.50 ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳಿಗೆ ಬೆಂಕಿ ಹಾಕಿರುವ ಘಟನೆ ಬಾರಸೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಬಾರಸೆ ಕೊಪ್ಪಲು ಗ್ರಾಮದ ರಾಜೆಅರಸ್ ಅವರ ಜಮೀನಿನಲ್ಲಿ ಘಟನೆ ನಡೆದಿದೆ.
ಮೈಸೂರು (ಜ.8) : ಕಿಡಿಗೇಡಿಗಳು .50 ಸಾವಿರ ಮೌಲ್ಯದ ದಿನಸಿ ಸಾಮಗ್ರಿಗಳಿಗೆ ಬೆಂಕಿ ಹಾಕಿರುವ ಘಟನೆ ಬಾರಸೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಬಾರಸೆ ಕೊಪ್ಪಲು ಗ್ರಾಮದ ರಾಜೆಅರಸ್ ಅವರ ಜಮೀನಿನಲ್ಲಿ ಘಟನೆ ನಡೆದಿದೆ. ಬೆಳತ್ತೂರು ಗ್ರಾಮದ ರೈತ ಪುರುಷೋತ್ತಮ ಕಳೆದ ಒಂದು ವರ್ಷಗಳ ಹಿಂದೆ ಬಾರಿಸೆ ಕೊಪ್ಪಲು ಗ್ರಾಮದಲ್ಲಿ ರಾಜೆ ಅರಸ್ ಎಂಬವರಿಗೆ ಸೇರಿದ ಜಮೀನನ್ನು ಕೃಷಿ ಮಾಡಲು ಗುತ್ತಿಗೆ ಪಡೆದು ಗುಡಿಸಿಲು ಹಾಕಿಕೊಂಡು ಅಲ್ಲೇ ವಾಸವಾಗಿದ್ದರು. ಅವರು ಇಲ್ಲದ ಸಮಯ ನೋಡಿಕೊಂಡು ಕಿಡಿಗೇಡಿಗಳು ಗುಡಿಸಿಲಿಗೆ ಬೆಂಕಿ ಹಚ್ಚಿದ್ದಾರೆ. ದವಸ, ಧಾನ್ಯ, ಪಾತ್ರೆಗಳು ಸುಟ್ಟು ಹೋಗಿವೆ. ಮೋಟಾರ್ ಹಾಗೂ ಪೈಪುಗಳನ್ನು ಕಳುವು ಮಾಡಿದ್ದಾರೆ. ಈ ಸಂಬಂಧ ರೈತ ಪುರುಷೋತ್ತಮ್ ಬೆಟ್ಟದಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.
Mangaluru Crime: ಲೈಂಗಿಕ ಕಿರುಕುಳ: ಯುವಕನ ವಿರುದ್ಧ ಪ್ರತ್ಯೇಕ ಕೇಸು
ಡ್ರಾಪ್ ಕೊಡುವ ನೆಪದಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿದ ಅಪರಿಚಿತರು
ಅಪರಿಚಿತರಿಬ್ಬರು ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಕಾರ್ಕಳ ಬಸ್ ನಿಲ್ದಾಣದ ಬಳಿ ನಡೆದಿದೆ. ರೆಂಜಾಳ ಗ್ರಾಮದ ಸುಧಾಕರ ಶೆಟ್ಟಿಚಿನ್ನಾಭರಣ ಕಳೆದುಕೊಂಡ ವ್ಯಕ್ತಿ. ಇವರು ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿದ್ದು, ಜ.4ರಂದು ಪೂಜಾ ಕಾರ್ಯಕ್ರಮದ ನಿಮಿತ್ತ ಊರಾದ ಕಾರ್ಕಳದ ರೆಂಜಾಳಕ್ಕೆ ಬಂದಿದ್ದರು. ಬಳಿಕ ಪೂಜಾ ಕಾರ್ಯ ಮುಗಿಸಿ, ಜ.5ರಂದು ರಾತ್ರಿ 10 ಗಂಟೆಗೆ ಮನೆಯಿಂದ ಹೊರಟು ಬೆಂಗಳೂರಿಗೆ ಹೋಗಲೆಂದು ಖಾಸಗಿ ಬಸ್‌ನ ಕಚೇರಿಗೆ ಬಂದಿದ್ದರು. ಬಸ್ ಬರಲು ತಡವಿದ್ದ ಕಾರಣ ಮದ್ಯ ಸೇವಿಸಲೆಂದು ಪಕ್ಕದಲ್ಲಿದ ಬಾರ್‌ಗೆ ಹೋಗಿದ್ದರು. ಅಲ್ಲಿಂದ ಅವರು ರಾತ್ರಿ 11.45ರ ಸುಮಾರಿಗೆ ತಾವು ಹೋಗಬೇಕಿದ್ದ ಬಸ್‌ನ ಕಚೇರಿಗೆ ಹೋಗುವ ಬದಲು ಕಾರ್ಕಳ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.
ಬಾಲಕಿ ಮೇಲೆ ಅತ್ಯಾಚಾರ ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿದ್ದ ಆರೋಪಿಗಳ ಬಂಧನ
ಈ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು, ನೀವು ಯಾವ ಕಡೆಗೆ ಹೋಗಬೇಕೆಂದು ಕೇಳಿ ಡ್ರಾಪ್ ಕೊಡುವುದಾಗಿ ಹೇಳಿದರು. ಸುಧಾಕರ ಶೆಟ್ಟಿಅವರಲ್ಲಿ ಯಾರಾದರು ನೋಡಿದರೆ ನಿಮ್ಮ ಚಿನ್ನ ಹಾಗೂ ಹಣವನ್ನು ಕಸಿಯಬಹುದು, ಜಾಗ್ರತೆಯಾಗಿ ಚೀಲದಲ್ಲಿ ಇಟ್ಟಿಕೊಳ್ಳಿ ಎಂದು ಆ ಅಪರಚಿತರು ಹೇಳಿದರು. ಇದಾಗಿ ಕೆಲ ಹೊತ್ತಿನ ಬಳಿಕ ಸುಧಾಕರ ಶೆಟ್ಟಿಮದ್ಯದ ನಶೆ ಇಳಿದ ಮೇಲೆ ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರ, ನವರತ್ನ ಉಂಗುರ ಸಹಿತ ಎರಡು ಉಂಗುರ ಹಾಗೂ ಜೇಬಿನಲ್ಲಿದ್ದ 1500 ರು. ನಗದು ಮತ್ತು ಮೊಬೈಲ್ ಕಳವಾಗಿತ್ತು. ಅಪರಿಚಿತರು ಸುಮಾರು 1,52,500 ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.