ ಬಯಲಾಗಿದೆ.
ದೊಡ್ಡ ದೊಡ್ಡವರಿಗೆ ಬಲೆ ಬೀಸುತ್ತಿದ್ದ ಬಿಗ್ ಬಾಸ್ ಸ್ಪರ್ಧಿ ಮಾಜಿ ಲವರ್!
ಸ್ಥಳೀಯ ಪೊಲೀಸರ ಸಹಕಾರದಲ್ಲಿ ಖಚಿತ ಮಾಹಿತಿ ಆಧಾರದಲ್ಲಿ ಸ್ಪಾ ಮೇಲೆ ದಾಳಿ ಮಾಡಿದಾಗ ವೇಶ್ಯಾವಾಟಿಕೆ ಜಾಲ ಬಯಲಾಗಿದೆ ಎಂದು ಗ್ರೇಟರ್ ನೋಯ್ಡಾದ ಉಪ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದ ಏಳು ಮಹಿಳೆಯರು ಮತ್ತು 11 ಪುರುಷರನ್ನುಬಂಧಿಸಲಾಗಿದೆ. 8 ಮೊಬೈಲ್ ಫೋನ್‌ಗಳು, ಸಿಸಿಟಿವಿಯ ಎರಡು ಡಿಜಿಟಲ್ ವಿಡಿಯೋ ರೆಕಾರ್ಡರ್‌ಗಳು, ಹಳದಿ ಬಣ್ಣದ ಲೋಹದ ಎಂಟು ಆಭರಣ ವಸ್ತುಗಳು ಮತ್ತು ವಯಾಗ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ