Murder: ATM ದೋಚಲು ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಬರ್ಬರ ಕೊಲೆ?

Suvarna News   | Asianet News
Published : Nov 23, 2021, 08:45 AM ISTUpdated : Nov 23, 2021, 09:08 AM IST
Murder: ATM ದೋಚಲು ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಬರ್ಬರ ಕೊಲೆ?

ಸಾರಾಂಶ

*ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳು *ಸೆಕ್ಯೂರಿಟಿ ಗಾರ್ಡ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ *ಹುಬ್ಬಳ್ಳಿ ಮೂಲದ ಸೆಕ್ಯೂರಿಟಿ ಗಾರ್ಡ್‌ ಬಸವರಾಜ  ಮೃತ ವ್ಯಕ್ತಿ

ಬಳ್ಳಾರಿ(ನ.23): ಎಟಿಎಂ ದೋಚಲು (ATM Robbery) ಬಂದಿದ್ದ ದುಷ್ಕರ್ಮಿಗಳಿಂದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್‌ (Security Guard) ಬರ್ಬರ ಕೊಲೆಯಾದ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ.  ಬಳ್ಳಾರಿ ಐಸಿಐಸಿಐ ಬ್ಯಾಂಕ್ ಸ್ಯೆಕ್ಯೂರಿಟಿ ಗಾರ್ಡ್ ಬಸವರಾಜ (Basavaraj) ಕೊಲೆಯಾದ ವ್ಯಕ್ತಿ. ಹುಬ್ಬಳ್ಳಿ ಮೂಲದ ಸೆಕ್ಯೂರಿಟಿ ಗಾರ್ಡ್‌ ಬಸವರಾಜ ಹತ್ತು ತಿಂಗಳ‌ ಹಿಂದೆ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು. ಬ್ಯಾಂಕ್‌ ಬಳಿ ಮಲಗಿದ್ದ ಬಸವರಾಜ್‌ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಪ್ರತಿಷ್ಠಿತ ರಾಯಲ್ ವೃತ್ತದ (Royal Circle) ಅನತಿ ದೂರದಲ್ಲಿ ಇರೋ ಬ್ಯಾಂಕ್ ಎಟಿಎಂ ಬಳಿ ಘಟನೆ ನಡೆದಿದ್ದು ಎಟಿಎಂ ಮತ್ತು ಐಸಿಐಸಿಐ ಬ್ಯಾಂಕ್ (ICICI Bank) ಅಕ್ಕಪಕ್ಕದಲ್ಲಿಯೇ ಇದೆ. ಎಟಿಎಂ ಪಕ್ಕದ‌ ಬ್ಯಾಂಕ್ ಸ್ಥಳದಲ್ಲಿ ಮಲಗಿಕೊಂಡಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸರ ತನಿಖೆ ಮುಂದುವರೆದಿದೆ. ದುಷ್ಕರ್ಮಿಗಳು ಬ್ಯಾಂಕ್ ಅಥವಾ ಎಟಿಎಂ ದರೋಡೆಗೆ ಬಂದಿದ್ದರಾ ಅಥವಾ ಅಥವಾ ಖಾಸಗಿ ವಿಚಾರದ ಮೇಲೆ ಬಸವರಾಜ ಕೊಲೆ ಮಾಡಿದ್ದಾರಾ ಎಂದು ಇನ್ನಷ್ಟೇ ತಿಳಿಯಬೇಕಿದೆ. ಮೃತ ಬಸವರಾಜ ಹುಬ್ಬಳ್ಳಿ ಮೂಲದವರಾಗಿದ್ದು 10 ತಿಂಗಳ ಹಿಂದಷ್ಟೇ ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದೆ.

ಪ್ರಿಯತಮನ ಜೊತೆ ಸೇರಿ ಗಂಡನ ಕೊಲೆಗೆ ಹೆಂಡ್ತಿ ಸ್ಕೆಚ್‌..!

ನಿದ್ದೆ ಮಾತ್ರೆ ಕೊಟ್ಟು ಪ್ರಿಯತಮನ ಜೊತೆ ಸೇರಿ ಗಂಡನ ಕೊಲೆಗೆ(Murder) ಪತ್ನಿ ಯತ್ನಿಸಿದ‌ಘಟನೆ ಯಾದಗಿರಿ(Yadgir) ಜಿಲ್ಲೆಯ ಸುರಪುರ ತಾಲೂಕಿನ ಹೂವಿನಹಳ್ಳಿಯಲ್ಲಿ ನ 18 ರಂದು ನಡೆದಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಅನೈತಿಕ ಸಂಬಂಧವನ್ನ(Illicit Relationship) ಮುಚ್ಚಿ ಹಾಕಲು ಪಾಪಿ ಹೆಂಡತಿ ತನ್ನ ಗಂಡನ ಕೊಲೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ. 

 ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು

ಚಂದ್ರಕಲಾ ಎಂಬಾಕೆಯೇ ತನ್ನ ಪ್ರಿಯತಮ ಬಸನಗೌಡ ಜೊತೆ ಸೇರಿ ಪತಿ ವಿಶ್ವನಾಥರಡ್ಡಿ ಕೊಲೆಗೆ ಯತ್ನಿಸಿದ್ದಾಳೆ. ಚಂದ್ರಕಲಾ ತನ್ನ ತಂಗಿಯ ಗಂಡನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ದೇವರ ಪ್ರಸಾದವೆಂದು ನಂಬಿಸಿ ನೀರಿನಲ್ಲಿ ನಿದ್ದೆ ಮಾತ್ರೆ(Sleeping Pill) ಪುಡಿ ಹಾಕಿದ್ದರು ಆರೋಪಿಗಳು(Accused). ಪತ್ನಿ ಕೊಟ್ಟ ನಿದ್ದೆ ಮಾತ್ರೆ ಸೇವಿಸಿ ‌ನಿದ್ದೆ ಮಾಡುವಾಗ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಕತ್ತು ಹಿಸುಕುವಾಗ ಎಚ್ಚರಗೊಂಡ ಪತಿ ವಿಶ್ವನಾಥರಡ್ಡಿ  ಮನೆಯಿಂದ ಪರಾರಿಯಾಗಿದ್ದಾನೆ. ಪರಾರಿಯಾಗುವ ಮುನ್ನ ತನ್ನ ಹೆಂಡತಿಯ ಪ್ರಿಯತಮನಿಗೆ ಥಳಿಸಿ(Assault) ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ತಂದೆತಾಯಿ ಇಲ್ಲದಾಗ ಯುವತಿ ನೇಣಿಗೆ ಶರಣು

ತಂದೆತಾಯಿ ಮನೆಯಲ್ಲಿ ಇಲ್ಲದಾಗ ಯುವತಿ ನೇಣಿಗೆ ಶರಣಾದ ಘಟನೆ ಸೋಲದೇವನಹಳ್ಳಿಯ ಚಿಕ್ಕಸಂದ್ರದಲ್ಲಿ  ನಡೆದಿದೆ. ನೇಣಿಗೆ ಶರಣಾದ ಯುವತಿಯನ್ನು 17 ವರ್ಷದ  ರಕ್ಷಿತಾ ಎಂದು ಗುರುತಿಸಲಾಗಿದೆ. ರಕ್ಷಿತಾ ಪ್ರತಿಷ್ಟಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ (PUC) ವ್ಯಾಸಂಗ ಮಾಡುತ್ತಿದ್ದರು. ಸೋಲದೇವನಹಳ್ಳಿಯ ವರಮಹಾಲಕ್ಷ್ಮಿ ಹಾಗೂ ಕೃಷ್ಣಪ್ಪ ದಂಪತಿಗಳ ಪುತ್ರಿ ರಕ್ಷಿತಾ.

ಮೃತ ಯುವತಿಯ ಟಿಕ್-ಟಾಕ್ ವಿಡಿಯೋಗಳು (Tik Tok videos) ಕೂಡ ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್ ವೈರಲ್ ಆಗಿವೆ. ಅಪ್ಪ-ಅಮ್ಮ ಮದುವೆಗೆಂದು ತೆರಳಿದ್ದಾಗ ಮನೆಯಲ್ಲಿ ರಕ್ಷಿತ ನೇಣಿಗೆ ಶರಣಾಗಿದ್ದಾರೆ. ಮರಣೋತ್ತರ ಪರೀಕ್ಷೆಗೆ ಯುವತಿ ಮೃತ ದೇಹ ಸಪ್ತಗಿರಿ ಆಸ್ಪತ್ರೆಗೆ (Saptagiri Hospital) ರವಾನೆ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ