ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ/ ದಾಖಲೆ ಯಾವುದು ಬಿಡುಗಡೆ ಮಾಡಲಿಲ್ಲ/ ಮಹಾನ್ ನಾಯಕನ ಹೆಸರು ಬಹಿರಂಗ/ ಡಿಕೆ ಶಿವಕುಮಾರ್ ವಿರುದ್ಧ ಸಮರ/ ಡಿಕೆಶಿ ರಾಜಕಾರಣದಲ್ಲಿ ಮುಂದುವರಿಯಲು ನಾಲಾಯಕ್
ಬೆಂಗಳೂರು(ಮಾ. 27) ಅತ್ತ ಸಿಡಿ ಲೇಡಿ ಪೋಷಕರು ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂಬ ಮಾತುಗಳನ್ನು ಹೇಳಿದ ಕೆಲವೇ ಕ್ಷಣದಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಮಾತನಾಡುತ್ತ ಮಹಾನಾಯಕ ಯಾರು ಎಂಬುದನ್ನು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ರಮೇಶ್ ನಾನು ಯಾರಿಗೂ ಹೆದರಲ್ಲ.. ನಾನು ಗಂಡಸು.. ಆತ..ಎನ್ನುತ್ತಾ ಹರಿಹಾಯ್ದರು. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ಯುವತಿ ಪೋಷಕರೇ ಹೇಳಿದ್ದಾರೆ ಅವರಿಗೆ ಧನ್ಯವಾದ.. ಎಲ್ಲವನ್ನು ನೀವೇ ನೋಡುತ್ತಿದ್ದೀರಿ ಎಂದರು.
ಸಿಡಿ ಲೇಡಿ ಪೋಷಕರಿಂದ ನೇರವಾಗಿ ಡಿಕೆಶಿ ಮೇಲೆ ಆರೋಪ
ನನ್ನ ಬಳಿ ಹನ್ನೊಂದು ಸಾಕ್ಷಿಗಳಿದ್ದು ಅದನ್ನು ಎಸ್‌ಐಟಿಗೆ ನೀಡುತ್ತೇನೆ ಎಂದರು. ಮಾಹಾನಾಯಕ ಯಾರು ಎಂಬುದನ್ನು ಬಹಿರಂಗ ಮಾಡಿ ಎಂದಾಗ ಹೆಸರು ಹೇಳಲು ನನಗೇನು ಹೆದರಿಕೆ ಆ ಮಹಾನ್ ನಾಯಕ ಡಿಕೆ ಶಿವಕುಮಾರ್ ಎಂಬು ಘಂಟಾಘೋಷವಾಗಿ ಹೇಳಿದರು.
ಯಾರು ತಪ್ಪು ಮಾಡಿದ್ದರೂ ಒದ್ದು ಒಳಗೆ ಹಾಕಬೇಕು. ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಮುಂದುವರಿಯಲು ನಾಲಾಯಕ್.. ನಾಣು ಗಂಡು.. ಆತ.. ವಾಗ್ದಾಳಿ ನಡೆಸಿ ಸುದ್ದಿಗೋಷ್ಠಿ ಕೊನೆ ಮಾಡಿದರು.